ಕುಂಕುಮಾರ್ಚನೆ, ಉಡಿ ತುಂಬುವ ಕಾರ್ಯಕ್ರಮ
ಹುನಗುಂದ: ಪಟ್ಟಣದ ನಗರೇಶ್ವರ ದೇವಸ್ಥಾನದಲ್ಲಿ ಆರ್ಯವೈಶ್ಯ ಸಮಾಜ ಬಾಂಧವರಿಂದ ಶುಕ್ರವಾರ ಕನ್ನಿಕಾ ಪರಮೇಶ್ವರಿ ಜಯಂತೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಕುಂಕುಮಾರ್ಚನೆ ನೆರವೇರಿಸಿ ಮುತ್ತೈದೆಯರಿಗೆ ಉಡಿ ತುಂಬುವ ಮೂಲಕ ಆಚರಿಸಲಾಯಿತು.
ಜಯಂತೋತ್ಸವ ನಿಮಿತ್ತ ದೇವಸ್ಥಾನ ತಳಿರು ತೋರಣ ಕಟ್ಟಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾ ಗಿತ್ತು. ಬೆಳಗ್ಗೆ 5:00 ಗಂಟೆಯಿಂದ ದೇವಸ್ಥಾನದಲ್ಲಿ ವಿವಿಧ ಪೂಜಾ ಧಾರ್ಮಿಕ ಕೈಂಕರ್ಯ ಜರುಗಿದವು. ಬೆಳಗ್ಗೆ 6:00 ಗಂಟೆಗೆ ಕನ್ನಿಕಾ ಪರಮೇಶ್ವರಿ ಮೂರ್ತಿಗೆ ಅಲಂಕಾರ, ದೇವಿಯ ಅಷ್ಟೋತ್ತರ ಪಾರಾಯಣ, ಸಹಸ್ರನಾಮಾವಳಿ ಸಹಿತ ಕುಂಕುಮಾರ್ಚನೆ, ಪುಷ್ಪಾರ್ಚನೆ, ಮಂಗಳಾರತಿ, ಮಹಾ ಮಂಗಳಾರತಿ, ಮಂತ್ರ ಪುಷ್ಪ, ತೀರ್ಥ ಪ್ರಸಾದ ವಿನಿಯೋಗಿಸಲಾಯಿತು. ಇದೇ ವೇಳೆ ಜನಾದ್ರಿ ಕುಟುಂದವರು ಸಮಾಜದವರಿಗೆ ಕುಂಕುಮಾರ್ಚನೆ ಮಾಡಿದರು. ಹಾಗೂ ಡಾ. ಶಿವಶಂಕರ ಮುದಗಲ್ ಇವರಿಂದ 108 ಬಳಿಗಳನ್ನು ಸೇವೆ ಮಾಡಿದರು.
ಸಮಾಜದ ಪ್ರಮುಖರಾದ ಸತ್ಯನಾರಾಯಣ ಜನಾದ್ರಿ, ಮುತ್ತಣ್ಣ ಮುದಗಲ್, ಸಂಗಮೇಶ್ವರ ಓಬಳ್ಳೆಪ್ಪನವರ, ವಾಸು ಹಳ್ಳಿಕೇರಿ, ಭಕ್ತಪ್ರಹ್ಲಾದ ಜನಾದ್ರಿ, ವೆಂಕಟೇಶ ಜನಾದ್ರಿ, ರಾಜಶೇಖರ ಜನಾದ್ರಿ, ಗಜೇಂದ್ರ ಜನಾದ್ರಿ, ಶ್ರೀಕಾಂತ ಜನಾದ್ರಿ, ವಿನಾಯಕ ಜನಾದ್ರಿ, ಮಯೂರ ಜನಾದ್ರಿ, ವೀರೇಶ ಮುದಗಲ್ಲ ಸೇರಿದಂತೆ ಅನೇಕರು ಇದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ