ಮಂಗಳೂರು: ಭಾರತದ ಅತಿದೊಡ್ಡ ಇಂಟಿಗ್ರೇಟೆಡ್ ಪವರ್ ಕಂಪನಿಗಳಲ್ಲಿ ಒಂದಾಗಿರುವ ಮತ್ತು ಎಲೆಕ್ಟ್ರಿಕ್ ವೆಹಿಕಲ್ (ಇವಿ) ಚಾಜಿರ್ಂಗ್ ಕ್ಷೇತ್ರದ ಪ್ರಮುಖ ಕಂಪನಿಯಾಗಿರುವ ಟಾಟಾ ಪವರ್ ಮಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ 220ಕ್ಕೂ ಅಧಿಕ ಚಾರ್ಜಿಂಗ್ ಪಾಯಿಂಟ್ ಆರಂಭಿಸುವ ಮೂಲಕ ಸುಸ್ಥಿರ ಚಲನಶೀಲತೆಗೆ ಕೊಡುಗೆ ನೀಡಿದೆ.
ಇಝಡ್ ಚಾರ್ಜ್ ಹೆಸರಿನ ಎಲ್ಲ ಚಾಜಿರ್ಂಗ್ ಪಾಯಿಂಟ್‍ಗಳು ಆರ್‍ಎಫ್‍ಐಡಿ ಕಾರ್ಡ್ ಮೂಲಕ ವಹಿವಾಟು ನಡೆಸಬಹುದಾದ ವ್ಯವಸ್ಥೆಯನ್ನು ಹೊಂದಿವೆ. ಯಾವುದೇ ತೊಂದರೆಯಿಲ್ಲದೆ ಗ್ರಾಹಕರು ಣಚಿಠಿ.ಛಿhಚಿಡಿge.go ಮೂಲಕ ನಿರರ್ಗಳವಾಗಿ ಮತ್ತು ಸುಲಭವಾಗಿ ಚಾಜಿರ್ಂಗ್ ಮಾಡಿಕೊಳ್ಳಬಹುದಾಗಿದೆ.
ಈ ಚಾಜಿರ್ಂಗ್ ಪಾಯಿಂಟ್‍ಗಳು ಬೆಂಗಳೂರು, ಮಂಗಳೂರು, ದಾವಣಗೆರೆ ಮತ್ತು ಮೈಸೂರು ನಡುವಿನ ಪ್ರಮುಖ ಹೆದ್ದಾರಿಗಳಲ್ಲಿ ಅನುಕೂಲಕರ ಸ್ಥಳದಲ್ಲಿ ಸೇವೆಗೆ ಸಿದ್ಧವಿದೆ ಮತ್ತು ಚಿಕ್ಕಮಗಳೂರು ಮತ್ತು ಕೊಡಗಿನಂತಹ ಜನಪ್ರಿಯ ಪ್ರವಾಸಿ ತಾಣಗಳಲ್ಲಿಯೂ ಸುಸ್ಥಿರ ಪರಿಹಾರಗಳನ್ನು ಒದಗಿಸುತ್ತಿದೆ ಎಂದು ಪ್ರಕಟಣೆ ಹೇಳಿದೆ.
ಜತೆಗೆ ತಾಜ್, ಪಾರ್ಕ್, ಒಬೆರಾಯ್, ಗೋಕುಲಂ ಹೋಟೆಲ್‍ಗಳು, ಟಾಟಾ ಕ್ರೋಮಾ ಮತ್ತು ತನಿಷ್ಕ್ ನಂತಹ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿಯೂ ಚಾರ್ಜರ್‍ಗಳನ್ನು ಸ್ಥಾಪಿಸಲಾಗಿದ್ದು, ಎಲೆಕ್ಟ್ರಿಕ್ ವಾಹನಗಳ ಬಳಕೆದಾರರಿಗೆ ಸುಲಭವಾಗಿ ಚಾಜಿರ್ಂಗ್ ಮಾಡುವ ಅವಕಾಶವನ್ನು ಒದಗಿಸುತ್ತದೆ. ಡೆಕಾಥ್ಲಾನ್ ಮತ್ತು ಟೈಟಾನ್‍ನಂತಹ ಘಟಕಗಳೊಂದಿಗೆ ಕೂಡ ಕಂಪನಿಯು ಸಹಯೋಗ ಮಾಡಿಕೊಂಡಿದ್ದು, ಕರ್ನಾಟಕದ ಇವಿ ಚಾಜಿರ್ಂಗ್ ಕ್ಷೇತ್ರದಲ್ಲಿ ತನ್ನ ಸ್ಥಾನವನ್ನು ಇನ್ನಷ್ಟು ಬಲಪಡಿಸಿಕೊಂಡಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ