ಕುಂಬಳೆ: ಶ್ರೀರಾಮಚಂದ್ರಾಪುರಮಠ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯದ ಕಂಬಾರು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಶಾಂಭವೀ ಕಲಾಮಂದಿರದಲ್ಲಿ ಏ.26 ಮತ್ತು 27ರಂದು ಶ್ರೀ ಸ್ವರ್ಣಪಾದುಕಾ ಸವಾರಿಯ ಆಗಮನ, ಧೂಳೀಪೂಜೆ ಹಾಗೂ ಭಿಕ್ಷಾಂಗ ಪಾದುಕಾ ಪೂಜೆಗಳು ನೆರವೇರಿದವು.
ಶುಕ್ರವಾರ ಗೋಧೂಳೀ ಲಗ್ನದಲ್ಲಿ ಕಂಬಾರು ದೇವಸ್ಥಾನಕ್ಕೆ ಚಿತ್ತೈಸಿದ ಶ್ರೀ ಸ್ವರ್ಣ ಪಾದುಕಾ ಸವಾರಿಯನ್ನು ಮಾತೆಯರು ಪೂರ್ಣಕುಂಭದೊಡನೆ ಸ್ವಾಗತಿಸಿದರು. ವಲಯ ಉಪಾಧ್ಯಕ್ಷೆ ಲಲಿತಾ ಮಾಣಿ, ಮಹಾಲಿಂಗ ಭಟ್ ದಂಪತಿಗಳಿಂದ ಧೂಳೀಪೂಜೆ ನೆರವೇರಿತು.
ಏ.27ರಂದು ಶನಿವಾರ ವಲಯ ಅಧ್ಯಕ್ಷರಾದ ಕೊಂದಲಕಾಡು ಕುಮಾರ ಸುಬ್ರಹ್ಮಣ್ಯ, ಸಹನಾ ಕುಮಾರಿ ದಂಪತಿಗಳು ಶ್ರೀಮಠದ ವಿನಾಯಕ ಶಾಸ್ತ್ರಿಗಳ ನೇತೃತ್ವದಲ್ಲಿ ವಲಯದ ಪರವಾಗಿ ಭಿಕ್ಷಾಂಗ ಪಾದುಕಾ ಪೂಜೆ ನೆರವೇರಿಸಿದರು.
"ಶ್ರೀಗುರುಗಳ ದೂರದೃಷ್ಟಿ ಇಂದು ಶ್ರೀರಾಮಚಂದ್ರಾಪುರ ಮಠದ ಶಿಷ್ಯರನ್ನು ಸಂಘಟಿತರನ್ನಾಗಿಸಿದೆ. ವಿಷ್ಣುಗುಪ್ತ ವಿಶ್ವ ವಿದ್ಯಾಪೀಠದಲ್ಲಿ ನೀಡುವ ಸನಾತನ ಪರಂಪರೆಯ ವಿದ್ಯೆಯ ಮಹತ್ವವನ್ನು ಸಮಾಜ ಅರಿಯಬೇಕು. ವಿದ್ಯಾರ್ಥಿಯೋರ್ವನು ದೇವನಿಷ್ಠ,ಧರ್ಮನಿಷ್ಠ, ದೇಶನಿಷ್ಠ ಪ್ರಜೆಯಾಗಿ ಹೊರಹೊಮ್ಮಬೇಕಿದ್ದರೆ ವಿವಿವಿ ಯಂತಹ ಶಿಕ್ಷಣ ಸಂಸ್ಥೆಗಳಿಂದ ಶಿಕ್ಷಣ ಪಡೆಯಬೇಕು. ವಿದ್ಯಾದಾನ ಅತ್ಯಂತ ಮಹತ್ವದ ಕಾರ್ಯ. ಸ್ವರ್ಣಪಾದುಕಾ ಸಂಚಾರದ ಸಂದರ್ಭದಲ್ಲಿ ದೊರಕಿದ ಕಾಣಿಕೆಗಳೆಲ್ಲವೂ ವಿವಿವಿ ಗೆ ಸಲ್ಲುತ್ತದೆ. ಸ್ವರ್ಣಪಾದುಕಾ ಸೇವೆಯಿಂದ ಶ್ರೀಗುರುಸೇವೆ ಹಾಗೂ ವಿದ್ಯಾದಾನದ ಅವಕಾಶ ಒಂದೇ ಸೇವೆಯಲ್ಲಿ ದೊರಕಲಿದೆ. ಸ್ವರ್ಣಪಾದುಕಾ ಸಂಚಾರವು ಧರ್ಮ ಜಾಗೃತಿ ಮೂಡಿಸಿ ಸಮಾಜದಲ್ಲಿ ಹೊಸ ಸಂಚಲನೆ ಮೂಡಿಸಿದೆ. ಶ್ರೀಮಠದ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಗುಂಪೆ ವಲಯದಲ್ಲಿ ಮುಂದೆಯೂ ಧರ್ಮಕಾರ್ಯ ಮಾಡುವಲ್ಲಿ ಭಕ್ತಿ, ಶಕ್ತಿ ಎಲ್ಲರಿಗೂ ದೊರಕಲಿ. ಎಲ್ಲರ ಆಶೋತ್ತರಗಳು ಈಡೇರಲಿ. ಪ್ರಾರ್ಥನೆ ಫಲಿಸಲಿ" ಎಂದು ಶ್ರೀಸ್ವರ್ಣಪಾದುಕಾ ಭಿಕ್ಷಾಂಗ ಕಾರ್ಯಕ್ರಮದ ನಂತರ ನಡೆದ ಧರ್ಮಸಭೆಯಲ್ಲಿ ಶ್ರೀಮಠದ ಆಚಾರ ವಿಚಾರ ಗಜಾನನ ಭಟ್ಟರು ಹರಸಿದರು.
ಗುಂಪೆ ವಲಯದ ಶಿಷ್ಯಬಂಧುಗಳೆಲ್ಲರೂ ಶ್ರದ್ಧಾಭಕ್ತಿಗಳಿಂದ ಈ ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲು ಸಹಕರಿಸಿದರು.
ಗುಂಪೆ ವಲಯ ಭಿಕ್ಷಾಂಗ ಸ್ವರ್ಣಪಾದುಕಾ ಪೂಜೆಯ ಹೊರತಾಗಿ ವಲಯದಲ್ಲಿ ಆರು ವೈಯಕ್ತಿಕ ಸ್ವರ್ಣ ಪಾದುಕಾ ಪೂಜೆಗಳು ನಡೆದವು. ಗುಂಪೆ ವಲಯದ ಶಿಷ್ಯಬಂಧುಗಳೆಲ್ಲ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಪುನೀತ ಭಾವ ಪಡೆದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ