2023-24ರ ಸಿಬಿಎಸ್ಇ 10ನೇ ಮತ್ತು 12ನೇ ತರಗತಿಯ ಫಲಿತಾಂಶಗಳಲ್ಲಿ ಅಪ್ರತಿಮ ಸಾಧನೆ ಮಾಡಿದ ಆರ್ಕಿಡ್ಸ್ ಇಂಟರ್‌ನ್ಯಾಷನಲ್ ಸ್ಕೂಲ್, ಬೆಂಗಳೂರು ವಲಯ
● 10ನೇ ತರಗತಿಯ ಅದಿತ್ ಕುಮಾರ್ ಶೆಟ್ಟಿ, ಪ್ರವಲ್ಲಿಕಾ ಕರೆಡ್ಲಾ ಮತ್ತು ಮಾಝ್ ಪ್ರಜಾಪತಿ ಕ್ರಮವಾಗಿ 97.80%, 97.60% ಮತ್ತು 97% ಅಂಕಗಳನ್ನು ಗಳಿಸಿ ಸಾಧನೆ ಮಾಡಿದ್ದಾರೆ.
● 12ನೇ ತರಗತಿಯ ಪ್ರಜ್ಞಾನ್ ಶೆಟ್ಟಿ, ಜಯದೀಪ್ ಷಣ್ಮುಗಂ ಮತ್ತು ಸಾಯಿ ಕಪಿಲ್ ಭಾರದ್ವಾಜ್ ಯೆಡ್ಡನಪುಡಿ ಕ್ರಮವಾಗಿ 97%, 96.80% ಮತ್ತು 96.80% ಅಂಕ ಗಳಿಸಿದ್ದಾರೆ.
ಅದಿತ್ ಕುಮಾರ್ ಶೆಟ್ಟಿ ಪ್ರಜ್ಞಾನ್ ಪ್ರಸನ್ನ ಶೆಟ್ಟಿ
ಬೆಂಗಳೂರು: ಭಾರತದ ಪ್ರಮುಖ ಕೆ12 ಶಾಲಾ ಸರಣಿಯಾಗಿರುವ ಆರ್ಕಿಡ್ಸ್ ದಿ ಇಂಟರ್‌ನ್ಯಾಷನಲ್ ಸ್ಕೂಲ್, ಬೆಂಗಳೂರು ವಲಯವು ಸಿಬಿಎಸ್ಇ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಅತ್ಯುತ್ತಮ ಫಲಿತಾಂಶ ಪಡೆದು ಸಾಧನೆ ಮಾಡಿದೆ. ಜಾಲಹಳ್ಳಿಯ ಅದಿತ್ ಕುಮಾರ್ ಶೆಟ್ಟಿ, ಸರ್ಜಾಪುರದ ಪ್ರವಲ್ಲಿಕಾ ಕರೆಡ್ಲಾ ಮತ್ತು ಬಿಟಿಎಂ ಲೇಔಟ್ ಕ್ಯಾಂಪಸ್‌ನ ಮಾಝ್ ಪ್ರಜಾಪತಿ 10ನೇ ತರಗತಿ ಪರೀಕ್ಷೆಯಲ್ಲಿ ಕ್ರಮವಾಗಿ 97.80%, 97.60% ಮತ್ತು 97% ಅಂಕಗಳನ್ನು ಪಡೆದು ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ.
12ನೇ ತರಗತಿಯ ಪರೀಕ್ಷೆಯಲ್ಲಿ ಕನಕಪುರ ಕ್ಯಾಂಪಸ್‌ನ ಪ್ರಜ್ಞಾನ್ ಪ್ರಸನ್ನ ಶೆಟ್ಟಿ, ಜಯದೀಪ್ ಷಣ್ಮುಗಂ ಮತ್ತು ಸಾಯಿ ಕಪಿಲ್ ಭಾರದ್ವಾಜ್ ಯೆಡ್ಡನಪುಡಿ ಕ್ರಮವಾಗಿ 97%, 96.80% ಮತ್ತು 96.80% ಅಂಕಗಳನ್ನು ಗಳಿಸಿ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದ ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ.
ಬೆಂಗಳೂರಿನಲ್ಲಿರುವ ಆರ್ಕಿಡ್ಸ್ ದಿ ಇಂಟರ್‌ನ್ಯಾಷನಲ್ ಸ್ಕೂಲ್‌ನ 11 ಕ್ಯಾಂಪಸ್‌ಗಳಲ್ಲಿಯೂ 10ನೇ ತರಗತಿಯಲ್ಲಿ 100% ಫಲಿತಾಂಶ ದಾಖಲಾಗಿದೆ ಮತ್ತು 10 ವಿದ್ಯಾರ್ಥಿಗಳು ಗಣಿತ, ವಿಜ್ಞಾನ ಮತ್ತು ಸಮಾಜಶಾಸ್ತ್ರ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಗಳಿಸಿದ್ದಾರೆ. ಸಿವಿ ರಾಮನ್ ನಗರ, ಹೊರಮಾವು, ವೈಟ್‌ಫೀಲ್ಡ್, ಜಾಲಹಳ್ಳಿ, ಬಿಟಿಎಂ ಲೇಔಟ್, ಜೆಪಿ ನಗರ, ವಿಜಯನಗರ, ಕನಕಪುರ, ಮೈಸೂರು ರಸ್ತೆ, ಪಾಣತ್ತೂರು, ಸರ್ಜಾಪುರ ಕ್ಯಾಂಪಸ್‌ಗಳಿಂದ ಪರೀಕ್ಷೆಯಲ್ಲಿ ಭಾಗವಹಿಸಿದ ಒಟ್ಟು 490 ವಿದ್ಯಾರ್ಥಿಗಳಲ್ಲಿ ಶೇ.100 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕನಕಪುರ, ಬಿಟಿಎಂ ಲೇಔಟ್ ಮತ್ತು ಮೈಸೂರು ರಸ್ತೆ ಕ್ಯಾಂಪಸ್‌ನ ಒಟ್ಟು 96 ವಿದ್ಯಾರ್ಥಿಗಳು 12ನೇ ತರಗತಿ ಪರೀಕ್ಷೆ ಬರೆದಿದ್ದಾರೆ.
ಆರ್ಕಿಡ್ಸ್ ದಿ ಇಂಟರ್ ನ್ಯಾಷನಲ್ ಸ್ಕೂಲ್ ಸಿಬಿಎಸ್ಇ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರು
ಕ್ರಮ ಸಂಖ್ಯೆ ಕ್ಯಾಂಪಸ್ ವಿದ್ಯಾರ್ಥಿಯ ಹೆಸರು ಗಳಿಸಿದ ಒಟ್ಟು ಅಂಕಗಳು ಗಳಿಸಿದ % ಅಂಕಗಳು
1 ಓಐಎಸ್ ಜಾಲಹಳ್ಳಿ ಅದಿತ್ ಕುಮಾರ್ ಶೆಟ್ಟಿ 489 97.80%
2 ಓಐಎಸ್ ಸರ್ಜಾಪುರ ಪ್ರವಲ್ಲಿಕಾ ಕರೆಡ್ಲಾ 488 97.60%
3 ಓಐಎಸ್ ಬಿಟಿಎಂ ಮಾಝ್ ಪ್ರಜಾಪತಿ 485 97.00%
4 ಓಐಎಸ್ ಬಿಟಿಎಂ ರೋಹಿತ್ ಸಾಯಿ ಪಲ್ಲೆಂಪಾಟಿ 483 96.60%
5 ಓಐಎಸ್ ವೈಟ್ ಫೀಲ್ಡ್ ಆರ್ಯ ಪ್ರಮೋದ್ ಜಡ್ಯೆ 482 96.40%
6 ಓಐಎಸ್ ಬಿಟಿಎಂ ಇಷಾ ಕಬ್ರಾ 478 95.60%
7 ಓಐಎಸ್ ಕನಕಪುರ ರಸ್ತೆ ಆದಿಕೃಷ್ಣ ತ್ರಿಪಾಠಿ 477 95.40%
8 ಓಐಎಸ್ ಮೈಸೂರು ರಸ್ತೆ ಎಲ್ ಮೋಹಿತಾ 477 95.40%
9 ಓಐಎಸ್ ಸರ್ಜಾಪುರ ಶ್ರೇಯಸ್ ಅಯ್ಯರ್ 477 95.40%
10 ಓಐಎಸ್ ಜಾಲಹಳ್ಳಿ ಅಂಜಲಿ ಕುಮಾರಿ 476 95.20%
11 ಓಐಎಸ್ ಮೈಸೂರು ರಸ್ತೆ ಪ್ರಾಂಜಲ್ ಭಾರದ್ವಾಜ್ 476 95.20%
ಆರ್ಕಿಡ್ಸ್ ದಿ ಇಂಟರ್ ನ್ಯಾಷನಲ್ ಸ್ಕೂಲ್ ಸಿಬಿಎಸ್ಇ 12ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರು
ಕ್ರಮ ಸಂಖ್ಯೆ ಕ್ಯಾಂಪಸ್ ವಿದ್ಯಾರ್ಥಿಯ ಹೆಸರು ಗಳಿಸಿದ ಒಟ್ಟು ಅಂಕಗಳು ಗಳಿಸಿದ % ಅಂಕಗಳು ಅತಿ ಹೆಚ್ಚು ಅಂಕ ಗಳಿಸಿದ ವಿಷಯ (ಅಂಕದ ಜೊತೆಗೆ)
1 ಓಐಎಸ್ ಕನಕಪುರ ರಸ್ತೆ ಪ್ರಜ್ಞಾನ್ ಪ್ರಸನ್ನ ಶೆಟ್ಟಿ 485 97.00% ಮ್ಯಾತ್ಸ್ - 99, ಫಿಸಿಕ್ಸ್ -98, ಕೆಮಿಸ್ಟ್ರಿ- 98
2 ಓಐಎಸ್ ಕನಕಪುರ ರಸ್ತೆ ಜಯದೀಪ್ ಷಣ್ಮುಗಂ 484 96.80% ಮ್ಯಾತ್ಸ್ -98, ಕೆಮಿಸ್ಟ್ರಿ-96
3 ಓಐಎಸ್ ಕನಕಪುರ ರಸ್ತೆ ಸಾಯಿ ಕಪಿಲ್ ಭಾರದ್ವಾಜ್ ಯೆಡ್ಡನಪುಡಿ 484 96.80% ಕೆಮಿಸ್ಟ್ರಿ- 98
4 ಓಐಎಸ್ ಕನಕಪುರ ರಸ್ತೆ ಕೃಷ್ಣ ಸಾಯಿ ಶಿಶಿರ್ 481 96.20% ಮ್ಯಾತ್ಸ್-99, ಕೆಮಿಸ್ಟ್ರಿ-98
5 ಓಐಎಸ್ ಕನಕಪುರ ರಸ್ತೆ ಅರುಣಿಮ್ ಭಾರದ್ವಾಜ್ 478 95.60% ಫಿಸಿಕ್ಸ್-99
6 ಓಐಎಸ್ ಕನಕಪುರ ರಸ್ತೆ ಕುನಾಲ್ ಚಂದ್ರ 476 95.60% ಮ್ಯಾತ್ಸ್-98, ಕೆಮಿಸ್ಟ್ರಿ-96
7 ಓಐಎಸ್ ಕನಕಪುರ ರಸ್ತೆ ಕನಿಷ್ಕ್ ರವಿದೇಸಾಯಿ 475 95.00% ಫಿಸಿಕ್ಸ್-96, ಕೆಮಿಸ್ಟ್ರಿ-96
8 ಓಐಎಸ್ ಕನಕಪುರ ರಸ್ತೆ ಶ್ರೀಯಾ ವಿ ರೆಡ್ಡಿ 475 95.00% ಫಿಸಿಕ್ಸ್-100, ಕೆಮಿಸ್ಟ್ರಿ- 98
9 ಓಐಎಸ್ ಬಿಟಿಎಂ ಭರತ್ 479 95.80% ವಿಜ್ಞಾನ ವಿಭಾಗ (ಕೆಮಿಸ್ಟ್ರಿ- 100, ಮ್ಯಾತ್ಸ್-99)
10 ಓಐಎಸ್ ಬಿಟಿಎಂ ಮಾಳವಿಕಾ 463 92.60%-
11 ಓಐಎಸ್ ಮೈಸೂರು ರಸ್ತೆ ಸಂಧ್ಯಾ ಮೌರ್ಯ 463 92.60% ಕಾಮರ್ಸ್ (ಎಕಾನಾಮಿಕ್ಸ್ -95, ಬಿಸಿನೆಸ್ ಸ್ಟಡೀಸ್-95, ಅಕೌಂಟೆನ್ಸಿ-95)
ಈ ಕುರಿತು ಮಾತನಾಡಿದ ಆರ್ಕಿಡ್ಸ್ ದಿ ಇಂಟರ್‌ನ್ಯಾಷನಲ್ ಸ್ಕೂಲ್ ನ ವಿಪಿ ಅಕಾಡೆಮಿಕ್ಸ್- ಓಸಿಎಫ್‌ಪಿ ಶ್ಲೋಕ್ ಶ್ರೀವಾಸ್ತವ್, "ಆರ್ಕಿಡ್ಸ್ ದಿ ಇಂಟರ್‌ನ್ಯಾಷನಲ್ ಸ್ಕೂಲ್ ನ ಅಪ್ರತಿಮ ಸಾಧನೆಯ ಸದ್ದು ಬೆಂಗಳೂರಿನ ತುಂಬಾ ಪ್ರತಿಧ್ವನಿಸಿದೆ. 10ನೇ ತರಗತಿಯಲ್ಲಿ 11 ಕ್ಯಾಂಪಸ್ ಗಳಲ್ಲಿಯೂ 100% ಫಲಿತಾಂಶ ಸಾಧಿಸಿದ್ದೇವೆ. ವಿದ್ಯಾರ್ಥಿಗಳು ಗಣಿತ, ವಿಜ್ಞಾನ ಮತ್ತು ಸಾಮಾಜಿಕ ಅಧ್ಯಯನಗಳಂತಹ ವಿಷಯಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ್ದಾರೆ. ಅತ್ಯುತ್ತಮ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂದನೆಗಳು" ಎಂದರು.
ವಿದ್ಯಾರ್ಥಿಗಳ ಸಾಧನೆಗಳ ಕುರಿತು ಮಾತನಾಡಿದ ಬೆಂಗಳೂರಿನ ಆರ್ಕಿಡ್ಸ್ ದಿ ಇಂಟರ್‌ನ್ಯಾಷನಲ್ ಸ್ಕೂಲ್‌ನ ಹಿರಿಯ ವಿಪಿ ಅಕಾಡೆಮಿಕ್ಸ್ ಸಕೀನಾ ಖಾಸಿಮ್ ಜೈದಿ, “ಸಿಬಿಎಸ್‌ಇ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಅದ್ಭುತ ಸಾಧನೆ ಮಾಡಿದ ನಮ್ಮ ವಿದ್ಯಾರ್ಥಿಗಳ ಬಗ್ಗೆ ನಮಗೆ ಹೆಮ್ಮೆ ಇದೆ. ವಿದ್ಯಾರ್ಥಿಗಳು ಅದ್ಭುತ ಸಾಧನೆ ಮೆರೆದಿದ್ದಾರೆ. ಆರ್ಕಿಡ್ಸ್ ಇಂಟರ್‌ನ್ಯಾಷನಲ್ ಸ್ಕೂಲ್‌ನ 10ನೇ ತರಗತಿಯ ಸುಮಾರು 14.85% ವಿದ್ಯಾರ್ಥಿಗಳು 90%ಗಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ ಮತ್ತು 4.33%ರಷ್ಟು ವಿದ್ಯಾರ್ಥಿಗಳು 95%ಗಿಂತ ಹೆಚ್ಚು ಅಂಕ ಗಳಿಸಿದ್ದಾರೆ” ಎಂದು ಹೇಳಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ