ಮಂಗಳೂರು: ನಾಟ್ಯಾಲಯ ಉರ್ವ (ರಿ) ಮಂಗಳೂರು ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ ಭರತನಾಟ್ಯ ವಿದ್ವತ್ ಪಠ್ಯ ಪದ್ಧತಿಯಲ್ಲಿ ಪ್ರಧಾನವಾಗಿ ಬರುವ ನಾಯಕ- ನಾಯಿಕಾ ಭಾವ ಹಾಗೂ ರಸಭಾವ ವಿಷಯದ ಎರಡು ದಿನಗಳ ಕಾರ್ಯಾಗಾರವನ್ನು ಸಂಪನ್ಮೂಲ ವ್ಯಕ್ತಿಯಾಗಿರುವ ಹುಬ್ಬಳ್ಳಿಯ ಡಾ.ಸಹನಾ ಪ್ರದೀಪ್ ಭಟ್ ಉದ್ಘಾಟಿಸಿದರು.
ಸಂಯೋಜಕಿ ಕಲಾಶ್ರೀ ಗುರು ವಿದುಷಿ ಕಮಲಾ ಭಟ್, ವಿದುಷಿ ಪ್ರತಿಮಾ ಶ್ರೀಧರ್, ವಿದುಷಿ ವಿನಯ ರಾವ್, ಸುನೀತಾ ಉಪಾಧ್ಯಾಯ ಬಪ್ಪನಾಡು, ಕಲಾ ಸಂಘಟಕ ಶ್ರೀಧರ ಹೊಳ್ಳ ಮೊದಲಾದವರು ಉಪಸ್ಥಿತರಿದ್ದರು. ನಗರದ ಸುಮಾರು 35 ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಂಡರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ