ಶ್ರೀರಾಮ ಕಥಾ ಲೇಖನ ಅಭಿಯಾನ- 137: ರಾಮಾಯಣದ ಹಾಸ್ಯ ಪ್ರಸಂಗಗಳು

Upayuktha
0

ಚಿತ್ರಕೃಪೆ: ಅಯೋಧ್ಯಾ ಫೌಂಡೇಶನ್ ಪ್ರಕಟಿತ ಸಚಿತ್ರ ರಾಮಾಯಣ


~ಆದಿತ್ಯ.ಜಿ.ಮೈಸೂರು

ರಾಮಾಯಣದ ಲಾಲಿತ್ಯ ಹಾಗೂ ಔಚಿತ್ಯದ ಚಿತ್ರವು ಊಹಿಸಲಾಗದಷ್ಟು ವಿಸ್ತರಿಸಿದೆ ಎನ್ನುವುದಕ್ಕೆ ಓರ್ವ ಸಾಮಾನ್ಯ ಪ್ರಜೆಯ ಮನಸ್ಸಿನೊಳು ಚಿತ್ರಿಸಿಗೊಳ್ಳಬಹುದಾದ ಆ ಗಾಢ, ನಿಗೂಢ, ಗಾಂಭೀರ್ಯ ಹಾಗೂ ಕೈವಲ್ಯ ಗುಣಗಳು ಅಡಕವಾಗಿರುವಂತೆ ಅದರಲ ಭಾವಲಹರಿಯೂ ಸಹ ಪ್ರಸ್ತುತವಾಗಿ ಮಾನವನ ಸಾಮಾನ್ಯ ಪ್ರಜ್ಞೆಯನ್ನು ಸೂಚಿಸುವಂತಹ ಪಾತ್ರಗಳಾಗಿವೆ. ಈ ತರಹ ರಸಾನ್ವೇಷಣೆಯನ್ನು ರಾಮಾಯಣದಲ್ಲಿ ಮಹಾಭಾರತಗಳು ಸೇರಿ ಅನೇಕ ಕಾವ್ಯಗಳಲ್ಲಿ ಮಾಡಬಹುದು. ಸಂಸ್ಕೃತ ಸಾಹಿತ್ಯದ ದಿವ್ಯ ಸಂಪತ್ತು ಇದ್ದವು ಕೂಡ.


ನವರಸಗಳ ಸಚೇಕತೆಯನ್ನು ರಾಮಾಯಣದ ಪ್ರಸಂಗಗಳಲ್ಲಿ ಕಾಣುತ್ತಾ ಹಾಸ್ಯದ ಭಾವಸ್ಪರ್ಶವನ್ನು ಸಹ ಹತ್ತಿರಕ್ಕೆ ತೆಗೆದುಕೊಳ್ಳಬಹುದು ಗೌರವಯುತವಾದ ಹಾಸ್ಯ ಪ್ರಸಂಗಗಳ ನಿದರ್ಶನಗಳು ರಾಮಾಯಣಾದಿಗಳಲ್ಲಿದೆ, ಅದಕ್ಕೆ ಅರ್ಥವಿದೆ ತೂಕವಿದೆ ಸರಳವಾಗಿ ಅರ್ಥೈಸಿಕೊಳ್ಳಬಹುದಾದ ವಿಧಾನಗಳು ಸಹ ದೃವೀಕೃತವಾಗಿ ನೋಡಬಹುದು .ಮೂಲ ರಾಮಾಯಣದ ಪ್ರಸಂಗಗಳೇ ಇರಬಹುದು ವಾಲ್ಮೀಕಿ ಮಹರ್ಷಿಗಳಿಂದ ಒದಗಿಬಂದ ರಾಮಾಯಣವೇ ಇರಬಹುದು ಇದರಲ್ಲಿ ಭಾವನಾತ್ಮಕವಾಗಿ ಕೊಂಡೊಯ್ಯಬಲ್ಲ ಆರೋಗ್ಯಕರವಾದ ಸ್ವಚ್ಛಂದವಾದ ಪುಳಕಿತ ಭಾವ ವಿನಿಮಯಗಳಿದೆ.


ಶ್ರೀರಾಮನ ಬಂಟ ವೀರ ಹನುಮನಿಗೆ ಈ ಮರೆಗುಳಿತನ ಇದ್ದ ಬಗ್ಗೆ ಆಧಾರಗಳು ಸಿಗುತ್ತವೆ. ಒಳ್ಳೆಯ ಸಮಯದಲ್ಲೇ ಅವನನ್ನು ಈ ಮರೆವು ಕಾಡುತ್ತಿತ್ತು. ಎದುರಿಗೆ ಅಗಾಧ ಸಮುದ್ರ; ಆಚೆ ಲಂಕೆ; ಅಲ್ಲಿಗೆ ಸೀತೆಯನ್ನು ಹುಡುಕಲು, ಸಮುದ್ರವನ್ನು ಹಾರಿಹೋಗುವ ಶಕ್ತಿ ಯಾರಿಗಿದೆ? ಎಂದು ಎಲ್ಲಾ ಕಪಿ ಜಂಬೂಕಗಳು ಚಿಂತಿಸುತ್ತಿದ್ದರೆ, ಹನುಮ ಒಂದು ಬಂಡೆಯ ಮೇಲೆ ಏಕಾಂಗಿಯಾಗಿ ಕುಳಿತು ಚಿಂತಿಸುತ್ತಿದ್ದ. ಜಾಂಬವನ ಹತ್ತ ರ ಬಂದು, ಮಾರುತಿ ನಿನಗ ಆ ಶಕ್ತಿ ಉಂಟು, ಬುದ್ಧಿಯನ್ನು ಎಲ್ಲಿಟ್ಟಿದ್ದೀಯಾ ನಿನ್ನ ಶಕ್ತಿಯನ್ನು ನೆನಪಿಸಿಕೋ ಎಂದಾಗ, ಓ ಹೌದಲ್ಲಾ ಎಂದು ಲಂಕೆಗೆ ಹಾರಿದ.


ಅವನು ಲಂಕಾವನ್ನು ತಲುಪಿದನು, ಅವಳ ಇರುವಿಕೆಯನ್ನು ಕಂಡುಹಿಡಿದನು ಮತ್ತು ಅಶೋಕ ವಾಟಿಕಾದಲ್ಲಿ ಅವಳನ್ನು ಭೇಟಿಯಾದನು, ಅಲ್ಲಿ ಅವಳು ಸೆರೆಯಲ್ಲಿದ್ದಳು. ಈ ಸಂದರ್ಭದಲ್ಲಿ ಸಿಂಹಿಕ ಎಂಬ ಆಸುರಿ ಮಹಿಳೆಯ ಎದುರುಗೊಳ್ಳುವಿಕೆ ಎದನ್ನೆಲ್ಲಾ ಮೆಟ್ಟಿ ನಿಂತ ಹನುಮಂತನ ವೀರಾವೇಶ.


ಲಂಕೆಯನ್ನು ಸುಟ್ಟು, ಕೋಟೆಯನ್ನು ಹಾರಿ, ಲಂಕಾ ತೀರಕ್ಕೆ ಬಂದು ಬೆಂಕಿಯಿಂದ ಉರಿಯುತ್ತಿರುವ ಬಾಲದ ತುದಿಯನ್ನು ಸಮುದ್ರದಲ್ಲಿ ಅದ್ದಿದಾಗ, ಅಯ್ಯೋ ಸೀತಮ್ಮನಿಗೆ ಒಂದು ಮಾತು ಹೇಳಿ ಬರಲು ಮರೆತೆ. ಎಂದುಕೊಂಡು ಮತ್ತೆ ವಾಪಾಸು ಹೋಗಿ ಬಂದ. ಲಕ್ಷ್ಮಣ ಯುದ್ಧದಲ್ಲಿ ಮೋರ್ಛೆ ಹೋದಾಗ ಸಂಜೀವಿನೀ ಮೂಲಿಕೆಯ ಒಂದು ಕಡ್ಡಿಯನ್ನು ತರಲು, ಗಿಡದ ಲಕ್ಷಣಗಳನ್ನು ವೈದ್ಯ ಸುಷೇಣ ಹೇಳಿ, ಬೇಗ ತೆಗೆದುಕೊಂಡು ಬಾ, ಮಾರುತಿಯನ್ನು ಕಳುಹಿಸಿದ. ಅವನು ಆ ಪರ್ವತಕ್ಕೆ ಹೋಗುವಷ್ಟರಲ್ಲಿ ಆ ಮೂಲಿಕೆಯ ವಿವರವನ್ನು ಮರೆತು ಗುಡ್ಡವನ್ನೇ ತಂದ. ಕಡ್ಡಿಯನ್ನು ತಾ ಎಂದರೆ ಗುಡ್ಡವನ್ನೇ ತಂದೆಯಾ? ಎಂದು ಅಚ್ಚ ಕನ್ನಡದಲ್ಲಿ ಸುಷೇಣ ಹೇಳಿದ್ದು, ಇಂದಿಗೂ ಮರೆಯದ ಗಾದೆ. ಕನ್ನಡ ವಿದ್ವಾಂಸರು ಕೆಲವರು ವಾನರರು ಕನ್ನಡಿಗರಾಗಿದ್ದರೆಂದು ಸಾಧಿಸಿದ್ದಾರೆ.


ಇದಿಷ್ಟೇ ಅಲ್ಲದೆ ಲಂಕಾ ದಹನ ಹಾಗೂ ಲಂಕಪುರಾಧೀಶ್ವರನ ಎತ್ತರದ ಸಿಂಹಾಸನದ ಸಮಾನವಾಗಿ ತನ್ನ ಬಾಲವನ್ನು ವಿಸ್ತರಿಸಿಕೊಂಡು ಕುಳಿತು ಸವಾಲಾಗಿ ತೋರಿದ್ದು, ಒಮ್ಮೆಲೆ ಅಲ್ಲಿನ ರಾಜಸಭೆಯವರನ್ನು ತುಸು ನಕ್ಕು ಆನಂದಿಸುವಂತೆ ಮಾಡಿತು ಜೊತೆಜೊತೆಗೆ. ಶ್ರೀ ರಾಮನು ಧರ್ಮಮೂರ್ತಸ್ವರೂಪನಾಗಿದ್ದರೂ ಸತ್ಯಪರಾಕ್ರಮನಾಗಿದ್ದರೂ ವಿನೋದ ಪ್ರಿಯನಾಗಿರುತ್ತಾನೆ. ಧರ್ಮಾಚರಣೆಗೂ ವಿನೋದಪ್ರಿಯತೆಗೂ ಯಾವ ವಿರೋಧವೇ ಇಲ್ಲ .ಪ್ರಕೃತಿ ಸೌಂದರ್ಯವನ್ನು ಮೆಚ್ಚುವ ಮನೋಜ್ಞತೆಗೆ ಮರುಳಾಗುವ ಸ್ವಭಾವ ರಾಮನದ್ದು.


ಆ ಮೂವರು ವಿನೋದಪ್ರಿಯರಾಗಿದ್ದರೂ ಎನ್ನುವುದಕ್ಕೆ ನಿದರ್ಶನಗಳು.

ಸೀತಾರಾಮಲಕ್ಷ್ಮಣರು ಗಂಗಾ ತೀರಕ್ಕೆ ಬಂದಿದ್ದಾರೆ. ನದಿಯನ್ನು ದಾಟಿಸಲು ಗುಹನು ನಾವೆಯನ್ನು ತರಿಸಿದ್ದಾನೆ. ಶ್ರೀ ರಾಮನಿಗೆ ಸೀತೆಯನ್ನು ಸ್ವಲ್ಪ ಚೇಡಿಸಬೇಕೆನ್ನಿಸಿತು "ಲಕ್ಷಣ ನೀನು ಮೊದಲು ದೋಣಿಯನ್ನು ಹತ್ತು, ಅನಂತರ ಈ ಧೀರೆಯ ಕೈಯನ್ನು ಹಿಡಿದು ದೋಣಿಯನ್ನೇರಿಸು.!". "ಸೀತೆಯು ಬಹಳ ಧೀರೆ ದೋಣಿಯನ್ನು ಹತ್ತುವ ಧೈರ್ಯ ಮಾತ್ರ ಅವಳಿಗಿಲ್ಲ". ಕೊನೆಗೆ ಈ ವಿನೋದಾಯಕವಾದ ಪ್ರಸಂಗದೊಂದಿಗೆ ಮೂವರು ನಕ್ಕಿ ದೋಣಿಯನ್ನು ಏರಿದರು, ಈ ಪ್ರಸಂಗವನ್ನು ಅಯೋಧ್ಯಾ ಕಾಂಡದಲ್ಲಿ ಕಾಣಬಹುದು.


ಶೂರ್ಪಣಖಾ ಪ್ರಸಂಗದಲ್ಲಿ ... ಶೂರ್ಪಣಖೆಯು ರಾಮನ ಬಳಿ ಬಂದು ವಿಶೇಷವಾಗಿ ರಾಮನ ಆಕರ್ಷಣೆಗೆ ಒಳಪಟ್ಟು. ರಾಮನ ಬಗ್ಗೆ ಆಕೆಯು ವರ್ಣಿಸುವ ರೀತಿಯನ್ನು ಕಂಡು ಆ ವರ್ಣನೆಗಳಲ್ಲಿ ಮೋಹ ಹಾಗೂ ಕಾಮಗಳ ಇಚ್ಛೆ ಇದ್ದುದರ ಕಾರಣದಿಂದಾಗಿ ಶ್ರೀರಾಮನು ಕುಪಿತಗೊಂಡನು.

ಇಲ್ಲಿ ಹಾಸ್ಯದ ಸ್ಪರ್ಶವಾಗಿಬೇಕೆಂದರೆ ವಾಲ್ಮೀಕಿ ಮಹರ್ಷಿಗಳು ಈ ಪ್ರಸಂಗವನ್ನು ರಸವತ್ತಾಗಿ ವರ್ಣಿಸಿದ್ದಾರೆ ನೋಡಿ...


"ಶ್ರೀ ರಾಮನದ್ದು ಸುಂದರ ಮುಖ, ಶೂರ್ಪಣಖೆಯದ್ದು ಸೊಟ್ಟ ಮೋರೆ, ಅವನಿಗೆ ಕೃಶವಾದ ನಡು ಈಕೆಗೆ ಬೃಹತ್ ಉದರ. ಅವನು ವಿಶಾಲಾಕ್ಷ ಇವಳು ವಿರೂಪಾಕ್ಷಿ. ಅವನಿಗೆ ನವಿರಾದ ಕೃಷ್ಣ ಕೇಶರಾಶಿ, ಇವಳಿಗೆ ಕೆಂಗೂಲು. ಅವನು ಸಂತೋಷವನ್ನೀಯುವ ಸಾತ್ತ್ವಿಕ ಮೂರ್ತಿ, ಇವಳು ಉದ್ವೇಗವನ್ನು ಮೂಡಿಸುವ ತಾಮಸ ಮೂರ್ತಿ, ಅವನಿಗೆ ಇಂಪಾದ ಕಂಠಧ್ವನಿ ಅವಳಿಗೆ ಭೈರವ ಧ್ವನಿ. ಅವನು ಸೌಮ್ಯಾಕಾರದ ತರುಣ ಇವಳು ವಿಕೃತತೆಯನು ಪ್ರದರ್ಶನವನ್ನು ಮಾಡಿದಾಕೆ.


ಸುಮುಖಂ ದುರ್ಮುಖೀ ರಾಮಂ ವೃತ್ತಿಮಧ್ಯಂ ಮಹೋದರೀ |

ವಿಶಾಲಾಕ್ಷಿಂ ವಿರೂಪಾಕ್ಷೀ ಸುಕೇಶಂ ತಾಮ್ರಮೂರ್ಧಜಾ ||


ಈ ಶ್ಲೋಕವು ಅರಣ್ಯಕಾಂಡಲ್ಲಿ ಬರುವಂತಹ ಶ್ಲೋಕ ಇದರ ಮೇಲಿನ ತಾತ್ಪರ್ಯವನ್ನು ವಾಲ್ಮೀಕಿ ಮಹರ್ಷಿಗಳು ಸ್ವತಃ: ವಿವರಿಸಿದ್ದಾರೆ.

ಇದೇ ಶೂರ್ಪಣಿಖೆಯ ವರ್ತನೆಯನ್ನು ಗಮನಿಸಿದ ರಾಮನು ಅವಿವಾಹಿತನಾದ ಲಕ್ಷಣನನ್ನು ತೋರಿದನು. ನನಗೆ ಆಗಲೇ ವಿವಾಹವಾಗಿದೆ, ನನ್ನ ನೀನು ಪತಿಯೆಂದು ಭಾವಿಸುವುದು ಯಾವ ರೀತಿಯಲ್ಲೂ ಸಹ್ಯವಲ್ಲ. ನೀನು ಲಕ್ಷಣನನ್ನು ಒಂದೊಮ್ಮೆ ಸಂದರ್ಶನವ ಮಾಡು ಎಂದು ರಾಮನು ಹ್ಯಾಸ್ಯಯುಕ್ತವಾಗಿ ಶೂರ್ಪಣಿಖೆಗೆ ಚಿತಾವಣೆಯನ್ನು ಮಾಡಿದ.


ಮತ್ತೊಬ್ಬಳು ಅಸುರಳಾದ ಅಯೋಮುಖಿ. ಈ ಪ್ರಸಂಗದಲ್ಲೂ ಹೇರಳವಾದ ಹಾಸ್ಯವಿದೆ ಈ ಘಟನೆಯು ದಂಡಕಾರಣ್ಯದಲ್ಲಿ ಸಂಭವಿಸಿದ್ದು, ಸೀತಾಪಹರಣದ ಸಂದರ್ಭದಲ್ಲಿ ಕಂಗೆಟ್ಟ ರಾಮನು, ಲಕ್ಷಣನು ಅಣ್ಣ ದುಃಖವನ್ನು ಕಂಡು ದಿಗ್ಬ್ರಾಂತನಾದನು. ಕ್ರೌಂಚಾರಣ್ಯವನ್ನು ದಾಟಿ ದಕ್ಷಿಣದ ಕಡೆಗೆ ಹೋಗುತ್ತಿರುವಾಗ ಓರ್ವ ಒರಟು ಚರ್ಮದ ಕರಾಳಿ, ಲಂಬೋದರಿ ಸಿಕ್ಕ ಸಿಕ್ಕ ಮೃಗಗಳನ್ನು ಬಾಚಿ ಆಸ್ವಾಧಿಸುತ್ತಿದ್ದ ಭೀಭತ್ಸ ದೃಶ್ಯ ಸಾಕ್ಷಿಯಾದ ರಾಕ್ಷಸಿಯೇ ಈಕೆ ಅಯೋಮುಖಿ. ಆಕೆಯ ಕೇಶರಾಶಿಯು ಭಯಂಕರವಾಗಿ ಕ್ಷುದ್ರವಾಗಿ ಹರಡಿತ್ತು. ಪಾಪ ಈ ಸಲ ಲಕ್ಷ್ಮಣನಿಗೆ ವಿಕ್ರಗತಿಯು ಕಾದಿತ್ತು. ಮೊದಲೇ ಅಣ್ಣನ ಅಳಲಿಗೆ ಆರ್ದ್ರವಾಗಿದ್ದ ಲಕ್ಷ್ಮಣನ ಮುಂದೆ ದಿಢೀರನೆ ವಕ್ಕರಿಸಿ ನಿಂತಳು ಅಯೋಮುಖಿ.


ಆಕೆಯ ಈ ಪರಿಯ ಕ್ಷುದ್ರತೆಯನ್ನು ಕಂಡ ಲಕ್ಷ್ಮಣನ ಸ್ಥಿತಿ ಏನಾಗಿರಬಹುದೆಂದು ಚಿಂತಿಸಿ ಸಾಲದ್ದಕ್ಕೆ ಆಕೆಯು ಅವನನ್ನು ಅಪ್ಪಿಯೇ ಬಿಟ್ಟಳು. ಪ್ರಿಯ ನಾನು ನಿನಗೆ ಲಭಿಸಿದ್ದು ಲಾಭವೆಂದಳು ಗಿರಿಶೃಂಗ "ನಾಥ, ಗಿರಿಶೃಂಗಗಳಲ್ಲಿಯೂ ಪುಲಿನಗಳಲ್ಲಿಯೂ ಜೀವಮಾನವೆಲ್ಲಾ ನನ್ನೊಟ್ಟಿಗೆ ಕಳೆಯಬಹುದು, ಹೇ ಪ್ರಾಣಕಾಂತ ಎಂದಳು. ಮೊದಲೇ ಕುಪಿತನಾಗಿದ್ದ ಲಕ್ಷ್ಮಣನು ಆಕೆಯ ಕರ್ಣಗಳನ್ನು ಕಿತ್ತಿಟ್ಟು ಆಕೆಯು ಜೀವಮಾನದಲ್ಲೇ ಆತನ ಕಡೆಗೆ ಬಾರದಂತೆ ಮಾಡಿಯೇ ಕಳುಹಿಸಿಬಿಟ್ಟ. ಶೂರ್ಪಣಖಿಯ ಗತಿಗಿಂತ ಇನ್ನೂ ಹೆಚ್ಚಾಗಿಯೇ ಮಾಡಿ ಕಳುಹಿಸಿದ.

ಮಂಥರೆಯ ತಂದಿಡುವ ಬುದ್ಧಿಯಲ್ಲೂ ವಿಡಂಬನಾತ್ಮಕವಾದ ಹಾಸ್ಯ ಪ್ರಸಂಗ.

ಜ್ಞಾತಿದಾಸಿ ಯತೋಜಾತಾ | 

ಕೈಕೇಯಾಸ್ತು ಸಹೋಷಿತಾ || 


ಕೈಕೇಯಿಯನ್ನು ಬಾಲ್ಯದಿಂದ ನೋಡಿಕೊಂಡು ಬಂದಿದ್ದ ವೃದ್ಧೆಯು ಮಂಥರೆ. ತನ್ನ ಮೂಲವನ್ನೇ ಅರಿಯದ ಮಂಥರೆಯು ಕೈಕೇಯಿ ಜೊತೆಗಿದ್ದ ಓರ್ವ ಪರಿಚಾರಿಕೆ ಅದೇ ಇಲ್ಲಿ ಜ್ಞಾತಿದಾಸಿ ಯತೋಜಾತ ಅಂತ ಕರೆಯಲ್ಪಟ್ಟಿರುವುದು. ರಾಮನ ಪಟ್ಟಾಭಿಷೇಕದ ಸಮಾಚಾರವನ್ನು ಕೇಳುತ್ತಿದ್ದ ಹಾಗೇ ಆಕೆಯ ಉದರದಲ್ಲಿ ಬೆಂಕಿ ಬಿದ್ದಂತಾಯಿತು ತಕ್ಷಣವೇ ಗಾಢ ನಿದಿರೆಯಲ್ಲಿದ್ದ ಕೈಕೇಯಿಯನ್ನು ಎಚ್ಚರಿಸಲು ಹೋದಳು. "ಉತ್ತಿಷ್ಠ ಮೂಡೆ ಕಿಂ ಶೇಷೇ ಭಯಂ ತ್ವಾಮಭಿವರ್ತತೇ".


ಆಕೆಯು ವಯೋಸಹಜ ಕಾರಣದಿಂದ ಗೂನಿಯಾಗಿದ್ದರಿಂದ ಎಚ್ಚರಗೊಂಡ ಕೈಕೇಯಿಯು. 'ಎಲೈ ಗೂನಿಯೇ ನೀನು ಎಷ್ಟು ಬುದ್ಧಿವಂತೆ ಕುಬ್ಜಳಾದರೂ ನೀನು ಬುದ್ಧಿವಂತೆ, ಮುಂತಾದ ಹೊಗಳಿಕೆಯಿಂದ ನೀನು ಗಾಳಿಯಂತೆ ಬಾಗಿರುವ ತಾವರೆಯಂತಿರುವೆ. ಕೃಶಳಾಗಿದ್ದರೂ ನೀನು ರಾಜಹಂಸದಂತಿರುವೆ. ಶಂಬರಾಸುರನಲ್ಲಿದ್ದ ಮಾಯೆಯು ನಿನ್ನಲ್ಲಿದೆ ಎಂದು ಗೂನಿ ಗೂನಿ ಎಂದೆನುತ ಆಕೆಯನ್ನು ಹೊಗಳಿ ಹೊಗಳಿ ಉಬ್ಬಿಸಿ ಬಿಟ್ಟಳು ಕೈಕೇಯಿ.


ಕಟ್ಟಕಡೆಯದಾಗಿ ವಾನರ ಸೇನೆಯ ಚೇಷ್ಟೆಗಳ ವಿವರಣೆಗಳು ಹೀಗಿದೆ ನೋಡಿ.

ಗಾಯಂತಿ ಕೇಚಿತ್ ಪ್ರಣಮಂತಿ ಕೇಚಿತ್ ಎನ್ನುವ ಶ್ಲೋಕವನ್ನು ಆಧರಿಸಿ ಕಪಿಗಳು ಹಾಡುತ್ತವೆ ಎನ್ನುವ ಪ್ರಸಂಗಗಳನ್ನು ಊಹಿಸುವುದೇ ಹಾಸ್ಯಭರಿತವಾದದ್ದು, ಕೆಲ ಕಪಿಗಳು ತಮಗೆ ಐಚ್ಛಿಕ ಭಂಗಿಗಳಲ್ಲಿ ನಮಸ್ಕಾರವನ್ನು ಮಾಡುವುದು. ಮತ್ತೊಂದಿಷ್ಟು ಏಳುವುದು ಬೀಳುವುದು ಅಪಶೃತಿಯನ್ನು ಹಾಡುವುದು ಕೇಕೇ ಹಾಕಿ ನಗುವುದು. ಮತ್ತೊಂದು ಕಪಿಯ ಬಾಲವನ್ನು ಎಳೆಯುವುದು ಮರವನ್ನು ಜೋತಾಡುವುದು. ಒಟ್ಟಿನಲ್ಲಿ ಕಪಿ ಚೇಷ್ಟೆಗೆ ಮಿತಿಯುಂಟೆ, ಈ ಪ್ರಸಂಗವು ಸುಗ್ರೀವನನ್ನು ವಾನರ ಸೈನ್ಯವು ಭೇಟಿ ಮಾಡಬೇಕಾದಾಗ ಮಧುವನಕ್ಕೆ ಪ್ರವೇಶ ಕೊಟ್ಟಾಗ ನಡೆಯುವ ವೃತ್ತಾಂತ.


ವಾನರ ಸೇನೆಗೆ ಮಧುಪಾನ ಮಾಡಿದಾಗ ಈ ವಿಧವಾದ ಆಟಾಟೋಪಗಳು ಉಂಟಾಗಿ ಬಿಟ್ಟಿತು. ಇಂತಹ ಹತ್ತುಹಲವು ಸನ್ನಿವೇಶಗಳು ರಾಮಾಯಣದುದ್ದಕ್ಕೂ ಕಾಣಸಿಗುವ ಹಾಸ್ಯಭರಿತವಾದ ಮನರಂಜಿಸುವ ಪ್ರಸಂಗಗಳು ಬಹುಶಃ ಅದಕ್ಕೆ ರಾಮಾಯಣವನ್ನು ಎಷ್ಟು ಶ್ರವಣ ಮಾಡಿದಾಗಲೂ ಬೇಸರವೆನ್ನಿಸಲ್ಲ.  ಬದಲಾಗಿ ಹೊಸ ಹೊಸ ಹೊಳಹುಗಳೊಂದಿಗೆ ಕಾಣಸಿಗುವ ದೇದೀಪ್ಯಮಾನವಾದ ಮಹಾಕಾವ್ಯವಿದು.



-ಆದಿತ್ಯ ಜಿ. ಮೈಸೂರು,

ಲೇಖಕರ ಸಂಕ್ಷಿಪ್ತ ಪರಿಚಯ:

ಎಂ.ಬಿ.ಎ ಪದವೀಧರ ವೃತ್ತಿಯಲ್ಲಿ ಖಾಸಗಿ ಕಂಪೆನಿಯಲ್ಲಿ ಬಿಸಿನೆಸ್ ಅನಾಲಿಸ್ಟ್, ಲೇಖನಗಳನ್ನು ಬರೆಯೋದು ಅಂಕಣಗಳನ್ನು ಬರೆಯೋದು ಪ್ರವೃತ್ತಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top