EVMನ ಕೊನೆಯ ಸಾಲಿನ ಬಗ್ಗೆ ಒಂದು ಕಡೆಗಣ್ಣ ಮೆಲು'ನೋಟ'ವೂ ಬೇಡ!!. ಮತ ಹಾಕುವಾಗ NOTAವನ್ನು ಕಡೆಗಣಿಸೋಣ!!
"ನಿಂತಿರೋ ಮೂರು ಪಕ್ಷದವರ ಬಗ್ಗೆಯೂ ನನಗೆ ಒಳ್ಳೆ ಅಭಿಪ್ರಾಯ ಇಲ್ಲ. ಉಳಿದ ಪಕ್ಷೇತರರು ಹ್ಯಾಗೂ ಗೆಲ್ಲಲ್ಲ. So, ಈ ಬಾರಿ ನನ್ನ ಓಟು NOTA ಕ್ಕೆ" ಅಂತ ಯಾರಾದರು ಹೇಳುವವರಿದ್ದರೆ, ಒಮ್ಮೆ ಈ ಕೆಳಗಿನ ಸಾಲುಗಳ ಮೇಲೆ ನಿಮ್ಮ ನೋಟ ಹರಿಸಿ!!!:
None Of The Above ಎನ್ನುವುದರ ಸಂಕ್ಷಿಪ್ತ ರೂಪವೇ ನೋಟಾ.
ನಿಮಗೆ ಗೊತ್ತೇ ಇದೆ, Electronic voting machine (EVM) ನಲ್ಲಿ ಎಲ್ಲ ಅಭ್ಯರ್ಥಿಗಳ ಹೆಸರು ಮತ್ತು ಅವರ ಚುನಾವಣಾ ಚಿಹ್ನೆಯನ್ನು ಮುದ್ರಿಸಿರಲಾಗುತ್ತದೆ.
ಅಷ್ಟ ದಿಗ್ಗಜರು ಚುನಾವಣೆಗೆ ಸ್ಪರ್ಧಿಸಿದ್ದರೆ, ಒಂಬತ್ತನೆಯ ಕ್ರಮಾಂಕದೊಂದಿಗೆ ಈ NOTA ಆ EVMನ ಕೊನೆಯ ಸಾಲಿನಲ್ಲಿರುತ್ತದೆ. ಅದರ ಮುಂದಿನ ಬಟನ್ ಒತ್ತಿ ಮತದಾನ ಮಾಡಬಹುದು. ಆದರೆ, ಈ NOTA ಗೆ ಯಾವುದೇ ಪ್ರಾಶಸ್ತ್ಯ ಇಲ್ಲ. ಕಣದಲ್ಲಿರುವ ಅಭ್ಯರ್ಥಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲು ಮತದಾರರಿಗೆ ಇರುವ ಒಂದು ನಾಮಕವಾಸ್ತೆ ಸಾಧನ ಅಷ್ಟೆ.
ಒಂದು ವೇಳೆ NOTAಗೆ ಹೆಚ್ಚು ಮತ ಬಿದ್ದರೂ, ಅತೀ ಹೆಚ್ಚು ಮತ ಪಡೆದ ಅಭ್ಯರ್ಥಿಯನ್ನು ವಿಜಯಿ ಎಂದು ಘೋಷಿಸಲಾಗುತ್ತದೆ. ಒಂಬತ್ತು ಜನ ನಿಂತ ಕಣದಲ್ಲಿ 90 ಓಟು NOTAಕ್ಕೆ ಬಿದ್ದರೂ, ಉಳಿದ 10 ಓಟಿನಲ್ಲಿ ಬಹುಮತ ಪಡೆದವನೇ ವಿಜಯಿ ಅನಿಸಿಕೊಳ್ಳುತ್ತಾನೆ.
NOTA ಹಾಕುವುದರಿಂದ ಯಾವುದೇ ಪ್ರಯೋಜನ ಯಾರಿಗೂ ಇಲ್ಲ.
ಕಣದಲ್ಲಿರುವವರಲ್ಲಿ ಯಾರೂ ಸರಿ ಇಲ್ಲ ಎನ್ನುವ ನಮ್ಮ ಅಭಿ'ಮತ'ವಾಗಿದ್ದರೂ, ಇದ್ದಿದ್ದರಲ್ಲಿ ಹೆಚ್ಚು ಉತ್ತಮರೊಬ್ಬರನ್ನು ಆಯ್ಕೆ ಮಾಡಿದರೆ ಮಾತ್ರ ನಮ್ಮ ಮತಕ್ಕೆ ಪ್ರಾಶಸ್ತ್ಯ. ತಪ್ಪಿ ನಾವು NOTA ಒತ್ತಿದರೆ, ನಮ್ಮ ಓಟು ವ್ಯರ್ಥವಾಗಿ, ಹೆಚ್ಚು ಅಯೋಗ್ಯನಾಗಿರುವ ವ್ಯಕ್ತಿ ಆಯ್ಕೆ ಆಗಬಹುದು. ಕೆಟ್ಟವರಿಗೆ ಲಾಭವಾಗಬಹುದು.
ನಮ್ಮ NOTA ಆಯ್ಕೆಯಿಂದ, VOTE ವ್ಯರ್ಥವಾಗಿ, "ಧರ್ಮ ನಾಶ ಮಾಡುತ್ತೇನೆ" ಅನ್ನುವವ ಗೆದ್ದು ಬಂದರೆ?, "ದೇಶದ ತಲೆ ಭಾಗಕ್ಕೆ ಒಬ್ಬ ಪ್ರಧಾನಿ, ಕುತ್ತಿಗೆಯಿಂದ ಪಾದದವರೆಗೆ ಮತ್ತೊಬ್ಬ ಪ್ರಧಾನಿ" ಅಂತ ಒದರುವ ತಲೆಕೆಟ್ಟ ತರ್ಲೆ ನಾಯಕನಾಗಿ ಬಂದರೆ!!? "ಒಂದು ದೇಶ ಒಂದು ಕಾನೂನು ಬೇಡ, ಒಂದು ದೇಶ ಮೂರು ಕಾನೂನು ಮಾಡ್ತಿನಿ" ಅನ್ನುವ ಮೂರ್ಖ ಗದ್ದುಗೆ ಏರಿದರೆ!!? ಇಲ್ಲ, ಹಾಗಾಗುವುದಕ್ಕೆ ನನ್ನ NOTA ದ ಓಟು ಕಾರಣ ಆಗಬಾರದು.
ಹಾಗಾಗಿ NOTA ಉಪಯೋಗವನ್ನು ಖಂಡಿತವಾಗಿಯೂ ಮಾಡಬಾರದು. ಪವಿತ್ರ ಓಟನ್ನು ವ್ಯರ್ಥ ಮಾಡುವುದು ಬೇಡ. ದೇಶವನ್ನು ಜೋಡಿಸುವವರಿಗೆ ಓಟನ್ನು ಹಾಕೋಣ,
"ಜೋಡಿಸುತ್ತೇವೆ" ಅಂತ ಹೇಳಿ ದೇಶ ಒಡೆಯುವವರಿಗಲ್ಲ. ಪ್ರತ್ಯೇಕತೆಯನ್ನು ಮರುಸ್ಥಾಪನೆ ಮಾಡುವವರಿಗಲ್ಲ.
ಅಲ್ವರಾ?
ಅರವಿಂದ ಸಿಗದಾಳ್, ಮೇಲುಕೊಪ್ಪ.
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ