ಶಿವಮೊಗ್ಗ: ಅಶೋಕ್ ಪೈ ಕಾಲೇಜಿನಲ್ಲಿ ಕ್ಯಾಂಪಸ್ ಕಟ್ಟೆ ಕಾರ್ಯಕ್ರಮ

Upayuktha
0


ಶಿವಮೊಗ್ಗ: ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಇಂಗ್ಲೀಷ್ ವಿಭಾಗ ಮತ್ತು ಆಕಾಶವಾಣಿ ಭದ್ರಾವತಿ ಇವರ ವತಿಯಿಂದ ವಿದ್ಯಾರ್ಥಿಗಳಿಗೆ "ಕ್ಯಾಂಪಸ್ ಕಟ್ಟೆ" ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಿಂದ ಕನ್ನಡದ ಖ್ಯಾತ ಲೇಖಕರ ಪರಿಚಯ ನಡೆಸಿಕೊಡಲಾಯಿತು. ಕಾಲೇಜಿನ ವಿದ್ಯಾರ್ಥಿನಿಯರಾದ ದೀಕ್ಷಾ.ವೈ.ವಿ, ಸೋನಿಯಾ ಜೈನ್, ಸ್ಫೂರ್ತಿ.ವೈ.ಹೆಚ್, ಸಂಧ್ಯಾ.ಎನ್, ಪೃಥ್ವಿ ಶ್ರೀ.ಎನ್, ವ್ಯೆಷ್ಣವಿ.ಎಸ್.ಕೆ, ಸಾಕ್ಷಿ ಭಾಗವತ್ ಮತ್ತು ಸಂಗೀತ ಬುದ್ನಿ ಭಾಗವಹಿಸಿ ಮಹಾಶ್ವೇತದೇವಿ, ಗಿರೀಶ್ ಕಾರ್ನಾಡ್, ಪು.ತಿ.ನರಸಿಂಹಚಾರ್, ಎ.ಆರ್.ಮಣಿಕಾಂತ್, ವ್ಯೆದೇಹಿ, ಸಾರಾ ಅಬೂಬಕ್ಕರ್, ಪೂರ್ಣಚಂದ್ರ ತೇಜಸ್ವಿ ಮತ್ತು ಡಾ.ಕೆ.ಎ.ಅಶೋಕ್ ಪೈ ಅವರನ್ನು ಕೇಳುಗರಿಗೆ ಪರಿಚಯಿಸಿದರು.


ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿ, ಎಂ ಸಿ ಸಿ ಎಸ್ ನ ನಿರ್ದೇಶಕರಾದ ಡಾ.ರಾಜೇಂದ್ರ ಚೆನ್ನಿ, ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ರೇಷ್ಮಾ, ಇಂಗ್ಲೀಷ್ ವಿಭಾಗದ ಉಪನ್ಯಾಸಕರಾದ ಶ್ರೀ ಗಣೇಶ್ ಪ್ರಸಾದ್, ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಶ್ರೀ ಮಂಜುನಾಥ್ ಸ್ವಾಮಿ.ಎಸ್, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಸುಕೀರ್ತಿ, ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಸಂತೋಷ್ ಕುಮಾರ್.ಎಸ್.ಜಿ, ಕನ್ನಡ ವಿಭಾಗದ ಉಪನ್ಯಾಸಕರಾದ ಶ್ರೀ ಮೋಹನ್ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಆಕಾಶವಾಣಿ ಭದ್ರಾವತಿ ಕೇಂದ್ರದ ಡಾ.ಬಸವರಾಜ್.ಟಿ.ಎನ್ ರವರು ನಡೆಸಿಕೊಟ್ಟರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top