ಸಾಂಪ್ರದಾಯಿಕ ತರಗತಿಗಳ ಸತ್ವಕ್ಕೆ ನಿರಂತರ ಆದ್ಯತೆ : ಶರತ್ ಗೋರೆ

Upayuktha
0


ಉಜಿರೆ: ಆನ್ ಲೈನ್ ಶಿಕ್ಷಣ, ಯಾಂತ್ರಿಕ ಬುದ್ಧಿಮತ್ತೆಯಿಂದಾಗಿ  ಸಾಂಪ್ರದಾಯಿಕ ತರಗತಿಗಳು ಮಹತ್ವ ಕಳೆದುಕೊಳ್ಳುವುದಿಲ್ಲ. ಅವುಗಳ ಸತ್ವ ಮುಂದುವರೆಯುತ್ತದೆ ಎಂದು ಮೂಡಬಿದಿರೆಯ ನ್ಯೂ ವೈಬ್ರಂಟ್ ಪಿ ಯು ಕಾಲೇಜಿನ  ನಿರ್ದೇಶಕರು ಮತ್ತು ಟ್ರಸ್ಟಿ  ಶರತ್ ಗೋರೆ ಅಭಿಪ್ರಾಯಪಟ್ಟರು.

      

ಉಜಿರೆಯ ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರದ ಭೌತಶಾಸ್ತ್ರ ವಿಭಾಗವು ವೃತ್ತಿಪರ ಅವಕಾಶಗಳ ಕುರಿತು ಮಂಗಳವಾರ ಏರ್ಪಡಿಸಿದ್ದ  ಒಂದು ದಿನದ ಕಾರ್ಯಾಗಾರದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

        

ಅನುಕ್ಷಣವು ಪ್ರಗತಿ ಹೊಂದುತ್ತಿರುವ ತಂತ್ರಜ್ಞಾನ ಯುಗದಲ್ಲಿ ಆನ್‌ಲೈನ್ ಶಿಕ್ಷಣ ಪದ್ಧತಿಯಿಂದಾಗಿ ಸಾಂಪ್ರಧಾಯಿಕ ತರಗತಿಯ ಕಲಿಕೆ ಪ್ರಾಧಾನ್ಯತೆ ಕಳೆದುಕೊಳ್ಳುತ್ತಿದೆ. ಇದು ಮುಂದೆ ಬೋಧನೆಯ ವೃತ್ತಿಗೆ ಕುತ್ತಾಗಬಹುದು ಎಂಬ ಗೊಂದಲಗಳು ಬೇಡ. ಎ ಐ ನಂತಹ ಎಷ್ಟೇ ತಂತ್ರಜ್ಞಾನಗಳು ಅಭಿವೃದ್ಧಿಯಾದರು ತರಗತಿಯ ಕಲಿಕೆಯನ್ನು ಮೀರಿಸಲು ಸಾಧ್ಯವಿಲ್ಲ. 

   

ತಂತ್ರಜ್ಞಾನದ ವಿಜೃಂಭಣೆಯ ನೆಪದಲ್ಲಿ ಬೋಧನಾ ವೃತ್ತಿಯ ಕನಸಿನಿಂದ ವಿಮುಖಗೊಳ್ಳಬಾರದು ಎಂದು ಹೇಳಿದರು

    

ಮತ್ತೋರ್ವ ಸಂಪನ್ಮೂಲ ವ್ಯಕ್ತಿಗಳಾದ ಕುಕ್ಕೇ ಸುಬ್ರಮಣ್ಯದ ಕುಮಾರಸ್ವಾಮಿ ಪಿ.ಯು. ಕಾಲೇಜು ಭೌತಶಾಸ್ತ್ರ ಮತ್ತು ಸಂಶೋಧನಾ ಅಧ್ಯಾಪಕರಾದ ಸಂಕೀರ್ತ್ ಹೆಬ್ಬಾರ್ 'ಮಿತಿಯಿಲ್ಲದ ವಿಜ್ಞಾನ,ಮಿತಿಯಿಲ್ಲದ ಅವಕಾಶಗಳು' ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಸಂಶೋಧನೆಗಳು ವಿಜ್ಞಾನದ ಬೆಳವಣಿಗೆಗೆ ಕಾರಣವಾಗಿವೆ. ಈವರೆಗೆ ಸಾಕಷ್ಟು ಸಂಶೋಧನೆಗಳಾಗಿದ್ದು ಪ್ರತಿಯೊಂದು ಸಂಶೋಧನೆಯು ಸಮಾಜಮುಖಿಯಾಗಿದೆ ಎಂದು ಮಾತನಾಡಿದರು.

   

ಭೌತಶಾಸ್ತ್ರ ಪ್ರಾಧ್ಯಾಪಕರಾದ ಡಿ ಹಾಲೇಶಪ್ಪ ಕಾರ್ಯಕ್ರಮವನ್ನು ನಿರೂಪಿಸಿದರು. ವಿಭಾಗದ ಮುಖ್ಯಸ್ಥರಾದ ರಾಘವೇಂದ್ರ ಎಸ್ ಸರ್ವರನ್ನು ಸ್ವಾಗತಿಸಿದರು ಮತ್ತು ವಂದಿಸಿದರು. ವಿಭಾಗದ ಅಧ್ಯಾಪಕರಾದ ಸಹನ ಕೆ, ಸೌಮ್ಯ ಕೆ ಉಪಸ್ಥಿತರಿದ್ದರು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top