ಸ್ತನ ಕ್ಯಾನ್ಸರ್ ಜಾಗೃತಿಗೆ ಕೇರ್ ಹೆಲ್ತ್ ಯೋಜನೆ

Upayuktha
0


ಮಂಗಳೂರು: ಜಾಗತಿಕವಾಗಿ ಮಹಿಳೆಯರ ಪ್ರಮುಖ ಆರೋಗ್ಯ ಸಮಸ್ಯೆ ಎನಿಸಿದ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಬದ್ಧತೆಯನ್ನು ಕೇರ್ ಹೆಲ್ತ್ ಇನ್ಶೂರೆನ್ಸ್ ತಾಯಂದಿರ ದಿನದಂದು ಪ್ರಕಟಿಸಿದೆ.


ಸ್ತನ ಕ್ಯಾನ್ಸರ್ ಸಮಸ್ಯೆ ನಿಭಾಯಿಸುವಲ್ಲಿ ಆರಂಭಿಕ ಪತ್ತೆಯ ಅಗತ್ಯವನ್ನು ಗುರುತಿಸಿ, ಗುಣಮಟ್ಟದ ಆರೋಗ್ಯ ಸೌಲಭ್ಯ ಸುಲಭವಾಗಿ ಲಭ್ಯವಾಗುವಂತೆ ಮಾಡುವ ಉದ್ದೇಶದ ವಿಮಾ ಉತ್ಪನ್ನಗಳನ್ನು ಪರಿಚಯಿಸಲಾಗಿದೆ ಎಂದು ಕೇರ್ ಹೆಲ್ತ್ ಇನ್ಶೂರೆನ್ಸ್‍ನ ವಿತರಣೆ ವಿಭಾಗದ ಮುಖ್ಯಸ್ಥ ಅಜಯ್ ಷಾ ಹೇಳಿದ್ದಾರೆ.


ಆರಂಭಿಕ ಹಂತಗಳಲ್ಲಿ ಸ್ತನ ಕ್ಯಾನ್ಸರ್ ಅನ್ನು ಪರಿಣಾಮಕಾರಿಯಾಗಿ ಪತ್ತೆಹಚ್ಚಲು ಮತ್ತು ಎದುರಿಸಲು ಅಗತ್ಯವಿರುವ ಸಂಪನ್ಮೂಲಗಳು ಮತ್ತು ಬೆಂಬಲದೊಂದಿಗೆ ಮಹಿಳೆಯರನ್ನು ಸಶಕ್ತಗೊಳಿಸುವ ಗುರಿಯನ್ನು ಕೇರ್ ಹೆಲ್ತ್ ಹೊಂದಿದೆ. ರೋಗಿಗಳಿಗೆ ಆಸ್ಪತ್ರೆ ವಾಸದ ಅವಧಿಯ ಜತೆಗೆ ಆಸ್ಪತ್ರೆಗೆ ಸೇರುವ 30 ದಿನ ಮೊದಲು ಮತ್ತು ಆಸ್ಪತ್ರೆಯಿಂದ ಬಿಡುಗಡೆಯಾದ 60 ದಿನಗಳ ನಂತರದ ಸುರಕ್ಷೆಯನ್ನು ಒದಗಿಸುತ್ತದೆ ಮತ್ತು ಯಾವುದೇ ಕ್ಲೇಮ್ ಇಲ್ಲದ ಸಂದರ್ಭದಲ್ಲಿ ಬೋನಸ್‍ಗಳನ್ನು ನೀಡುತ್ತದೆ. ಆಯುಷ್‍ನಂತಹ ಪರ್ಯಾಯ ಚಿಕಿತ್ಸೆಗಳನ್ನು ಆಯ್ಕೆ ಮಾಡುವವರಿಗೆ ಕೂಡಾ ಉತ್ಪನ್ನಗಳು ಲಭ್ಯ ಇವೆ ಎಂದು ವಿವರಿಸಿದ್ದಾರೆ.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top