ಮಂಗಳೂರು: ಅರಬ್ ಸಂಯುಕ್ತ ಸಂಸ್ಥಾನದ ಕನ್ನಡ ಸಂಘ ಅಲ್ ಐನ್ ಇದರ 21ನೇ ವಾರ್ಷಿಕೋತ್ಸವ ಅಲ್ ಐನ್‌ನ ಬ್ಲೂ ರಾಡಿಸನ್ಸ್ ಹೋಟೆಲ್‌ನಲ್ಲಿ ನಡೆಯಿತು. ಉದ್ಯಮಿಗಳಾದ ಜೋಸೆಫ್ ಮಥಾಯಸ್, ಹರೀಶ್ ಶೇರಿಗಾರ್, ಮಹಮ್ಮದ್ ಇಬ್ರಾಹಿಂ, ಜಾನ್ ಲ್ಯಾನ್ಸಿ ಡಿಸೋಜಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.
ಕರ್ನಾಟಕ ಸಂಘ ಶಾರ್ಜಾ ಪೂರ್ವಾಧ್ಯಕ್ಷ ಬಿ. ಕೆ.ಗಣೇಶ್, ಅಬುದಾಬಿ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಮನೋಹರ್ ತೋನ್ಸೆ, ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ್ ನಾಗರಾಜಪ್ಪ, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ಸತೀಶ್ ಪೂಜಾರಿ, ನೋವೆಲ್ ಡಿಅಲೈಡಾ, ಮಲ್ಲಿಕಾರ್ಜುನ ಗೌಡ, ಮನೋಹರ್ ಹೆಗ್ಡೆ ಇವರುಗಳನ್ನು ಗೌರವಿಸಲಾಯಿತು.
ಶ್ಯಾಮಲ ಗಣಪತಿ, ವಿಕಾಸ್ ಶೆಟ್ಟಿ ಮತ್ತು ಡಾ. ಪ್ರದೀಪ್‌ಚಂದ್ರ ಇವರುಗಳಿಗೆ ಕನ್ನಡ ಸಂಘ ಅಲ್ ಐನ್‌ನ ಸಾಧಕ ಪ್ರಶಸ್ತಿ ಹಾಗೂ ನಿಶ್ಚಲ್ ನಿತ್ಯಾನಂದ ಶೆಟ್ಟಿ ಮತ್ತು ಮಿತುಲ್ ವಸಂತ್ ಕುಮಾರ್ ಇವರುಗಳಿಗೆ ಆದರ್ಶ ವಿದ್ಯಾರ್ಥಿ ಪುರಸ್ಕಾರ ಪ್ರದಾನ ಮಾಡಲಾಯಿತು.
ಅಲ್ ಐನ್ ಹೈಸ್ಕೂಲ್‌ನ ಕನ್ನಡ ಅಧ್ಯಾಪಕಿ ರುಬೀನಾ ಮತ್ತು ಕನ್ನಡ ಪಾಠ ಶಾಲೆ ದುಬೈಯ ಶಿಕ್ಷಕಿಯರಿಗೆ ಗುರುವಂದನೆ ಸಲ್ಲಿಸಲಾಯಿತು. ಕಲಾ ನಿರ್ದೇಶಕ ಬಿ.ಕೆ. ಗಣೇಶ್ ರೈ, ಸಂಯೋಜಕ ರಮೇಶ್.ಕೆ.ಬಿ. ಉಪಸ್ಥಿತರಿದ್ದರು. ಮುಖ್ಯ ಸಂಘಟಕ ಯು.ಪಿ. ಹರೀಶ್ ಸ್ವಾಗತಿಸಿ, ರಮೇಶ್ ಕೆ.ಬಿ.ವಂದಿಸಿದರು. ಶ್ಯಾಮಲ, ಆಯಿಶಾ, ಸವಿತಾ ನಾಯಕ್, ಉಮ್ಮರ್ ಫಾರೂಕ್ ವಿವಿಧ ಕಾರ್ಯಕ್ರಮ ನಿರೂಪಿಸಿದರು.
ಕನ್ನಡ ಸಂಘ ಅಲ್ ಐನ್‌ನ ಸಂಘಟನೆಯ ಸದಸ್ಯರು ಹಾಗೂ ಮಕ್ಕಳಿಂದ ಸಾಂಸ್ಕೃತಿಕ ವೈಭವ, ಶರವ್ ಮತ್ತು ಆರ್ಯ ಇವರ ನಿರೂಪಣೆಯಲ್ಲಿ ಸಮಗ್ರ ಕರ್ನಾಟಕ ದರ್ಶನ ನೃತ್ಯ ರೂಪಕ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ