ಸುರತ್ಕಲ್: ವಿದ್ಯಾದಾಯಿನೀ ಸಮೂಹ ಶಿಕ್ಷಣ ಸಂಸ್ಥೆಗಳು ಸಹಸ್ರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿದ್ದು ಪ್ರಾಥಮಿಕ ಶಾಲಾ ಮಕ್ಕಳಿಗೆ ಉತ್ತಮ ಸಾರಿಗೆ ವ್ಯವಸ್ಥೆಯಿದ್ದರೆ ಸುಲಭವಾಗಿ ಮತ್ತು ಸುರಕ್ಷಿತವಾಗಿ ಶಾಲೆಗೆ ತಲುಪಬಹುದು ಎಂದು ವಿದ್ಯಾದಾಯಿನಿ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿ, ಮುಂಬಾಯಿಯ ಮೆ. ವಿನೀತ್ ಪ್ರೆಶಿಯಸ್ ಕ್ಯಾಟಲಿಸ್ಟ್ ಪ್ರೈವೆಟ್ ಲಿಮಿಟೆಡ್, ವಸಾ, ಮಹಾರಾಷ್ಟ್ರದ ಮಾಲಕ ವಿಶ್ವನಾಥ ಪಿ. ಶೆಟ್ಟಿ ನುಡಿದರು. ಅವರು ತಮ್ಮ ಸಂಸ್ಥೆಯ ಸಿ.ಎಸ್.ಆರ್. ನಿಧಿಯಿಂದ ಶ್ರೀ ವೆಂಕಟ್ರಮಣ ಹಿರಿಯ ಪ್ರಾಥಮಿಕ ಶಾಲೆ, ಮರ‍್ಪಾಡಿ ಕುಳಾಯಿ ಇಲ್ಲಿಗೆ ಮಕ್ಕಳ ಸುರಕ್ಷಿತ ಸಂಚಾರಕ್ಕಾಗಿ ಶಾಲಾ ಬಸ್‌ನ್ನು ಕೊಡುಗೆಯಾಗಿ ನೀಡಿ ಮಾತನಾಡಿದರು.
ಹಿಂದೂ ವಿದ್ಯಾದಾಯಿನೀ ಸಂಘದ ಅಧ್ಯಕ್ಷ ಹೆಚ್. ಜಯಚಂದ್ರ ಹತ್ವಾರ್ ಅಭಿನಂದಿಸಿದರು. ವಿನಯ ವಿಶ್ವನಾಥ ಪಿ. ಶೆಟ್ಟಿ, ಕಾರ್ಯದರ್ಶಿ ಶ್ರೀರಂಗ ಹೆಚ್., ಕೋಶಾಧಿಕಾರಿ ಹೆಚ್.ಎಲ್. ರಾವ್, ಜೊತೆ ಕಾರ್ಯದರ್ಶಿ ರಾಮಚಂದ್ರ ಮುಕ್ಕ, ಜೊತೆ ಕೋಶಾಧಿಕಾರಿ ರಮೇಶ್ ಟಿ.ಎನ್, ಹಿರಿಯ ಸದಸ್ಯರಾದ ಯಚ್.ಯು. ಅನಂತಯ್ಯ, ಎಂ. ವೆಂಕಟ್ರಾವ್, ಸತೀಶ್ ರಾವ್ ಇಡ್ಯಾ, ಸುಬ್ರಹ್ಮಣ್ಯ ಟಿ., ಶ್ರೀ ವೆಂಕಟ್ರಮಣ ಹಿರಿಯ ಪ್ರಾಥಮಿಕ ಶಾಲೆ, ಮರ‍್ಪಾಡಿ ಕುಳಾಯಿಯ ಸಂಚಾಲಕಿ ಕಲಾವತಿ ಕೆ., ಮುಖ್ಯೋಪಾಧ್ಯಾಯಿನಿ ಜಯಶ್ರೀ ಕೆ., ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಧರ ಹೆಚ್., ಕಾರ್ಯದರ್ಶಿ ಶ್ರೀನಿವಾಸ್ ಕುಳಾಯಿ, ವಿರಾಟ್ ಸಂಸ್ಥೆಯ ವಿಶ್ವರಾಜ್ ಮತ್ತು ಶ್ರೀಕಾಂತ್, ಗೋವಿಂದ ದಾಸ ಕಾಲೇಜಿನ ಪ್ರಾಚಾರ್ಯ ಪ್ರೊ. ಕೃಷ್ಣಮೂರ್ತಿ ಪಿ., ವಿದ್ಯಾದಾಯಿನೀ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಾಲಚಂದ್ರ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ