ಕಲೆಗಳನ್ನು ಆದರಿಸುವುದು ನಮಗೆ ಕರ್ತವ್ಯ: ಚಂದ್ರಶೇಖರ ಶೆಟ್ಟಿ

Upayuktha
0


ಮಂಗಳೂರು: ನಮ್ಮ ದೇಶೀಯ ಕಲೆಗಳೆಲ್ಲವೂ ವಿಶ್ವಖ್ಯಾತಿಯನ್ನು ಪಡೆದಿವೆ. ಯಕ್ಷಗಾನ, ಭಾರತನಾಟ್ಯ ಯಾವುದೇ ಇರಲಿ ಜಗತ್ತೇ ತಿರುಗಿ ನೋಡುವಂತೆ ಮಾಡಿದೆ ಎಂಬುದರಲ್ಲಿ ನಮಗೆ ಹೆಮ್ಮೆ ಇದೆ. ಯಾರನ್ನೂ ಕಲೆ ಬಿಟ್ಟಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಪ್ರತಿಯೊಬ್ಬನೂ ಪ್ರತಿಭಾನ್ವಿತನಿರುತ್ತಾನೆ. ಅವಕಾಶ-ಸಂದರ್ಭ ಒದಗಿದಾಗ ಆತನಲ್ಲಿನ ಸುಪ್ತ ಪ್ರತಿಭೆ ಅನಾವರಣಗೊಳಿಸುತ್ತದೆ. ಇಂತಹಾ ಕಲಾರಾಧನೆಯನ್ನು ಯಾರು ಮಾಡುತ್ತಾರೋ ಅವರನ್ನು ಬೆಂಬಲಿಸಿ ಆಧರಿಸುವುದರ ಅಗತ್ಯ ಇದೆ" ಎಂದು ಸಂಸ್ಕಾರ ಭಾರತಿಯ ರಾಜ್ಯಾಧ್ಯಕ್ಷ, ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ ಶೆಟ್ಟಿ ಹೇಳಿದರು. ಅವರು ಕದ್ರಿಯಲ್ಲಿ ನಡೆಯುತ್ತಿರುವ ಸರಯೂ ಸಪ್ತಾಹದ ಸಭಾ ಕಾರ್ಯಕ್ರಮದಲ್ಲಿ ಕಲಾವಿದರನ್ನು ಸನ್ಮಾನಿಸಿ ಮಾತನಾಡಿದರು.


ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ್ ಕಲ್ಕೂರರು ಸನ್ಮಾನ ನೆರವೇರಿಸಿದರು.


ಶರತ್ ಶೆಟ್ಟಿ ಪಡುಪಳ್ಳಿ, ಸಿ.ಎಸ್. ಭಂಡಾರಿ, ಸಂಜಯ ಕುಮಾರ್ ಶೆಟ್ಟಿ, ಗೋಣಿಬೀಡು, ಬೆಟ್ಟಂಪಾಡಿ ಸುಂದರ ಶೆಟ್ಟಿ, ಗಣೇಶಪುರ ಗಿರೀಶ್ ನಾವಡ, ಅಕ್ಷಯ ಸುವರ್ಣ, ಪ್ರತೀಕ್ ರಾಪ್, ಕೃತಿ, ನಿತ್ಯಶ್ರೀ, ಮಾ. ದೃಶಾಲ್ ಹಾಗೂ ಸರಯೂ ಕಲಾವಿದರು ಉಪಸ್ಥಿತರಿದ್ದರು.


ವೇಷಧಾರಿ- ಹಾಗೂ ಪ್ರಸಾದನ ಕಲಾವಿದ ಕೋಳ್ಯೂರು ಪ್ರಶಾಂತ್‌ರವರನ್ನು ಗೌರವಿಸಲಾಯಿತು ಪೇಜಾವರ ಸುಧಾಕರ ರಾವ್ ನಿರ್ವಹಿಸಿ, ಧನ್ಯವಾದವಿತ್ತರು. ಹರೀಶ್ ಶೆಟ್ಟಿಯವರ ಪ್ರಸಿದ್ಧ ಪ್ರಸಂಗ ತುಳುನಾಡ ಬಲಿಯೇಂದ್ರೆ (ತುಳು) ಪ್ರಸಂಗ ಪ್ರದರ್ಶಿಸಲ್ಪಟ್ಟಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
To Top