ಮಂಗಳೂರು: ಮಂಗಳೂರಿನ ನೃತ್ಯ ಸಂಸ್ಥೆ ಗಾನ ನೃತ್ಯ ಅಕಾಡೆಮಿಯ ನಿರ್ದೇಶಕಿ ಗುರು ವಿದ್ಯಾಶ್ರೀ ರಾಧಾಕೃಷ್ಣ ಇವರ ಶಿಷ್ಯೆಯಾದ ಕುಮಾರಿ ಮಹತಿ ಪವನಾಸ್ಕರ್ ಇವರ ಭರತನಾಟ್ಯ ರಂಗಪ್ರವೇಶವು ಇದೇ ಭಾನುವಾರ 12ನೇ ತಾರೀಕಿನಂದು ಸಂಜೆ 5.30ಕ್ಕೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.
ಎಳವೆಯಿಂದಲೇ ಗುರು ವಿದ್ಯಾಶ್ರೀ ರಾಧಾಕೃಷ್ಣ ಇವರಲ್ಲಿ ನೃತ್ಯ ಕಲಿಕೆಯನ್ನು ಪ್ರಾರಂಭಿಸಿದ ಇವರು ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ಏಕ ವ್ಯಕ್ತಿ ಹಾಗೂ ಸಮೂಹ ನೃತ್ಯಗಳನ್ನು ನೀಡಿದುದಲ್ಲದೆ ಅನೇಕ ರಾಜ್ಯ ಹಾಗೂ ರಾಷ್ಟ್ರಮಟ್ಟದ ಬಹುಮಾನಗಳನ್ನು ಪಡೆದಿರುತ್ತಾರೆ.
ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ನಲ್ಲಿ 12ನೇ ತರಗತಿಯಲ್ಲಿ ಕಲಿಯುತ್ತಿರುವ ಈಕೆ ಶ್ರೀಮತಿ ಮಾಲಿನಿ ಹಾಗು ಹರೀಶ್ ಪಾವನಾಸ್ಕರ್ ಇವರ ಪುತ್ರಿ ಯಾಗಿದ್ದಾರೆ.
ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಗುರು ಶ್ರೀ ಉಳ್ಳಾಲ ಮೋಹನ್ ಕುಮಾರ್, ಶ್ರೀ ಹರಿನಾರಾಯಣದಾಸ ಆಸ್ರಣ್ಣ ಹಾಗೂ ಕಶೆಕೋಡಿ ಶ್ರೀ ಸೂರ್ಯನಾರಾಯಣ ಭಟ್ ಇವರು ಉಪಸ್ಥಿತರಿರುತ್ತಾರೆ.
ಉನ್ನತ ಮಟ್ಟದ ಹಿಮ್ಮೇಳ ಕಲಾವಿದರೊಂದಿಗೆ ಮೇಳೈಸುವ ಈ ಕಾರ್ಯಕ್ರಮಕ್ಕೆ ನಟುವಾಂಗದಲ್ಲಿ ಗುರು ವಿದ್ಯಾಶ್ರೀ ರಾಧಾಕೃಷ್ಣ, ಹಾಡುಗಾರಿಕೆಯಲ್ಲಿ ಅಂತರಾಷ್ಟ್ರೀಯ ಕಲಾವಿದರಾದ ಶ್ರೀ ಗೋಪಾಲಕೃಷ್ಣನ್ ಚೆನ್ನೈ, ಮೃದಂಗದಲ್ಲಿ ಕಾರ್ತಿಕೇಯನ್ ರಾಮನಾಥನ್ ಚೆನ್ನೈ, ವೀಣೆಯಲ್ಲಿ ಅನಂತರಾಮನ್ ಚೆನ್ನೈ ಹಾಗು ಕೊಳಲಿನಲ್ಲಿ ಶ್ರೀ ರಘುನಂದನ ಬೆಂಗಳೂರು ಸಹಕರಿಸಲಿದ್ದಾರೆ.
ಕಾರ್ಯಕ್ರಮವನ್ನು ಶ್ರೀಮತಿ ಸುಮಂಗಲಾ ರತ್ನಾಕರ್ ನಿರ್ವಹಿಸಲಿದ್ದು ಆಸಕ್ತರಿಗೆ ಮುಕ್ತ ಪ್ರವೇಶವಿದೆ ಎಂದು ನಿರ್ದೇಶಕಿ ವಿದ್ಯಾಶ್ರೀ ರಾಧಾಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ