ಆಳ್ವಾಸ್ ಎಸ್ಥೆಟಿಕ್ ರಿಜುವನೇಶನ್ ಸೆಂಟರ್ ಉದ್ಘಾಟನೆ

Upayuktha
0


ಮೂಡುಬಿದಿರೆ: ಸೌಂದರ್ಯವರ್ಧಕ ಚಿಕಿತ್ಸಾಲಯಗಳು ಈ ಕಾಲದ ಪ್ರತಿಯೊಬ್ಬರ  ಕನಿಷ್ಠ ಅಗತ್ಯೆಯೆ ಹೊರತು ಐಷಾರಾಮಿ ಜೀವನ ಪದ್ದತಿಯಲ್ಲ ಎಂದು ಮುಂಬೈನ ಖ್ಯಾತ ಡೆರ್ಮಟೊ ಕಾಸ್ಮಟಾಲಜಿಸ್ಟ್ ಡಾ ದೀಪಿಕಾ ಶೆಟ್ಟಿ ತಿಳಿಸಿದರು.


ಅವರು ಆಳ್ವಾಸ ಶಿಕ್ಷಣ ಪ್ರತಿಷ್ಠಾನದಿಂದ ಮೂಡುಬಿದಿರೆ ಆಳ್ವಾಸ್ ಹೆಲ್ತ್ ಸೆಂಟರ್ ಪಕ್ಕದಲ್ಲಿ ನೂತನವಾಗಿ ಪ್ರಾರಂಭಗೊಂಡ ಆಳ್ವಾಸ್ ಎಸ್ಥೆಟಿಕ್ ರಿಜುವನೇಶನ್ ಸೆಂಟರ್‌ನ್ನು ಉದ್ಘಾಟಿಸಿ ಮಾತನಾಡಿದರು. 


ಇಂದು ಪ್ರತಿಯೊಬ್ಬರು ತಮ್ಮ ತ್ವಚೆಗೆ ಹಾಗೂ ಬಾಹ್ಯ ಸೌಂದರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದು,  ಇಂತಹ ವೈಯಕ್ತಿಕ ಯೋಗ ಕ್ಷೇಮದ ಸೇವೆಯನ್ನು ನೀಡುವ ಚಿಕಿತ್ಸಾಲಯಗಳು ಈ ಕಾಲದ ಮೂಲಭೂತ ಅಗತ್ಯಗಳಾಗಿ ಮಾರ್ಪಟ್ಟಿವೆ. ತಾನು 3 ದಶಕಗಳ ಹಿಂದೆ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಾಗ ಸಂಶಯ ದೃಷ್ಟಿಯಿಂದ ನೋಡಿದವರು ಹೆಚ್ಚೇ ಹೊರತು, ಬೆಂಬಲ ನೀಡಿದವರು ಕಡಿಮೆ. ಆದರೆ ಇಂದು ಈ ಕ್ಷೇತ್ರದ ಸೇವೆ ಮಹಿಳೆಯರಿಗೆ ಮಾತ್ರವಲ್ಲದೇ  ಪುರುಷರಿಗೂ ಅಗತ್ಯವೆನ್ನುವಷ್ಟು ಬೆಳೆದಿದೆ ಎಂದ ಹರ್ಷ ವ್ಯಕ್ತ ಪಡಿಸಿದರು. ತ್ವರಿತಗತಿಯಲ್ಲಿ ಬೆಳೆಯುತ್ತಿರುವ ಮೂಡುಬಿದಿರೆಯ ಪಟ್ಟಣಕ್ಕೆ ಇಂತಹ ಸೌಂದರ್ಯವರ್ಧಕ ಚಿಕಿತ್ಸಾಲಯಗಳ ಅಗತ್ಯ  ಹೆಚ್ಚಿದೆ. ಆಳ್ವಾಸ್ ಸಂಸ್ಥೆ ಆರಂಭಿಸಿರುವ ಈ ನೂತನ ಸಂಸ್ಥೆ ಆ ಕೊರತೆಯನ್ನು ನೀಗಿಸಲಿ ಎಂದರು.   

 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉದ್ಯಮಿ ಶ್ರೀಪತಿ ಭಟ್, ಮೂಡುಬಿದಿರೆಯಲ್ಲಿ ಸೌಂದರ್ಯ ಪ್ರಜ್ಞೆಗೆ ಹೊಸ ಪರಿಭಾಷೆ ಬರೆದವರು ಡಾ ಎಂ ಮೋಹನ ಆಳ್ವರು.  ಅವರ ಸೌಂದರ್ಯ ಪ್ರಜ್ಞೆಗೆ ಯಾರು ಸರಿಸಾಟಿಯಾಗಲಾರರು.     ಆಧುನಿಕತೆಯ ಈ ಕಾಲಘಟ್ಟದಲ್ಲಿ ಇಂತಹ ವ್ಯವಸ್ಥೆಗಳು  ಬಹಳ ಅಗತ್ಯವೆನಿಕೊಂಡಿವೆ. ನಾಲ್ಕು ದಶಕಗಳ ಹಿಂದೆ ಡಾ ಆಳ್ವರು ಮೂಡುಬಿದಿರೆಯಲ್ಲಿ ಕ್ಲಿನಿಕ್ ಸ್ಥಾಪಿಸಿ ಆ ಕಾಲದ ಅಗತ್ಯತೆಯನ್ನು ಪೂರೈಸಿದರು, ಇದೀಗ ಅವರ ಮಕ್ಕಳು ತಂದೆಯ ಕನಸನ್ನು ಯೋಗ್ಯರೀತಿಯಲ್ಲಿ ನನಸು ಮಾಡತ್ತಿದ್ದಾರೆ ಎಂದರು.  ಬಾಲ್ಯದಲ್ಲಿ ತಾನು ಮುಖಕ್ಕೆ  ಸದಾ ಪೌಡರ್ ಬಳಸುತ್ತಿದ್ದು, ಒಮ್ಮೆ ಕಡಿಮೆ ಬಳಸಿ ಬಂದಾಗ, ಇಂದು ಪೌಡರ್ ಸ್ವಲ್ಪ ಕಡಿಮೆಯಾಗಿದೆಯಲ್ಲ ಎಂದು ಡಾ ಮೋಹಳ ಆಳ್ವರು ಚೇಡಿಸಿದ್ದ ಪ್ರಸಂಗವನ್ನು ಹಂಚಿಕೊಂಡರು.


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ  ಅಧ್ಯಕ್ಷ ಡಾ ಎಂ ಮೋಹನ ಆಳ್ವ ಮಾತನಾಡಿ ,  ಮನುಷ್ಯನಿಗೆ ಪ್ರತಿ ಅಂಗವು ಬಹಳ ಮುಖ್ಯವಾಗಿದ್ದು, ಅವುಗಳಲ್ಲಿ ತ್ವಚೆಯ ಸಂರಕ್ಷಣೆಗೆ ಇಂದು ಹಚ್ಚಿನ ಪ್ರಾಶಸ್ತ್ಯ ಸಿಕ್ಕಿದೆ.  ಆ ನೆಲೆಯಲ್ಲಿ ಮೂಡುಬಿದಿರೆಯಲ್ಲಿ  ನೂತನವಾಗಿ ಪ್ರಾರಂಭಗೊಂಡ ಆಳ್ವಾಸ್ ಎಸ್ಥೆಟಿಕ್ ರಿಜುವನೇಶನ್ ಸೆಂಟರ್ ಉತ್ತಮ ಸೇವೆಯನ್ನು ನೀಡಬಲ್ಲದು ಎಂದರು. ತಾನು ಶೃಂಗಾರಕ್ಕೆ ನೀಡುವ ಪ್ರಾಮುಖ್ಯತೆಯನ್ನು ವಿವರಿಸಿದ ಅವರು, ತನ್ನ ಮದುವೆಯ ಸಂಧರ್ಭದಲ್ಲಿ ನಡೆದ ಸನ್ನಿವೇ಼ಷವನ್ನು ಹಾಸ್ಯದೊಂದಿಗೆ ಸಭಿಕರೊಂದಿಗೆ ಹಂಚಿಕೊಂಡರು. 



ಆಳ್ವಾಸ್ ಎಸ್ಥೆಟಿಕ್ ರಿಜುವನೇಶನ್ ಸೆಂಟರ್‌ನಿಂದ ನಾಲ್ಕು ನೂತನ ಕೋರ್ಸಗಳನ್ನು ಆರಂಭಿಸಲಾಗುತ್ತಿದ್ದು, ಜೂನ್ 15ರಿಂದ ಪ್ರಾರಂಭವಾಗಲಿವೆ. ಆರು ತಿಂಗಳ ಫೆಲೋಶಿಫ್ ಇನ್ ಮೆಡಿಕಲ್ ಕಾಸ್ಮಟಾಲಜಿ, ಆರು ತಿಂಗಳ ಫೆಲೋಶಿಫ್ ಇನ್ ಎಸ್ಥೆಟಿಕ್ ಮೆಡಿಸಿನ್,  ಎಂಬಿಬಿಎಸ್, ಬಿಎಎಮ್‌ಎಸ್, ಬಿಎಚ್‌ಎಮ್‌ಎಸ್ ಹಾಗೂ ಬಿಡಿಎಸ್ ಪಧವೀದರರಿಗೆ ಮೂರು ತಿಂಗಳ ಪೋಸ್ಟ್ಗ್ರಾಜ್ಯುವೇಟ್ ಡಿಪ್ಲೋಮಾ ಇನ್ ಕಾಸ್ಮಟೋಲಾಜಿ, ಹಾಗೂ ಬಿಎಸ್ಸಿ ನರ್ಸಿಂಗ್ ಹಿನ್ನಲೆಯವರಿಗೆ ಒಂದು ತಿಂಗಳ ಸರ್ಟಿಫಿಕೆಟ್ ಕೋರ್ಸ್ – ಕಾಸ್ಮಟೋಲಾಜಿ ಪ್ರಾರಂಭವಾಗಲಿದೆ. 

 

ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಅಬುಲಾಲ,  ನಾರಾಯಣ ಪಿ ಎಂ, ಪಿ ಕೆ ತೋಮಸ್,  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಡಾ ವಿನಯ ಆಳ್ವ,  ಆಳ್ವಾಸ್ ಹೆಲ್ತ್ ಸೆಂಟರ್‌ನ ಸ್ತ್ರೀರೋಗ ತಜ್ಞೆ ಡಾ ಹನಾ ಶೆಟ್ಟಿ  ಇದ್ದರು. ಕರ‍್ಯಕ್ರಮವನ್ನು ಡಾ ಕ್ಷಮಾ ಜೈನ್ ನಿರೂಪಿಸಿ, ಉಪನ್ಯಾಸಕಿ ಡಾ ಸುಧಾರಾಣಿ ಸ್ವಾಗತಿಸಿ, ಮೆಡಿಕಲ್ ಕಾಸ್ಮಟಾಲಜಿಸ್ಟ್ ಡಾ ಸುಶ್ಮಾ ಕರ್ಕೆರ ವಂದಿಸಿದರು.   



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top