ಹುಬ್ಬಳ್ಳಿ: ರಾಣಾ ಪ್ರತಾಪ್ ಜಯಂತಿ ಆಚರಣೆ

Upayuktha
0


ಹುಬ್ಬಳ್ಳಿ: ರಾಣಾ ಪ್ರತಾಪಸಿಂಹ ಅವರ ಜಯಂತಿಯನ್ನು ರಜಪೂತ ಲೋಹಾರ್ ಗಿನ್ನಿ ಸಮಾಜದ ವತಿಯಿಂದ ಇಲ್ಲಿನ ಮ್ಯಾದಾರ್ ಓಣಿಯಲ್ಲಿ ಆಚರಣೆ ಮಾಡಲಾಯಿತು. ಜಯಂತಿ ಅಂಗವಾಗಿ ರಾಣಾ ಪ್ರತಾಪ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಲಾಯಿತು. 


ಮುಖಂಡ ರಾಜು ನಾಯಕವಾಡಿ ಮಾತನಾಡಿ, ಸಮುದಾಯದವರೆಲ್ಲ ಒಗ್ಗಟ್ಟಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು. ಬಳಿಕ ಅನ್ನಸಂತರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಅನೂಪ ಬಿಜವಾಡ, ಶಂಕರ ರತನ್ ಚೌಹಾನ್, ವಿನಯ ಚೌಹಾನ್, ಅಶೋಕ ಸಾಳುಂಕೆ, ಮನು ಹೆಬ್ಬಾಳ್ಕರ್, ಶಾನಭಾಜ್ ನವಾಜ್, ಉಜ್ವಲ್ ಚೌಹಾನ್, ಕಿರಣ ಚೌಹಾನ್, ಮಹೇಶ ಬೆಳದಡಿ ಸೇರಿದಂತೆ ಮುಂತಾದವರು ಇದ್ದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top