ಮುಳ್ಳೇರಿಯ ಮಂಡಲ ಯುವವಿಭಾಗದ ನೇತೃತ್ವದಲ್ಲಿ
ಮುಳ್ಳೇರಿ: ಶ್ರೀರಾಮಚಂದ್ರಾಪುರ ಮಠದ ಪ್ರೇರಣಾ ತರಬೇತಿ ತಂಡ ಮತ್ತು ಮುಳ್ಳೇರಿಯ ಮಂಡಲ ಯುವ ವಿಭಾಗದ ನೇತೃತ್ವದಲ್ಲಿ ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠದಲ್ಲಿ ನಡೆಯಿತು.
ಸ್ವ-ಉದ್ಯೋಗ ನಡೆಸುತ್ತಿರುವ ಕನಕವಲ್ಲಿ ಬಡಗಮೂಲೆ ದೀಪಬೆಳಗಿಸಿ ಕಾರ್ಯಾಗಾರಕ್ಕೆ ಚಾಲನೆಯನ್ನು ನೀಡಿದರು. ಕರ್ನಾಟಕ ಬ್ಯಾಂಕ್ ಜನರಲ್ ಮೇನೇಜರ್ ರಾಜ ಬಿ.ಎಸ್. ಅತಿಥಿ ತರಬೇತುದಾರರಾಗಿ ಪಾಲ್ಗೊಂಡು ತಮ್ಮ ಅನುಭವವನ್ನು ಹಂಚಿಕೊಂಡರು. ಛಲದಿಂದ ಮುನ್ನಡೆದಾಗ ಮಾತ್ರ ಗುರಿಯನ್ನು ತಲುಪಲು ಸಾಧ್ಯವಿದೆ. ಇನ್ನೊಬ್ಬರ ಕೈಕೆಳಗೆ ದುಡಿಯದೆ ಇತರರಿಗೆ ಉದ್ಯೋಗವನ್ನು ನೀಡುವೆ ಎಂಬಂತೆ ಮುಂದುವರಿಯಬೇಕು. ಒಂದು ಉದ್ದಿಮೆಯನ್ನು ಪ್ರಾರಂಭಿಸುವ ಮೊದಲು ಅದರ ಸಾಧಕ ಬಾಧಕಗಳನ್ನು ತಿಳಿಯಬೇಕು. ಅತಿ ಹೆಚ್ಚು ಬೇಡಿಕೆಯಿರುವ ಉತ್ಪಗಳ ಬಗ್ಗೆ ಅರಿತು ಅದರ ಮಾರ್ಕೆಟಿಂಗ್ ಕುರಿತು ಅರಿತುಕೊಂಡಾಗ ಯಶಸ್ಸನ್ನು ಗಳಿಸಲು ಸಾಧ್ಯವಿದೆ ಎಂದರು.
ಮುಳ್ಳೇರಿಯ ಮಂಡಲ ಅಧ್ಯಕ್ಷ ಕೃಷ್ಣಮೂರ್ತಿ ಮಾಡಾವು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಾಮಂಡಲ ಯುವವಿಭಾಗ ಪ್ರಮುಖರಾದ ಕೇಶವಪ್ರಕಾಶ ಮುಣ್ಚಿಕ್ಕಾನ, ಪ್ರೇರಣಾ ತಂಡದ ಸಂಯೋಜಕರಾದ ಶ್ರೀಪ್ರಕಾಶ ಕುಕ್ಕಿಲ, ಬಾಲ ಎಸ್.ಭಟ್., ಶ್ರೀನಿಧಿ ಕುಕ್ಕಿಲ, ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ವ್ಯವಸ್ಥಾಪಕ ಜಯಪ್ರಕಾಶ ಪಜಿಲ, ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದ ಅಧ್ಯಕ್ಷರಾಗಿ ಮಹಾಮಂಡಲ ಮಂಗಳೂರು ಪ್ರಾಂತ್ಯ ಉಪಾಧ್ಯಕ್ಷರಾದ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ಅಥಿತಿಗಳಾಗಿ ಗೋಆಧಾರಿತ ಉದ್ದಿಮೆದಾರ ಸುಬ್ರಹ್ಮಣ್ಯ ಪ್ರಸಾದ ನೆಕ್ಕರೆಕಳೆಯ ಇವರು ಆಗಮಿಸಿದ್ದರು. ಮುಳ್ಳೇರಿಯ ಯುವ ವಿಭಾಗದ ಮಂಡಲ ಪ್ರಮುಖ ಶ್ರೀಶಕುಮಾರ ಪಂಜಿತ್ತಡ್ಕ, ವಿದ್ಯಾರ್ಥಿವಾಹಿನಿ ಪ್ರಧಾನ ಶ್ಯಾಮಪ್ರಸಾದ ಕುಳಮರ್ವ ನಿರೂಪಿಸಿದರು. ಮಂಡಲದ ವಿವಿಧ ವಲಯಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ