ಮಂಚಿ ಜಾತ್ರೆ: ಪ್ರತಿಷ್ಠಾ ವರ್ಧಂತಿ ಉತ್ಸವ
ಬಂಟ್ವಾಳ: "ಗಳಿಸಿದ ಸಂಪತ್ತು ಸಮಾಜದ ಸತ್ಕಾರ್ಯಗಳಿಗೆ ವಿನಿಯೋಗವಾಗಬೇಕು. ಹಣ, ವಿದ್ಯೆ, ಸ್ಥಾನಮಾನಗಳು ಅಂಹಕಾರಕ್ಕೆ ಕಾರಣವಾಗಬಾರದು. ಶ್ರೀ ಕೃಷ್ಣನ ಉಪದೇಶ ಸರ್ವಕಾಲಕ್ಕೂ ಪಾಲನೆಯಾಗಬೇಕು" ಎಂದು ಕಾಸರಗೋಡು ಎಡನೀರು ಮಠದ ಶ್ರೀಗಳಾದ ಸಚ್ಚಿದಾನಂದ ಭಾರತಿ ಸ್ವಾಮಿಗಳು ಹೇಳಿದರು.
ಅವರು ಮಂಚಿ ಕೊಳ್ನಾಡು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಎರಡು ದಿನಗಳ ಜಾತ್ರಾ ಮಹೋತ್ಸವನ್ನು ದೀಪೋಜ್ವಲನ ಮಾಡಿ ಉದ್ಘಾಟಿಸಿ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
"ಸಂಪತ್ತು ಶಾಶ್ವತವಲ್ಲ. ದಾನಧರ್ಮ ಮಾಡುವ ಮಾಡುವುದು ಸಹಜ ಗುಣವಾಗಬೇಕು. ಸ್ತುತಿ ನಿಂದೆಗಳಿಗೆ ವಿಚಲಿತರಾಗಬಾರದು" ಎಂದು ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಮೊಕ್ತೇಸರ ಶ್ರೀ ಕಮಲಾದೇವಿ ಪ್ರಸಾದ ಅಸ್ರಣ್ಣ ಹೇಳಿದರು.
ಉದ್ಯಮಿ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ವತಿಯಿಂದ ಸ್ಥಳದಾನಿ ಶ್ರೀನಿವಾಸ ಮರಡಿತ್ತಾಯ ವನಭೋಜನ ವಿಟ್ಲ, ಮುಂಬಯಿ ಉದ್ಯಮಿ ಸದಾಶಿವ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಲ. ಚಂದ್ರಹಾಸ ರೈ ಬಾಲಾಜಿಬೈಲು, ನ್ಯಾಯವಾದಿ ಪತ್ತುಮುಡಿ ಚಿದಾನಂದ ರಾವ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಮೇಲ್ವಿಚಾರಕ ಜಗದೀಶ್ ಉಪಸ್ಥಿತರಿದ್ದರು.
ಜಾತ್ರೋತ್ಸವ ಸಮಿತಿ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಪ್ರಸ್ತಾನೆಗೈದು ದೇವಸ್ಥಾನದ ಅಭಿವೃದ್ಧಿ ಕಾರ್ಯಗಳ ವರದಿ ಮಂಡಿಸಿದರು. ಮುಂದಿನ ದಿನಗಳಲ್ಲಿ ಸುಸಜ್ಜಿತ ಸಮಾಜ ಮಂದಿರ, ಗೋಶಾಲೆಯನ್ನು ನಿರ್ಮಿಸುವ ಯೋಜನೆಯಿದೆ ಎಂದರು. ಮಮತಾ ಶೆಟ್ಟಿ ಅಭಿಮತ ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲ ಮಹಾಲಿಂಗ ಭಟ್ ನಿರೂಪಿಸಿದರು. ಉಪನ್ಯಾಸಕ ಎಂ.ಡಿ. ಮಂಚಿ ವಂದಿಸಿದರು. ಸಾಮೂಹಿಕ ಶನೀಶ್ವರ ಪೂಜೆ, ದುರ್ಗಾನಮಸ್ಕಾರ, ರಂಗ ಪೂಜೆ, ದೇವರ ಬಲಿ ಉತ್ಸವ ನೆರವೇರಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿವಿಧ ಮಂಡಳಿಗಳಿಂದ ಭಜನಾ ಸೇವೆ, ವಸುಧಾರ ಸಾಂಸ್ಕೃತಿಕ ಕಲಾಸಂಘ ಬೋಳಂತೂರು ಇವರಿಂದ ನೃತ್ಯ ವೈಭವ, ಶ್ರೀ ಮಹಾಲಕ್ಷ್ಮಿ ಯಕ್ಷಗಾನ ಮಂಡಳಿ ಶ್ರೀಧಾಮ ಮಾಣಿಲ ಇವರಿಂದ ರಾಮ ಶ್ರೀ ರಾಮ ಯಕ್ಷಗಾನ ಬಯಲಾಟ ಜರಗಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ