- ಕೊಟ್ಟಾರ ಚೌಕಿಯ ಫ್ಲೈ ಓವರ್ ಮರುಪೈಂಟಿಂಗ್ ಕಾಮಗಾರಿ ಉದ್ಘಾಟನೆ
- ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಪರಿಸರದಲ್ಲಿ ಏಳನೇ ತಿಂಗಳ ಶ್ರಮದಾನ ಸಂಪನ್ನ
- ಸ್ವಚ್ಛತಾ ಶ್ರಮದಾನದ ಮೂಲಕ ಹೊಸವರ್ಷ ಆರಂಭಿಸಿದ ಸ್ವಯಂಸೇವಕರು
ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಎರಡನೇ ಆವೃತ್ತಿಯ ಏಳನೇ ತಿಂಗಳ ಸ್ವಚ್ಛತಾ ಅಭಿಯಾನಕ್ಕೆ ಏಪ್ರಿಲ್ 14ರ ಭಾನುವಾರ ಬೆಳಗ್ಗೆ ಕೊಟ್ಟಾರ ಚೌಕಿಯ ಫ್ಲೈ ಓವರ್ ಪರಿಸರದಲ್ಲಿ ಚಾಲನೆ ನೀಡಲಾಯಿತು. ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಅವರ ಸಾನಿಧ್ಯದಲ್ಲಿ ಎಂ.ಆರ್.ಪಿ.ಎಲ್. ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಹೆಚ್.ವಿ ಪ್ರಸಾದ್ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಕಿರಣ್ ಕೋಡಿಕಲ್ ಹಸಿರು ನಿಶಾನೆ ತೋರುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಕಿರಣ್ ಕೋಡಿಕಲ್ "ನಮ್ಮ ನಗರದ ಸ್ವಚ್ಛತೆ ಮತ್ತು ಸೌಂದರ್ಯ ಹೆಚ್ಚಿಸುವ ನಿಟ್ಟಿನಲ್ಲಿ ರಾಮಕೃಷ ಮಿಷನ್ ಬಹಳಷ್ಟು ಶ್ರಮವಹಿಸುತ್ತಿದೆ. ಕೊಟ್ಟಾರ ಫ್ಲೈ ಓವರ್‌ಗೆ ಹಿಂದೆ ಪೈಂಟ್ ಮಾಡಲಾಗಿತ್ತು. ಇದೀಗ ಮತ್ತೆ ಮಾಸಿದ ವರ್ಣಚಿತ್ರಗಳಿಗೆ ಜೀವಕಳೆ ತರುವ ಪ್ರಯತ್ನ ಮಾಡಲಾಗುತ್ತಿದೆ, ಇದಕ್ಕಾಗಿ ರಾಮಕೃಷ್ಣ ಮಠದ ಸ್ವಾಮೀಜಿಯವರಿಗೆ ಹಾಗೂ ಎಲ್ಲಾ ಸ್ವಯಂಸೇವಕರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ" ಎಂದು ಹೇಳಿದರು. ಈ ಸಂದರ್ಭದಲ್ಲಿ ಯೋಧರಾದ ಬೆಳ್ಳಾಲ ಗೋಪಿನಾಥ್ ರಾವ್, ಕಮಲಾಕ್ಷ ಪೈ ಮತ್ತು ರಂಜನ್ ಬೆಳ್ಳರ್ಪ್ಪಾಡಿ ಉಪಸ್ಥಿತರಿದ್ದರು.
ತದನಂತರ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಂಭಾಗದಲಿ,್ಲ 2019ರಲ್ಲಿ ಮಹಾತ್ಮ ಗಾಂಧೀಜಿಯವರ 150 ಜನ್ಮವರ್ಷಾಚರಣೆ ಪ್ರಯುಕ್ತ ಲೋಕಾರ್ಪಣೆಗೊಂಡ ನಗರದ ಮೊತ್ತಮೊದಲ ಮಿಯಾವಾಕಿ ನಗರಾರಣ್ಯ ಪರಿಸರವನ್ನು ಸ್ವಚ್ಛಗೊಳಿಸಲಾಯಿತು. ಮಿಯಾವಾಕಿ ಅರಣ್ಯದ ಮುಂಭಾಗದಲ್ಲಿದ್ದ ಎಲೆಗಳನ್ನು ನೈಸರ್ಗಿಕ ಗೊಬ್ಬರವನ್ನಾಗಿ ಮಾಡಲು ಸಂಗ್ರಹಿಸಲಾಯಿತು, ಪ್ಲಾಸ್ಟಿಕ್ ಇತ್ಯಾದಿ ಕಸಗಳನ್ನು ವಿಲೇವಾರಿ ಮಾಡಲಾಯಿತು. ತಾರಾನಾಥ ಆಳ್ವ, ಯೋಗೀಶ್ ಪ್ರಭು, ವಿಜೇಶ್ ದೇವಾಡಿಗ, ಸಚಿನ್ ಶೆಟ್ಟಿ ನಲ್ಲೂರು, ವಸಂತಿ ನಾಯಕ್, ಹಿಮ್ಮತ್ ಸಿಂಗ್, ನಿತೇಶ್ ಕಲ್ನಾಡ್, ಲೋಕೇಶ್ ಮುಂತಾದವರನ್ನೊಳಗೊAಡ ತಂಡ ಈ ಕಾರ್ಯವನ್ನು ಕೈಗೊಂಡಿತು.
ಮಿಯಾವಾಕಿ ಹಿಂಭಾಗದಲ್ಲಿದ್ದ ಮದ್ಯದ ಬಾಟಲಿಗಳು, ತ್ಯಾಜ್ಯ, ಬಟ್ಟೆಗಳು, ಪ್ಲಾಸ್ಟಿಕ್ ಮುಂತಾದ ವಸ್ತುಗಳ ರಾಶಿಯನ್ನು ಶೇಷಪ್ಪ ಅಮೀನ್, ಸೌರಜ್ ಮಂಗಳೂರು, ಮೆಹಬೂಬ್, ಸುನಂದಾ, ಶಿವರಾಮ್, ಪ್ರಕಾಶ್ ಎಸ್. ಟಿ, ರಾಜೀವಿ ಚಂದ್ರಶೇಖರ್, ಆಕೃತಿ ಭಟ್, ಡಾ. ಕೃಷ್ಣ ಶರಣ್, ಅವಿನಾಶ್ ಮುಂತಾದವರನ್ನೊಳಗೊAಡ ತಂಡದ ಸದಸ್ಯರು ಸ್ವಚ್ಛಗೊಳಿಸಿದರು. ಸ್ವಯಂಸೇವಕರಾದ ವಿಠ್ಠಲದಾಸ್ ಪ್ರಭು, ಸತ್ಯನಾರಾಯಣ, ಉದಯ್ ಕೆ. ಪಿ, ಮುಕೇಶ್ ಆಳ್ವ, ಸಜಿತ್ ಅವರ ತಂಡ ಮಿಯಾವಕಿಯ ಒಳಭಾಗದಲ್ಲಿದ್ದ ಪ್ಲಾಸ್ಟಿಕ್ ಬಾಟಲಿಗಳನ್ನು ತೆರವುಗೊಳಿಸಿ, ಗಿಡಗಳಿಗೆ ನೀರೆರೆದರು ಹಾಗೂ ಆವರಣಗೋಡೆಯನ್ನು ಸ್ವಚ್ಛಗೊಳಿಸಿದರು.
ಫ್ಲೈ ಓವರ್ ಮರು ಪೈಂಟಿಂಗ್ ಕಾಮಗಾರಿಗೆ ಚಾಲನೆ
ಕೊಟ್ಟಾರ ಚೌಕಿಯಲ್ಲಿ 2019 ರಲ್ಲಿ ಸ್ವಚ್ಛ ಮಂಗಳೂರು ಅಭಿಯಾನದ ಸಮಾರೋಪದ ಅಂಗವಾಗಿ, ಸಂಪೂರ್ಣ ಕೊಟ್ಟಾರಚೌಕಿ ಫ್ಲೈಓವರ್‌ನ ಕೆಳಭಾಗದ 30,000 ಚದರ ಅಡಿ ವಿಸ್ತೀರ್ಣದ ಜಾಗವನ್ನು ಅಭಿವೃದ್ಧಿಪಡಿಸಿ ಸುಂದರಿಕರಣಗೊಳಿಸಲಾಗಿತ್ತು. ಕಾಲಾನುಕ್ರಮದಲ್ಲಿ ಇಲ್ಲಿನ ಕಂಬಗಳಲ್ಲಿ ಬಿಡಿಸಲಾಗಿದ್ದ ವರ್ಣಚಿತ್ರದ ಬಣ್ಣಗಳು ಮಾಸಿಹೋಗಿತ್ತು. ಇದರ ನಿರ್ವಹಣೆಯ ಅವಶ್ಯಕತೆ ಇರುವುದನ್ನು ಮನಗಂಡ ರಾಮಕೃಷ್ಣ ಮಿಷನ್ ಸ್ವಯಂಸೇವಕರ ತಂಡವು ಈ ವರ್ಣಚಿತ್ರಗಳನ್ನು ಮರುಪೈಂಟಿAಗ್ ಮಾಡುವ ಕಾರ್ಯವನ್ನು ಕೈಗೊಳ್ಳಲು ನಿರ್ಧರಿಸಿದೆ.
ಈ ಕಾರ್ಯಕ್ಕೆ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಅವರ ಉಪಸ್ಥಿಯಲ್ಲಿ ಎಂ.ಆರ್.ಪಿ.ಎಲ್. ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಹೆಚ್.ವಿ. ಪ್ರಸಾದ್ ಚಾಲನೆ ನೀಡಿದರು. ಮುಂದಿನ ಒಂದು ತಿಂಗಳಿನಲ್ಲಿ ಆದಿತತ್ವ ಆರ್ಟ್ಸ್‌ನ ವಿಕ್ರಂ ಶೆಟ್ಟಿ ಹಾಗೂ ತಂಡ, ಮರುಪೈಂಟಿಂಗ್ ಕಾರ್ಯವನ್ನು ಪೂರ್ಣಗೊಳಿಸಲಿದೆ. ಈ ಕಾರ್ಯ ಪೂರ್ಣಗೊಂಡ ನಂತರ ನವೀಕೃತ ಪೈಂಟಿಂಗ್‌ಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ