ಮಂಗಳೂರು: ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶನ ಪತ್ರಿಕೆ ವತಿಯಿಂದ ನಡೆದ 40ನೇಯ ಸರಣಿ ಕೃತಿ ವೀಣಾ ರಾವ್ ವಿಟ್ಲ ಅವರ ಕಥಾ ಸಂಕಲನ "ತಿರುವು"ಕಥಾ ಸಂಕಲನದ ಬಿಡುಗಡೆ ಮಂಗಳೂರು ಪತ್ರಿಕಾ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್‌ನ ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿದರು. ತಿರುವು ಕಥಾ ಸಂಕಲನವನ್ನು ನಿವೃತ್ತ ಶಿಕ್ಷಕರು, ಸಾಹಿತಿ ಕೆ.ರವೀಂದ್ರ ರೈ ಬಿಡುಗಡೆಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಅಗರಿ ಎಂಟರ್ಪ್ರೈಸಸ್ ಮಾಲಿಕರಾದ ಉದ್ಯಮಿ ಅಗರಿ ರಾಘವೇಂದ್ರ ರಾವ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಡಾ. ಅರುಣಾ ನಾಗರಾಜ್ ಕೃತಿ ಪರಿಚಯಿಸಿದರು, ಲೇಖಕಿ ವೀಣಾ ರಾವ್ ವಿಟ್ಲ, ಅಮೃತ ಪ್ರಕಾಶ ಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಡಾ ಮಾಲತಿ ಶೆಟ್ಟಿ ಸ್ವಾಗತಿಸಿ, ಕವಿಯತ್ರಿ, ಶಿಕ್ಷಕಿ ಸುರೇಖಾ ಯಾಳವಾರ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ