ಮಂಗಳೂರು: ವಿದ್ಯಾರ್ಥಿಗಳಿಗೆ ಸಂಸ್ಕಾರ ಹಾಗೂ ಸಂಸ್ಕೃತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನೆರವಾಗುವಂತಹ ವೇದಪಾಠ ಶಾಲೆಯ ಅಪೂರ್ವ ಅವಕಾಶ ಮಂಗಳೂರಿನಲ್ಲಿಂದು ಉಪಲಬ್ಧವಾಗಿದೆ, ಇಲ್ಲಿ ಸಿಕ್ಕಿರುವ ವಿದ್ಯೆಗಳನ್ನು ಮುಂದಿನ ಜೀವನದಲ್ಲೂ ಅಳವಡಿಸಿಕೊಂಡು ಹೋಗಿ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರು ಹೇಳಿದರು.
ಇಲ್ಲಿನ ಶ್ರೀ ಭಾರತೀ ಕಾಲೇಜು ಆವರಣದ ಶಂಕರ ಶ್ರೀ ವಸಂತ ವೇದಪಾಠ ಶಾಲೆಯಲ್ಲಿ ನಡೆಯುತ್ತಿರುವ ಉಚಿತ ವೇದಪಾಠ ಶಿಬಿರಕ್ಕೆ ಸೋಮವಾರ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಆಶೀರ್ವದಿಸಿದರು.
ಇದೊಂದು ದುರ್ಲಭವಾದ ಅವಕಾಶ, ಒಳ್ಳೆಯ ವಾತಾವರಣ ಇಲ್ಲಿ ಸಿಕ್ಕಿದೆ, ಇದನ್ನು ಸದುಪಯೋಗಪಡಿಸಿಕೊಳ್ಳಬೇಕು, ಇಲ್ಲಿ ಸಿಕ್ಕಿರುವ ಸಂಸ್ಕಾರದಿಂದ ಬದುಕನ್ನು ಉತ್ತಮವಾಗಿ ಕಳೆಯುವ ಹಾಗಾಗಲಿ ಎಂದು ಶುಭಹಾರೈಸಿದರು. ಇದೇ ವೇಳೆ ವೇದಪಾಠ ಶಾಲಾ ವಿದ್ಯಾರ್ಥಿಗಳಿಗೆ ಆಶೀರ್ವಾದ, ಮಂತ್ರಾಕ್ಷತೆ ಇತ್ತು ಹರಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಹವ್ಯಕ ಸಭಾ ಅಧ್ಯಕ್ಷೆ ಗೀತಾದೇವಿ ಸಿ, ಭಾರತಿ ಸಮೂಹ ಸಂಸ್ಥೆಗಳ ಕಾರ್ಯಾಧ್ಯಕ್ಷ ಗಣೇಶ್ ಮೋಹನ್ ಕಾಶಿಮಠ, ಕಾರ್ಯದರ್ಶಿ ಶ್ರೀಕೃಷ್ಣ ನೀರಮೂಲೆ, ಹವ್ಯಕ ಮಂಡಲ ಉಪಾಧ್ಯಕ್ಷ ರಾಜಶೇಖರ ಭಟ್ ಕಾಕುಂಜೆ, ಕಾರ್ಯದರ್ಶಿ ರಮೇಶ್ ಭಟ್ ಸರವು, ವೇದಪಾಠಾ ಶಾಲಾ ಶಿಬಿರ ಮುಖ್ಯಸ್ಥ ಕಾಶಿಮಠ ಸುಬ್ರಹ್ಮಣ್ಯ ಭಟ್, ಬಾಲಸುಬ್ರಹ್ಮಣ್ಯ ಭಟ್ ಕಬೆಕೋಡು, ಬಾಯಾಡಿ ಬಾಲಕೃಷ್ಣ ಭಟ್, ರಮೇಶ್ ಭಟ್ ನೂಜಿಬೈಲು, ಮಂಡಲದ ವೈದಿಕ ಪ್ರಧಾನರಾದ ಅಮೈ ಶಿವಪ್ರಸಾದ ಮುಂತಾದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ