(ಒಂದು ಲಘು ಶಾಪ ಬರಹ!!)
ಕನ್ನಡ ಬಾರದ ಕರ್ನಾಟಕದ ಸಚಿವರು ಶಾಪ ಕೊಡಲು ಎಳ್ಳು ನೀರು ಹಿಡಿದ ಕೈಯನ್ನು ಮೇಲಕ್ಕೆ ಎತ್ತುತ್ತಿದ್ದಾರೆ! ಭಾಷೆ, ನುಡಿ, ಸಾಹಿತ್ಯ, ಪುಸ್ತಕ, ಕನ್ನಡದ ಅಸ್ಮಿತೆಯನ್ನು ಎತ್ತಬೇಕಾದ ಕೈಯಲ್ಲಿ ಶಾಪೋದಕ ಹಿಡಿದಿದ್ದಾರೆ!!
ಶಾಪ ಕೊಡುವ ಎಚ್ಚರಿಕೆ ಕೊಟ್ಟಿದ್ದಾರೆ!! ಇನ್ನೊಂದೆರಡು ದಿನದಲ್ಲಿ ಶಾಪ ಕೊಡಲು ಮುಹೂರ್ತ ವಿಚಾರಿಸುತ್ತಿದ್ದಾರೆ ಅಂತ ವರದಿ ಇದೆ!!
ಈಗ ಒಂದು ಸಮಸ್ಯೆ ಆಗಿದೆ!!!
ಕನ್ನಡದಲ್ಲಿ ಹೇಗೆ ಏನು ಶಾಪ ಕೊಡಬೇಕು ಅನ್ನುವುದು ಕನ್ನಡ ಬಾರದ ಕನ್ನಡ ಶಾಪ ಸಚಿವರ ಶಾಪದ ಸಮಸ್ಯೆ!!!
***
ಶಾಪ ಸಮಸ್ಯೆಗೆ ಪರಿಹಾರವಾಗಿ ಒಂದು ಪ್ರಕಟಣೆ ಹೊರಡಿಸಲಾಗಿದೆ!!
ಹೇಗೆ? ಮತ್ತು ಏನು ಶಾಪ ಕೊಡಬಹುದು ಅಂತ ಓದುಗರು ತಕ್ಷಣ ಬರೆದು ಕಳಿಸಲು ಶಾಪ ಮತ್ತು ಸಂಸ್ಕೃತಿ ಇಲಾಖಾ ಪ್ರಕಟಣೆ ತಿಳಿಸಿದೆ!!!
.................. ಪ್ರಕಟಣೆ ...............
ಉತ್ತಮ ಶಾಪ ಬರಹಕ್ಕೆ ಸೂಕ್ತ ಬಹುಮಾನ (ಪುಸ್ತಕ ಹೊರತಾಗಿ!!) ಕೊಡಲಾಗುತ್ತದೆ!!
ಶಾಪ ನುಡಿ ಬರೆದು ಕೊಟ್ಟವರಿಗೆ ಯಾವುದೇ ಶಾಪ ತಟ್ಟದಂತೆ ಶಾಪ ಸಂದರ್ಭದಲ್ಲಿ ಬೇಡಿಕೊಳ್ಳಲಾಗುತ್ತದೆ. ಆದುದರಿಂದ ಶಾಪ ತಟ್ಟ ಬಾರದು ಎನ್ನುವ ಕಾರಣಕ್ಕಾದರೂ ಟ್ರೋಲಿಗರಿಗೆ 'ಏನು ಶಾಪ ಕೊಡಬಹುದು?' ಅನ್ನುವ ಒಂದು ವಾಕ್ಯವನ್ನಾದರೂ ಬರೆದು ಕಳಿಸಬಹುದು!!
ಆ ಮೂಲಕ ಶಾಪ ಮಂತ್ರಿಗಳ ಕೃಪಾ ಕಟಾಕ್ಷಕ್ಕೆ ಪಾತ್ರರಾಗಬಹುದು!!! ಶಾಪ ಕನ್ನಡ ಭಾಷೆಯಲ್ಲೇ ಇರಬೇಕು ಮತ್ತು ಅದನ್ನು ಶಾಪ ಸಚಿವರಿಗೆ ಅವರ ಭಾಷೆಗೆ ಭಾಷಾಂತರ ಮಾಡಿ ತಲುಪಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ!!!
ಶಾಪಗ್ರಸ್ಥರಾಗಿ ಪರಿತಪಿಸಬೇಡಿ!! ಕೂಡಲೇ ಶಾಪ ನುಡಿಯನ್ನು ಬರೆದು ಕಳಿಸಿ.
ಶಾಪ ಸರಳವಾಗಿ ಓದುವಂತೆ, ಉಚ್ಛರಿಸುವಂತೆ ಇರಲಿ. ಶಾಪ ಉಚ್ಛರಿಸುವಾಗ ಅಕ್ಷರ-ಅರ್ಥ ವ್ಯತ್ಯಾಸವಾಗಿ ಕೈ ಎತ್ತುವವರಿಗೇ ತಿರುಗು ಬಾಣ ಆಗಬಾರದು!!!
ನಿಗಮಾಧಿಕಾರಿಗಳು,
ಶಾಪ ಮತ್ತು ಸಂಸ್ಕೃತಿ ಇಲಾಖೆ,
ಶಾಪಗ್ರಸ್ತ ರಾಜ್ಯ.
**
ಮಾದರಿ ಶಾಪ:
ಮಾದರಿ ಶಾಪ ಒಂದು:
"ಟ್ರೋಲ್ ಮಾಡಿದವರಿಗೆ ಕನ್ನಡ ಮರೆತು ಹೋಗಿ, ಈ ರಾಜ್ಯದ ಶಿಕ್ಷಣ ಮಂತ್ರಿ ಆಗುವಂತೆ ಅಗಲಿ"
ಮಾದರಿ ಶಾಪ ಎರಡು: ------------
-------------
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ