ಮಂಗಳೂರು: ಮಂಗಳೂರಿನ ಪಾಂಡೇಶ್ವರದ ಪ್ರತಿಷ್ಠಿತ ಪಿಜ್ಜಾ ಬೈ ನೆಕ್ಷಸ್ ಮಾಲಿನಲ್ಲಿ ಏಪ್ರಿಲ್ 19 ರಿಂದ 21 ರವರೆಗೆ ಗೋಡಂಬಿ ಹಬ್ಬವನ್ನು ಆಚರಿಸಲಾಗುತ್ತದೆ.
ಕರ್ನಾಟಕ ಕ್ಯಾಶ್ಯೂ ಮ್ಯಾನುಫ್ಯಾಕ್ಚರರ್ ಅಸೋಸಿಯೇಷನ್(KCMA) ಸಹಯೋಗದಲ್ಲಿ ನಡೆಯುವ ಈ ಹಬ್ಬದಲ್ಲಿ ಹಲವಾರು ಬಗೆಯ ಗೇರು ಬೀಜಗಳನ್ನು ಹಾಗೂ ರುಚಿಕರ ಗೋಡಂಬಿ ತಿಂಡಿ ತಿನಸುಗಳನ್ನು ಆಸ್ವಾದಿಸಬಹುದಾಗಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಗೇರುಬೀಜ ಉದ್ಯಮಕ್ಕೆ ಜಗತ್ಪ್ರಸಿದ್ಧ. ನಮ್ಮ 2 ಜಿಲ್ಲೆಗಳು ಗೇರು ಉದ್ಯಮದ ತವರೂರು. ಗೇರು ಉದ್ಯಮದ ಬೆಳವಣಿಗೆಯಲ್ಲಿ ಒಂದು ಸಂಘಟನೆಯಾಗಿ ಕೆಲಸ ಮಾಡಬೇಕಾಗಿದೆ ಹಾಗಾಗಿ ಈ ಹಬ್ಬವನ್ನು ಆಚರಿಸಲಾಗಿದೆ" ಎಂದು ಕೆ.ಸಿ.ಎಂ.ಎ. ಆಡಳಿತ ಮಂಡಳಿ ಸದಸ್ಯ ಅದಿತ್ ಕಲ್ಬಾವಿ ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಗೇರು ಮತ್ತು ಗೋಡಂಬಿ ಬೆಳೆ ಮತ್ತು ವಿವಿಧ ಕ್ವಾಲಿಟಿಗಳ ಕುರಿತು ಅಭಿಪ್ರಾಯ ವಿನಿಮಯ ಕಾರ್ಯಕ್ರಮ ನಡೆಯಲಿದೆ.
"ಫಿಜ್ ಬೈ ನೆಕ್ಸಸ್ ಮಾಲಿನ ಒಂದನೇ ಮಹಡಿಯಲ್ಲಿ ನಡೆಯುವ ಈ ಹಬ್ಬದಲ್ಲಿ ಎಕ್ಸ್ಪೋರ್ಟ್ ಕ್ವಾಲಿಟಿಯ ಮತ್ತು ವಿವಿಧ ರೀತಿಯ ಗೋಡಂಬಿ ಗಳನ್ನು ಹಾಗೂ ಗೇರು ಬೀಜದ ರುಚಿಕರವಾದ ಆಹಾರಗಳನ್ನು ತಿನ್ನಬಹುದಾಗಿದೆ" ಎಂದು ಮಾಲ್ ಆಪರೇಷನ್ ಮುಖ್ಯಸ್ಥ ಸುನಿಲ್ ತಿಳಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಬೆಂಕಿ ಇಲ್ಲದ ಅಡುಗೆ ಸ್ಪರ್ಧೆ ಮತ್ತು ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಹಾಗೂ ಇನ್ನಿತರ ಮೋಜು-ಮಸ್ತಿ ಆಟೋಟಗಳನ್ನು ಆಯೋಜಿಸಲಾಗಿದೆ. ಆಸಕ್ತರು ಮಾಲಿನ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಅಸಿಸ್ಟೆಂಟ್ ಮ್ಯಾನೇಜರ್ ಶ್ರೀನಿಧಿ ಗಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಪಿಜ್ಜಾ ಬೈ ನೆಕ್ಸಸ್ ಮಾಲಿನ ಅಸಿಸ್ಟೆಂಟ್ ಮ್ಯಾನೇಜರ್ ಶ್ರೀನಿಧಿ ಹಾಗೂ ಅನಿಷಾ ಉಪಸ್ಥಿತರಿದ್ದರು. ಕೆ.ಸಿ.ಎಂ.ಎ. ಸದಸ್ಯ ಚೈತನ್ಯ ಉಪಸ್ಥಿತರಿದ್ದರು.
"ಮಂಗಳೂರಿನ ಜನತೆಯನ್ನು ಈ ಗೋಡಂಬಿ ಹಬ್ಬದ ಮೂಲಕ ಒಂದೆಡೆ ಸೇರಿಸಿ ಹಬ್ಬದ ರೀತಿಯಲ್ಲಿ ವಿಶೇಷ ತಿಂಡಿ ತಿನಸುಗಳನ್ನು ತಿಂದು ಸಂತೋಷದ ವಾತಾವರಣವನ್ನು ಸೃಷ್ಟಿಸುವುದೇ ಫೀಜಾ ಬೈ ನೆಕ್ಸಸ್ ಮಾಲ್ ಉದ್ದೇಶವಾಗಿದೆ" ಎಂದು ಕನ್ಸಲ್ಟೆಂಟ್ ವೇಣು ಶರ್ಮ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ