HSRP ನಂಬರ್ ಪ್ಲೇಟ್ ಇಲ್ಲದ ಸರಕಾರಿ ವಾಹನಗಳು

Upayuktha
0


HSRP ನಂಬರ್ ಪ್ಲೇಟ್ ಹಾಕಿಸಿಕೊಳ್ಳಲು ಗಡುವು ನೀಡಲಾಗಿದೆ. ಗಡುವಿನ ದಿನಾಂಕವೂ ಮುಗಿಯುತ್ತಾ ಬಂತು. ಅರ್ಧಕರ್ಧ ಜನ ಇನ್ನೂ ಈ HSRP ಪ್ಲೇಟ್‌ಗಳನ್ನು ತಮ್ಮ ಗಾಡಿಗಳಿಗೆ ಹಾಕಿಸಿಕೊಂಡಿಲ್ಲ ಅಂತ ಸರಕಾರದೊಳಗಿರುವವರು ಮಾಧ್ಯಮದ ಮುಂದೆ ಕಂಪ್ಲೇಂಟ್ ಮಾಡ್ತಾ ಇದಾರೆ.


ಹೊಸ ನಂಬರ್ ಪ್ಲೇಟ್ ಅರ್ಜಿ ನೊಂದಾಯಿಸಿದ ಕೆಲವರಿಗೆ ಇನ್ನೂ ನಂಬರ್ ಪ್ಲೇಟ್ ಬಂದಿಲ್ಲ.  


ಜನಸಾಮಾನ್ಯರಿಗೆ ಗಡುವು ನಿಗದಿಪಡಿಸಿದ ಸರ್ಕಾರ ತನ್ನ ಇಲಾಖೆಯ ವಾಹನಕ್ಕೆ ಯಾಕೆ HSRP ನಂಬರ್ ಪ್ಲೇಟ್ ಇನ್ನೂ ಅಳವಡಿಸಿಲ್ಲ?  ಅಳವಡಿಸುತ್ತಿಲ್ಲ. ಸರಕಾರಿ ವಾಹನಗಳಿಗೆ ಯಾರು ಹೊಸ HSRP ನಂಬರ್ ಪ್ಲೇಟ್ ಹಾಕಿಸಬೇಕು? ಇಲಾಖೆಯವರಾ? ಸಾರಥಿಗಳಾ? ಮಹಾರಥಿಗಳಾ? ಅಧಿಕಾರಿಗಳಾ? ಸರಕಾರಿ ವಾಹನಗಳ HSRP ನಂಬರ್ ಪ್ಲೇಟಿನ ಫೀಸ್ ಯಾರು ಕಟ್ಟಬೇಕು? ಗಡುವಿನೊಳಗೆ ಸರಕಾರಿ ವಾಹನಗಳಿಗೆ HSRP ನಂಬರ್ ಪ್ಲೇಟ್ ಹಾಕಿಸದಿದ್ದರೆ ಅದರ ದಂಡ ಯಾರು ಕಟ್ಟಬೇಕು? 


ಸರಕಾರ ಕಟಾಕಟ್ ಕಟಾಕಟ್ ಕಟಾಕಟ್ ಅಂತ ಬಾಕಿ ಇರುವ ಎಲ್ಲ ಸರಕಾರಿ ವಾಹನಗಳಿಗೆ HSRP ನಂಬರ್ ಪ್ಲೇಟ್ ಹಾಕಿಸಲಿ. ಹಾಕಿಸಿ ಮಾದರಿಯಾಗಲಿ.


(ಚಿತ್ರದಲ್ಲಿ ಕಾಣಿಸಿದ HSRP ನಂಬರ್ ಪ್ಲೇಟ್ ಇಲ್ಲದ ಕರ್ನಾಟಕ ಸರಕಾರದ ವಾಹನ ಕಂಡಿದ್ದು ದಿನಾಂಕ 28.07.2024 ರಂದು ಶಿರಸಿ- ಸಿದ್ದಾಪುರ ರಸ್ತೆಯಲ್ಲಿ. ಫೋಟೋ ಕೃಪೆ : ಶ್ರೀ ಅಶೋಕ್ ಎ.ಜಿ. ಹಳುವಳ್ಳಿ, ಕಳಸ)


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
To Top