"ಕಡಲ ಮಕ್ಕಳ ಚಿತ್ತ ಹಾಡಿಯತ್ತ"- ಶಿಬಿರ ಸಮಾರೋಪ

Upayuktha
0


ಮೈಸೂರು: ಮಂಗಳೂರು ವಿಶ್ವವಿದ್ಯಾನಿಲಯ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಮಂಗಳಗಂಗೋತ್ರಿ ಕೊಣಾಜೆ ಇವರ  ಸಮಾಜಕಾರ್ಯ ಗ್ರಾಮೀಣ ಅಧ್ಯಯನ ಶಿಬಿರವು‌ "ಕಡಲ ಮಕ್ಕಳ ಚಿತ್ತ ಹಾಡಿಯತ್ತ" ಶೀರ್ಷಿಕೆಯಡಿಯಲ್ಲಿ ಬುಧವಾರ ಉದ್ಘಾಟನೆಗೊಂಡಿದ್ದು, ಸೋಮವಾರ (ಮೇ 27)  ಬಸವನಗಿರಿ ಹಾಡಿಯ ಸರ್ಕಾರಿ ಬುಡಕಟ್ಟು ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. 


ಬಸವನಗಿರಿ ಹಾಡಿ 'ಎ' ಮುಖಂಡ ಜಿ.ಸ್ವಾಮಿ ಕಾರ್ಯಕ್ರಮದ ಸಮಾರೋಪ ಭಾಷಣವನ್ನಾಡಿದರು. ಶಾಲಾ ಮುಖ್ಯೋಪಾಧ್ಯಾಯ ಬಿ.ಕೆ.ನಂಜಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕ ಸುಂದರ್ ಮುಖ್ಯ ಅತಿಥಿಯಾಗಿ ಆಗಮಿಸಿದರು. 


ವಿದ್ಯಾರ್ಥಿನಿ ವಿಧಿಶ್ರೀ ಹಾಗೂ ಯಶಸ್ವಿನಿ ಶಿಬಿರದ ವರದಿಯನ್ನು ಹಾಗೂ ಸಮೀಕ್ಷಾ ವರದಿಯನ್ನು ವಾಚಿಸಿದರು. ಶಿಬಿರಾರ್ಥಿಗಳಾದ ಗೀತಾ, ನಾಗಶ್ರೀ, ಕೃತಿ, ನಿಶ್ಮಿತಾ ಮತ್ತು ಅನುಷಾ ಚಂದ್ರನ್ ತಮ್ಮ ಶಿಬಿರಾನುಭವವನ್ನು ತಿಳಿಸಿದರು.


ಕಾರ್ಯಕ್ರಮದಲ್ಲಿ ಹಾಡಿಯ ಕ್ರೀಡಾಕೂಟದ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಹಾಗೆಯೇ ವಿದ್ಯಾರ್ಥಿಗಳು ಬಸವನಗಿರಿ ಹಾಡಿಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣ, ಮದ್ಯಪಾನದ ಅರಿವನ್ನು ಮೂಡಿಸಲು ಬೀದಿ ನಾಟಕವನ್ನು ಮಾಡಿದರು.


ಕಾರ್ಯಕ್ರಮದಲ್ಲಿ 'ಎ' ಹಾಡಿಯ ಯಜಮಾನ ಮಹೇಶ್, ಚಕ್ಕೋಡನಹಳ್ಳಿ ಗ್ರಾಮ ಪಂಚಾಯತ್ ಸದಸ್ಯೆ ಲಕ್ಷ್ಮೀ, ಪಂಚಾಯತ್ ‌ಅಭಿವೃದ್ದಿ ಅಧಿಕಾರಿ ರವಿ, ಬಸವನಗಿರಿ ಹಾಡಿ ಯಜಮಾನ ವಿಠ್ಠಲ್ ನಣಚಿ, ಮಂಗಳೂರು ವಿ.ವಿ. ಸಮಾಜಕಾರ್ಯ ವಿಭಾಗದ ಉಪನ್ಯಾಸಕ ಡಾ.ಶರತ್, ಸಂಶೋಧನಾ ವಿದ್ಯಾರ್ಥಿ ಪ್ರಜ್ವಲ್ ಹಾಗೂ ವಿ.ವಿ.ಯ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ವಿಭಾಗದ ವಿದ್ಯಾರ್ಥಿನಿ ಲತಾ ಕುಮಾರಿ ಅತಿಥಿಗಳನ್ನು ಸ್ವಾಗತಿಸಿ, ಅನುಷಾ ಚಂದ್ರನ್ ವಂದಿಸಿದರು. ವಿದ್ಯಾರ್ಥಿ ವಿನ್ಯಾಸ್ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top