
ಉಡುಪಿ: ಮಣಿಪಾಲದ ಮಾಧವ ಕೃಪಾ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯಲ್ಲಿ ಕಳೆದ ಶೈಕ್ಷಣಿಕ ವರುಷದಲ್ಲಿ (2022) ಪ್ರಪ್ರಥಮ ಬಾರಿಗೆ ಮಾನವಿಕ ಶಾಸ್ತ್ರ ವಿಭಾಗವನ್ನು 11 ಮತ್ತು 12 ನೇ ತರಗತಿಯನ್ನು ಪ್ರಾರಂಭಿಸುವುದರ ಮೂಲಕ ಉಡುಪಿ ಜಿಲ್ಲೆ ಗೆ ಮಾದರಿ ಅನ್ನುವಂತೆ ಮೊದಲ ದಿಟ್ಟ ಹೆಜ್ಜೆ ಇಟ್ಟ ಕೀರ್ತಿ ಮಾಧವ ಕೃಪಾ ಆಂಗ್ಲ ಮಾಧ್ಯಮ ಸ್ಕೂಲ್ ಗೆ ಸಲ್ಲಬೇಕು.
ಅದೇ ಪ್ರಥಮ ತಂಡದ ವಿದ್ಯಾರ್ಥಿಗಳು ಈ ಬಾರಿಯ 12 ಗ್ರೇಡ್ (ದ್ವಿತೀಯ ಪಿ.ಯು) ಪರೀಕ್ಷೆಯಲ್ಲಿ ನೂರಕ್ಕೆ ನೂರು ಫಲಿತಾಂಶ ಸಾಧಿಸುವುದರೊಂದಿಗೆ ಇದೇ ವಿಭಾಗದ ಪ್ರಹ್ಲಾದ್ ಮಧುಸೂದನ್ ಶೇ.96.8.ರಷ್ಟು ಅಂಕ ಗಳಿಸುವುದರೊಂದಿಗೆ ಅದೇ ಶಾಲೆಯ ಸೈನ್ಸ್ ಕಾಮಸ೯ ವಿಭಾಗವನ್ನು ಮೀರಿ ಹೆಚ್ಚಿನ ಅಂಕಗಳಿಸುವುದರೊಂದಿಗೆ ಮಾನವಿಕ ಶಾಸ್ತ್ರ ವಿಭಾಗದಲ್ಲಿ ಉಡುಪಿ ಜಿಲ್ಲೆಯಲ್ಲಿಯೇ ಹೊಸ ದಾಖಲೆಯನ್ನು ಬರೆದ ಕೀರ್ತಿ ಪ್ರಹ್ಲಾದ್ ನಿಗೆ ಸಂದಿದೆ.
ಮುಂದಿನ ಉನ್ನತ ಶಿಕ್ಷಣಕ್ಕಾಗಿ ಆಸ್ಟ್ರೇಲಿಯಾದ ಪ್ರತಿಷ್ಠಿತ ವಿಶ್ವ ವಿದ್ಯಾಲಯದ ಕಾಲೇಜಿನಲ್ಲಿ ಅಧ್ಯಯನಕ್ಕೆ ಪ್ರವೇಶಾತಿಯ ನಿರೀಕ್ಷೆಯಲ್ಲಿ ಇದ್ದಾನೆ. ಉನ್ನತ ಪದವಿ ಶಿಕ್ಷಣಕ್ಕಾಗಿ ಸೈಕಾಲಜಿ ಮತ್ತು ರಾಜ್ಯ ಶಾಸ್ತ್ರ ವಿಷಯಗಳ ಆಯ್ಕೆ ಮೇಲೆ ಹೆಚ್ಚಿನ ಆಸಕ್ತಿ ತೇೂರಿದ್ದಾನೆ. ಮಾತ್ರವಲ್ಲ ವಿದೇಶದಲ್ಲಿ ಶಿಕ್ಷಣ ಪಡೆದರೂ ತನ್ನ ವೃತ್ತಿ ಬದುಕನ್ನು ಭಾರತದಲ್ಲಿ ಮುನ್ನಡೆಸುವ ಬಯಕೆ ವ್ಯಕ್ತ ಪಡಿಸಿದ್ದಾನೆ.ಮಾನವಿಕ ಶಾಸ್ತ್ರ ಆಯ್ಕೆ ಮಾಡಿಕೊಳ್ಳ ಬಯಸುವ ವಿದ್ಯಾರ್ಥಿಗಳಿಗೆ ಪ್ರಹ್ಲಾದ್ ಮಧುಸೂದನ್ ಮಾದರಿ ಅನ್ನುವಂತೆ ತನ್ನ ಸಾಧನೆಯನ್ನು ಮೂಡಿಸಿದ್ದಾನೆ.
ಸಾಮಾಜಿಕ ಕಾಳಜಿ ಹೊಂದಿರುವ ಪ್ರಹ್ಲಾದ್ ತನ್ನ ಅಧ್ಯಯನ ಸಂದರ್ಭದಲ್ಲಿ ಸಮಾನ ಮನಸ್ಕ ವಿದ್ಯಾರ್ಥಿಗಳ ತಂಡವನ್ನು ರಚಿಸಿ ಕೊಂಡು ಬಡ ವಲಸೆ ಕಾಮಿ೯ಕರ ಮಕ್ಕಳಿಗೆ ಇಂಗ್ಲಿಷ್ ಭಾಷೆ ಕಲಿಸುವ ಕಾರ್ಯಕ್ರಮವನ್ನು ಆಲೆವೂರು ಸುತ್ತ ಮುತ್ತ ಹಮ್ಮಿಕೊಂಡು ತನ್ನ ಸಾಮಾಜಿಕ ಕಾಳಜಿಯನ್ನು ಬಿಂಬಿಸಿದನ್ನು ಇಂದಿಗೂ ನೆನಪಿಸ ಬಹುದು. ಇದು ನಮ್ಮ ಎಲ್ಲಾ ವಿದ್ಯಾರ್ಥಿಗಳ ಪಾಲಿಗೆ ಆದರ್ಶಪ್ರಾಯ ನಡೆ.
ನನಗೆ ಕೇವಲ ಒಂದು ವರುಷ ಮಾತ್ರ ಇಂತಹ ಆದಶ೯ ಪ್ರಾಯ ನಡೆ ನುಡಿ ಸಾಧನೆಯ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಅವಕಾಶ ಕೂಡಿ ಬಂದಿತ್ತು ಅನ್ನುವುದು ಕೂಡಾ ನನ್ನ ಪಾಲಿಗೆ ಅತ್ಯಂತ ಕುಶಿ ಕೊಡುವ ಸಂದರ್ಭ ಅನ್ನುವುದನ್ನು ಸದಾ ಸ್ಮರಿಸುತ್ತೇನೆ. ಈ ಎಲ್ಲಾ ಪ್ರೀತಿ ಗೌರವ ಅಭಿಮಾನ ಸಾಧನೆಗಳ ಸವಿನೆನಪಿನ ದ್ಯೋತಕವಾಗಿ ಸಾಧಕ ವಿದ್ಯಾರ್ಥಿಪ್ರಹ್ಲಾದ್ ನ ತಂದೆ ಪ್ರೊ.ಡಾ.ಮಧುವೀರ ರಾಘವನ್, ಪ್ರೊ.ವೈಸ್ ಚಾನ್ಸಲರ್ ಮಾಹೆ ಮಣಿಪಾಲ್ ಇವರು ಸವಿನೆನಪಿನ ಗುರುವಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೃತಜ್ಞತೆ ಸಲ್ಲಿಸಿದರು.
- ಪ್ರೊ.ಕೊಕ್ಕರ್ಣೆ ಸುರೇಂದ್ರ ನಾಥ ಶೆಟ್ಟಿ ಉಡುಪಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ