ಮನದೊಳಗೆ ಮಿಡಿವ ಒಂದೇ ಧ್ವನಿ ಅಮ್ಮ...

Upayuktha
0

ವಿಶ್ವ ತಾಯಂದಿರ ದಿನ- ಮೇ 12



ದೇವರ ಪ್ರತಿರೂಪ ನೀನು. ತ್ಯಾಗ, ಸಹನೆ, ತಾಳ್ಮೆ ನಿನ್ನ ಉಸಿರಿನಲ್ಲಿ. ಯಾರಿಗೆ ಹೋಲಿಸಲಿ ನಿನ್ನ, ಕಣ್ಣಿಗೆ ಕಾಣುವ ದೇವರ ಸ್ವರೂಪ ಅದು ನೀನೇ ತಾನೇ. ಈಕೆ ಒಂದು ಮುಗ್ಧವಾದ ಸಹನಜೀವಿ ಅನೇಕ ಕಷ್ಟ ವಿರಲಿ ದುಃಖವಿರಲಿ ತನ್ನ ಮಕ್ಕಳಿಗೆ ಯಾವುದೇ ರೀತಿಯ ಕೊರತೆ ಆಗಬಾರದೆಂದು ತನಗೆಷ್ಟೇ ಕಷ್ಟವಿದ್ದರೂ ಮಕ್ಕಳಿಗೆ ತಿಳಿಸದೆ ಎಲ್ಲವನ್ನು ತಾನೇ ನಿಭಾಯಿಸಿಕೊಂಡು ಹೋಗುತ್ತಾಳೆ. ತನ್ನ ಮಕ್ಕಳು ಕಂಡ ಕನಸು ನನಸಾಗಲಿ ಎಂದು ಮಕ್ಕಳ  ಸಾಧನೆಯ ಹಿಂದೆ ನಿಲ್ಲುವಳು. ಹಗಲು ರಾತ್ರಿ ಎನ್ನದೆ ಶ್ರಮಪಡುತ್ತ ತನ್ನ ಮಕ್ಕಳ ಭವಿಷ್ಯರೂಪಿಯಾಗುವಳು.


ಒತ್ತಡದ ನಡುವೆಯು ನಗುವಿನಿಂದಲೇ ಮಕ್ಕಳ ಜೊತೆ ಸಮಯ ಹೊತ್ತು ಕಳೆಯುತ್ತಾಳೆ. ಅಮ್ಮ ಎಂಬ ಎರಡಕ್ಷರಕ್ಕೆ ಅನೇಕ ಮಹತ್ವವಿದೆ. ಅಮ್ಮನ ಪ್ರೀತಿ ಸಾಗರದಂತೆ ವಿಶಾಲ. ಅಮ್ಮನ ಪ್ರೀತಿಯ ಎದುರು ಬೇರೆ ಪ್ರೀತಿ ಶೂನ್ಯ. ತನ್ನೊಡಲ ಆಸೆಯನ್ನು ಬದಿಗೊತ್ತಿ ತನ್ನ ಮಗುವಿನ ಕನಸಿನೊಂದಿಗೆ ಪಯಣಿಸುವಳು.


ಕಣ್ಣಿನ ರೆಪ್ಪೆಯು ಕಣ್ಣಿನ ರಕ್ಷಣೆಯನ್ನು ಹೇಗೆ ಮಾಡುತ್ತದೆಯೋ ಹಾಗೆ ತನ್ನ ಮಗುವಿನ ರಕ್ಷಣೆಯನ್ನು ಹೆತ್ತ ತಾಯಿ ಮಾಡುತ್ತಾಳೆ. ತಾಯ ಪ್ರೀತಿ ಮಮತೆ ಎಂದಿಗೂ ಶಾಶ್ವತ ಯಾರಿಗೂ ಹೋಲಿಸಲು ಸಾಧ್ಯವಿಲ್ಲ.


ಹೆತ್ತ ತಾಯಿ ತನ್ನ ಮಕ್ಕಳು ಅದೆಷ್ಟೇ ದೊಡ್ಡವರಾದರು ಆಕೆ ಅವರನ್ನ ಸಣ್ಣ ಮಕ್ಕಳಾಗಿ ನೋಡಿಕೊಳ್ಳುವ ಸಹನಾ ಜೀವಿ ಆಕೆ. ನನ್ನ ಜೀವನದಲ್ಲಿ ತಾಯಿ ಎಂದರೆ ಅದೇನು ಪ್ರೀತಿ, ಮಮತೆ, ನಿನ್ನ ಬಿಟ್ಟು ಒಂದು ದಿನ ಇರಲಾರೆ ನಾನು, ಅದೆಷ್ಟು ಬಾರಿ ನಿನ್ನ ಬಳಿ ಜಗಳವಾಡಿ ಕೋಪಿಸಿ ಕೊಂಡರೂ ನಿನ್ನ ಕಾಳಜಿ  ಪ್ರೀತಿಗೆ ಮನ ಸೋಲುವೇ.ಅದಕ್ಕೆ ಕಾರಣ ನನಗೆ ಬೇರೆಯವರ ಬಳಿ ಕೋಪ ಬಂದಾಗ  ಅದನ್ನು ಅವರ ಬಳಿ ಪುನಃ ತೋರಿಸಲು ನನಗೆ ಸಾಧ್ಯವಾಗದೇ ಇದ್ದಾಗ ಅದನೆಲ್ಲ ನಿನ್ನ ಬಳಿ ಜಗಳವಾಡಿ ತೀರಿಸುತ್ತಿದ್ದೆ, ಖುಷಿಯ ವಿಷಯವಾಗಿರಲಿ, ಬೇಸರದ ವಿಷಯವಾಗಿರಲಿ ಎಲ್ಲವನ್ನು ನಿನ್ನ ಬಳಿ ಹೇಳಿಕೊಳ್ಳುವುದೇ ನನಗೊಂದು ಹವ್ಯಾಸವಾಗಿ ಹೋಗಿದೆ. ಆದರೆ ನೀನು ಸಂತೋಷದ ವಿಷಯವನ್ನು ಮಾತ್ರ ನನ್ನ ಬಳಿ ಹಂಚಿಕೊಂಡು ಬೇರೆ ಬೇಸರದ ವಿಷಯವಾಗಿರಲಿ ಅಥವಾ ಏನೇ ಕಷ್ಟವಿದರು ಅದನ್ನು ತನ್ನ ಬಳಿ ಹೇಳಿಕೊಳ್ಳದೆ ಪ್ರೀತಿ ನಗುವಿನಿಂದಲೇ ಕಾಲೇಜಿನಿಂದ ಮನೆಗೆ ಹೋಗುವಾಗ ಎಲ್ಲವನ್ನೂ ಸಿದ್ಧ ಮಾಡಿ ಇಟ್ಟಿರುತ್ತಾಳೆ. ಇಷ್ಟೊಂದು ನಿಷ್ಕಲ್ಮಶವಾದ ಪ್ರೀತಿ ಕಾಳಜಿ ವಹಿಸುವ ತಾಯಿಗೆ ನಾ ಎಂದಿಗೂ ಸದಾ ಋಣಿ.


- ನಿಖಿತಾ. ಎಸ್

ಪತ್ರಿಕೋದ್ಯಮ ವಿದ್ಯಾರ್ಥಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top