ಹೊಸನಗರ: ಉಂಡೆಮನೆ ವಿಶ್ವೇಶ್ವರ ಭಟ್ಟರು ಬರೆದ 'ರಾಮಾಯಣ ಹಕ್ಕಿನೋಟ' ಕೃತಿಯನ್ನು ಶ್ರೀ ರಾಮಚಂದ್ರಾಪುರಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಗುರುವಾರ (ಏ.18) ಲೋಕಾರ್ಪಣೆ ಮಾಡಿದರು.
ಮೆಚ್ಚುನುಡಿಗಳ ಆಶೀರ್ವಚನದ ಮೂಲಕ ಹರಸಿ ಈ ಚೊಚ್ಚಲ ಕೃತಿ, ಶ್ರೀಮತಿ ರಶ್ಮೀ ಕೃಪಾಲು ಸುವರ್ಣರ ಮೊದಲ ಅನುವಾದದ ಕೃತಿಯನ್ನು ಪರಮಪೂಜ್ಯ ಶ್ರೀಸಂಸ್ಥಾನದವರು ಲೋಕಾರ್ಪಣೆ ಮಾಡಿದರು. ಕೃತಿ- ಕೃತಿಕಾರನ ಸ್ವಾರ್ಥರಹಿತ ಸದಾಶಯಗಳಿಗೆ ಮೆಚ್ಚಿ ಅವರ ಉದ್ದೇಶವು ನೆರವೇರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮಠಕ್ಕೆ ಆಗಮಿಸಿದ್ದ ಮಡಿಕೇರಿಯ ಪುರುಷೋತ್ತಮ ಭಟ್ ಅವರು, ಪುಸ್ತಕ-ಪುಸ್ತಕ ಮಾರಾಟದ (ಶ್ರೀಮದ್ವಾಲ್ಮೀಕಿರಾಮಾಯಣದ ಕತೆಯನ್ನು ವಿದ್ಯಾರ್ಥಿ-ಯುವಜನೆಗೆ ಪರಿಚಯಿಸುವುದು, ಪುಸ್ತಕ ಮಾರಾಟದಿಂದ ಬಂದ ಮೊತ್ತವನ್ನು ವಿಷ್ಣುಗುಪ್ತ ವಿಶ್ವ ವಿದ್ಯಾಪೀಠಮ್ ನಲ್ಲಿ ಕಲಿಯಲಿರುವ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳ ಶೈಕ್ಷಣಿಕವೆಚ್ಚವನ್ನು ನಿರ್ವಹಿಸಲಿರುವ ದತ್ತಿನಿಧಿಗೆ ಸಮರ್ಪಿಸುವುದು)ಉದ್ದೇಶದ ಕುರಿತು ತಿಳಿದು ಸಂತೋಷಗೊಂಡು 15 ಪುಸ್ತಕಗಳನ್ನು ಸ್ಥಳದಲ್ಲೇ ಕೊಂಡುಕೊಂಡು ಇಂತಹ ಪುಸ್ತಕಗಳನ್ನು ಹುಟ್ಟಿದ ಹಬ್ಬ, ಉಪನಯನ, ಮದುವೆ ಮುಂತಾದ ಸಂದರ್ಭಗಳಲ್ಲಿ ಉಡುಗೊರೆಯಾಗಿ ನೀಡಬೇಕು. ಆಗ ಅರ್ಥದ ಸದ್ವಿನಿಯೋಗವಾಗುತ್ತದೆಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಉಪ್ಪಿನಂಗಡಿ ಮಂಡಲದ ನಿವೃತ್ತ ಸೇನಾಧಿಕಾರಿ ಶ್ಯಾಮಪ್ರಸಾದರು ಐದು ಪುಸ್ತಕಗಳನ್ನು ರಿಯಾಯಿತಿಯ ದರವಿದ್ದರೂ ಮೂಲಬೆಲೆ(₹500)ಯಲ್ಲೇ ಖರೀದಿಸಿ 'ಇದೂ ಒಂದು ಗುರುಸೇವೆ' ಎಂದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ