ಕಣಚೂರು ಆಯುರ್ವೇದ ಆಸ್ಪತ್ರೆ ವತಿಯಿಂದ ಹಲಸು ಹಬ್ಬದಲ್ಲಿ ಉಚಿತ ಚಿಕಿತ್ಸಾ ಶಿಬಿರ

Upayuktha
0


ಮಂಗಳೂರು: ಸಾವಯವ ಕೃಷಿಕ ಗ್ರಾಹಕರ ಬಳಗ (ರಿ) ಮಂಗಳೂರು ವತಿಯಿಂದ ಮಂಗಳೂರಿನ ಬಾಳ್ಳಂಬೆಟ್ಟು ಹಾಲ್ ನ ಸಭಾಂಗಣದಲ್ಲಿ ದಿನಾಂಕ ಮೇ 18 ಹಾಗೂ 19 ರಂದು ಹಲಸು ಹಬ್ಬವು ಬಹು ಯಶಸ್ವಿಯಾಗಿ ನಡೆಯಿತು.


ಟೌನ್ ಪ್ಲಾನಿಂಗ್ ಉಪನಿರ್ದೇಶಕ ಕೆ‌.ಸಿ ರಮೇಶ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಪ್ರದೀಪ್ ಕುಮಾರ್ ಕಲ್ಕೂರಾ, ಆಡೂರು ಕೃಷ್ಣ ರಾವ್, ಸಾವಯವ ಕೃಷಿಕ ಬಳಗ ಅಧ್ಯಕ್ಷ ಜಿ‌.ಆರ್. ಪ್ರಸಾದ್, ವೇದಂ ಆಸ್ಪತ್ರೆಯ ಮುಖ್ಯಸ್ಥ ಕಣಚೂರು ಆಯುರ್ವೇದ ಆಸ್ಪತ್ರೆಯ ಕಾಯ ಚಿಕಿತ್ಸಾ ವಿಭಾಗದ ಡಾ ಕೇಶವ ರಾಜ್ ಸಹಿತ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.


ವಿಶೇಷವಾಗಿ ತರಹೇವಾರಿ ಹಲಸುಗಳು, ಹಲಸಿನ‌ ಉತ್ಪನ್ನಗಳು, ಹಲಸಿನ ಖಾದ್ಯಗಳೂ ಅಲ್ಲದೆ ಮಾವು, ತರಕಾರಿ ಗಿಡಗಳ ಪ್ರದರ್ಶನ ಹಾಗೂ ಮಾರಾಟಗಳು ಇಲ್ಲಿ ಕಂಡು ಬಂದುವು.


ಇದೇ ವೇಳೆ ಕಣಚೂರು ಆಯುರ್ವೇದ ಆಸ್ಪತ್ರೆಯ ವತಿಯಿಂದ ವೇದಂ ಆರೋಗ್ಯ ಚಿಕಿತ್ಸಾಲಯದ ಸಹಯೋಗದಲ್ಲಿ ಬೃಹತ್ ಚಿಕಿತ್ಸಾ ಶಿಬಿರವೂ ಸಹ ಚಾಲನೆಗೊಂಡಿತು.


ನುರಿತ ವೈದ್ಯರು, ರಕ್ತ ತಪಾಸಣಾ ಸಿಬ್ಬಂದಿ ಸಹಿತ ನಡೆಸಲಾದ ಈ ಶಿಬಿರದಲ್ಲಿ ಸಾಮಾನ್ಯ  ತಪಾಸಣೆ, ರಕ್ತ ಛಾಪ, ರಕ್ತದ ಸಕ್ಕರೆ, ರಕ್ತ ಹೀನತೆ ಮುಂತಾದ ಪರೀಕ್ಷೆಗಳನ್ನೂ ನಡೆಸಲಾಯಿತು.


ಉಚಿತವಾಗಿ ಮೂಳೆ ಸಾಂದ್ರತೆ ಪರೀಕ್ಷೆಯನ್ನೂ ನಡೆಸಲಾಗಿದ್ದು ಅಗತ್ಯ ಉಳ್ಖವರಿಗೆ ಔಷಧ ವಿತರಿಸಲಾಯಿತು. ರೋಗಿಗಳಿಗೆ ಉಚಿತ ಔಷಧ ಹಾಗೂ ಮುಂದುವರಿಕೆಗಾಗಿ ಸಂಸ್ಥೆಯ ಆಸ್ಪತ್ರೆಯಲ್ಲಿ ಚಿಕಿತ್ಸಿಸುವ ಬಗ್ಗೆ ಸಲಹೆ ನೀಡಲಾಯಿತು.


ವೈದ್ಯಕೀಯ ನಿರ್ದೇಶಕ ಡಾ ಸುರೇಶ ನೆಗಳಗುಳಿ, ಕಾಯ ಚಿಕಿತ್ಸಾ ವಿಭಾಗದ  ಡಾ ಕೇಶವರಾಜ್, ಪಂಚಕರ್ಮ ವಿಭಾಗದ ಡಾ. ಕಾರ್ತಿಕ್, ಡಾ ರಾಜೇಶ್, ಡಾ ಅಂಜಲಿ  ಡಾ ಧನ್ಯಾ, ಡಾ ಅರುಣಾ, ಡಾ ಮೈನಾಜ್, ಡಾ ಚರಣ್ ಎಲಿಯಾಣ ಮತ್ತಿತರ ವೈದ್ಯರು ಸಹಕರಿಸಿದರು.


ರಕ್ತ ತಪಾಸಣೆ ಮತ್ತಿತರ ಪರೀಕ್ಷೆಗಳಲ್ಲಿ ಶಕೀರ್, ಮಹಮ್ಮದ್ ಅಝೀಮ್, ಫಾತುಮತ್ ತಾಯ್ಬಾ, ನುಸ್ರತ್, ರೆಹನಾ ಫಾತಿಮಾ, ರಾಶಿಕಾ, ಸಾನಿಯಾ, ಶ್ರಾವ್ಯಾ, ದೃಷ್ಯಾ, ರಕ್ಷಿತಾ, ದೀಕ್ಷಾ, ಹಬೀಬ್, ಪ್ರಭಾತ್ ಹಾಗೂ ಶ್ರುತಿ ಸಹಕರಿಸಿದರು. ನಾಲ್ಕುನೂರಕ್ಕೂ ಹೆಚ್ಚಿನ ಜನರು ಈ ಚಿಕಿತ್ಸಾ ಶಿಬಿರದ ಸದುಪಯೋಗ ಪಡೆದರು.


ಡಾ ಸುರೇಶ ನೆಗಳಗುಳಿ

ಸುಹಾಸ

ಬಜಾಲ್ ಪಕ್ಕಲಡ್ಕ ಮಂಗಳೂರು 575009


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top