ಕಾರ್ಕಳ: ಎ+ಎ ಸೂಪರ್ ಮಾರ್ಕೆಟ್ ಉದ್ಘಾಟನೆ

Upayuktha
0

ನಿಟ್ಟೆ: ಕಾರ್ಕಳ ಗಾಂಧಿ ಮೈದಾನದ ಹತ್ತಿರದ ಶಾಂಭವಿ ಡಿವೈನ್ ಪಾರ್ಕ್ ಕಟ್ಟಡದ ತಳ ಮಹಡಿಯಲ್ಲಿ ಶ್ರೀಮತಿ ಸುಲೋಚನಾ ಸತೀಶ್ ಕುಮಾರ್, ಕೆಮ್ಮಣ್ಣು ಹಾಗೂ ಶ್ರೀಮತಿ ಮಲ್ಲಿಕಾ ಅಚ್ಯುತ ಆಚಾರ್ಯ, ಅತ್ತೂರು ದಂಪತಿಗಳ ಪಾಲುದಾರಿಕೆಯಲ್ಲಿ ಆರಂಭಗೊಂಡ ಎ+ಎ ಸೂಪರ್ ಮಾರ್ಕೆಟ್ ನ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆಯಿತು.


ಶ್ರೀ ಸತ್ಯನಾರಾಯಣ ಪೂಜೆ ಮೂಲಕ ಕಾರ್ಯಕ್ರಮ ಶುಭಾರಂಭಗೊಂಡಿತು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಂತಾವರದ ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಈರ್ವರು ಸಮಾನ ಮನಸ್ಕರು ಸೇರಿ ಸ್ಥಾಪಿಸಿದ ಪ್ರತಿಯೊಂದು ವಸ್ತುಗಳನ್ನೊಳಗೊಂಡ ಈ ಬೃಹತ್ ವ್ಯಾಪಾರ ಮಳಿಗೆಗೆ ಉತ್ತರೋತ್ತರ ಶ್ರೇಯಸ್ಸು ಪ್ರಾಪ್ತಿಯಾಗಲಿ ಎಂದು ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ಮಣಿಪಾಲದ ಶಾಂಭವಿ ಬಿಲ್ಡರ್ಸ್ ಮಾಲಕರಾದ ಅಪ್ಪು ಮರಕಾಲ, ವಿಶ್ರಾಂತ ವಾಣಿಜ್ಯ ತೆರಿಗೆ ಅಧಿಕಾರಿ ಶ್ರೀ ಜೋಕಿಮ್ ಮೈಕಲ್ ಹೆಚ್. ಪಿಂಟೋ, ಕೆನರಾ ಬ್ಯಾಂಕ್ ನ ವಿಶ್ರಾಂತ ಮ್ಯಾನೇಜರ್ ರಾಜ್ ಶೇಖರ್ ಮೇಠಿ ಉಪಸ್ಥಿತರಿದ್ದು ಸಂಸ್ಥೆಯ ಯಶಸ್ಸಿಗೆ ಶುಭ ಕೋರಿದರು. ನಿಟ್ಟೆ ವಿದ್ಯಾಸಂಸ್ಥೆಯ ನಿರ್ಮಾಣ, ನಿರ್ವಹಣೆ ಮತ್ತು ಅಭಿವೃದ್ಧಿ ನಿರ್ದೇಶಕರಾದ ಎ.ಯೋಗೀಶ್ ಹೆಗ್ಡೆ, ಉದ್ಯಮಿ ಹಾಗೂ ಹಿರಿಯ ಕೃಷಿಕರಾದ ಅಶೋಕ್ ಅಡ್ಯಂತಾಯ, ಗಣೇಶ್ ಆಚಾರ್ಯ, ವಾಸುದೇವ ಆಚಾರ್ಯ, ತೀರ್ಥಹಳ್ಳಿ ಸೀತಾರಾಮ ಆಚಾರ್ಯ ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು. ಸತೀಶ್ ಕುಮಾರ್ ಕೆಮ್ಮಣ್ಣು ಸ್ವಾಗತಿಸಿದರು. ಸತೀಶ್ ಶೆಟ್ಟಿ ಬೋಳ ಕಾರ್ಯಕ್ರಮ ನಿರ್ವಹಿಸಿದರು. ಪಾಲುದಾರರಾದ ಅಚ್ಯುತ ಆಚಾರ್ಯ ಅತ್ತೂರು ಸಹಕರಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
To Top