ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನ ಸಮುದಾಯ ಬಾನುಲಿ 'ನಮ್ಮ ಕುಂದಾಪುರ' ಇತ್ತೀಚೆಗೆ ಉದ್ಘಾಟನೆಗೊಂಡಿತು. ಇಂದು ಈ ಕೇಂದ್ರಕ್ಕೆ 'ನಮ್ಮ ಕುಂದಾಪುರ' ಬಳಗದ ಸ್ಥಾಪಕರು ಮತ್ತು ಅದೇ ಕಾಲೇಜಿನ ಮೊದಲ ತಂಡದ ಪ್ರಾಕ್ತನ ವಿದ್ಯಾರ್ಥಿ ವೈ. ರಾಧಾಕೃಷ್ಣ ಶೆಟ್ಟಿ ಮತ್ತು'ನಮ್ಮ ಕುಂದಾಪುರ' ಬಳಗದ ಸಮನ್ವಯಕಾರ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿಯವರು ಭೇಟಿ ನೀಡಿ ಸಂದರ್ಶನ ನೀಡಿದರು.
ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರಾಚಾಯ೯ ಮತ್ತು ಕುಂದಾಪ್ರ ಕಮ್ಯುನಿಟಿ ರೇಡಿಯೋ ಕೇಂದ್ರದ ಪ್ರಧಾನ ನಿವಾ೯ಹಕಿ ಮತ್ತು ನಿರೂಪಕಿ ಶ್ರೀಮತಿ ಜ್ಯೋತಿ ಸಾಲಿಗ್ರಾಮರವರು ಕಾಲೇಜಿನ ಮೊದಲ ಬ್ಯಾಚಿನ ವಿದ್ಯಾರ್ಥಿ ವೈ.ರಾಧಾಕೃಷ್ಣ ಶೆಟ್ಟಿಯವರನ್ನು ಸಂಮಾನಿಸಿ ಸ್ವಾಗತಿಸಿದರು. ಸಂದಶ೯ನ ಕಾರ್ಯಕ್ರಮ ನಡೆಸುವಲ್ಲಿ ಅಥ೯ ಶಾಸ್ತ್ರ ಉಪನ್ಯಾಸಕ ದುಗಾ೯ ಪ್ರಸಾದ್ ಮಯ್ಯ ಸಹಕರಿಸಿದರು.
ಬಹು ಸುಂದರ ನಿರೂಪಣೆಯೊಂದಿಗೆ ಸಂದಶ೯ನ ಕಾರ್ಯಕ್ರಮ ನಡೆಸಿಕೊಟ್ಟ ನಿರೂಪಕಿ ಜ್ಯೇೂತಿ ಸಾಲಿಗ್ರಾಮ "ನಮ್ಮ ಕುಂದಾಪುರ "ಫೇಸ್ ಪೇಜ್ ಬಳಗದ ಸಂಸ್ಥಾಪಕರನ್ನು ಮಾತನಾಡಿಸುವುದರ ಮೂಲಕ ನಮ್ಮ ಕುಂದಾಪುರ ಬಳಗದ ಹುಟ್ಟು ಬೆಳವಣಿಗೆ ಗುರಿ ಉದ್ದೇಶಗಳ ಕುರಿತಾಗಿ ಸುಲಲಿತವಾದ ಪ್ರಶ್ನೇೂತ್ತರದೊಂದಿಗೆ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ವೈ.ರಾಧಾಕೃಷ್ಣ ಶೆಟ್ಟಿಯವರು ತಮ್ಮ ಮನದಾಳದ ಅನುಭವಗಳನ್ನು ಮನ ಬಿಚ್ಚಿ ಮನ ಮುಟ್ಟುವಂತೆ ಹಂಚಿಕೊಂಡರು. ನಮ್ಮ ಕುಂದಾಪುರ ಬಳಗದ ಯಶಸ್ವಿ "ನಮ್ಮ ಕುಂದಾಪುರ" ಬಳಗದ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಸಲ್ಲಬೇಕು ಎಂದರು.
ವೈ.ರಾಧಾಕೃಷ್ಣ ಶೆಟ್ಟಿಯವರು ತಾನು ಕಲಿತ ವಿದ್ಯಾ ಸಂಸ್ಥೆ ತಮಗೆ ನೀಡಿದ ಶಿಕ್ಷಣ ಸಂಸ್ಕಾರ ನಮ್ಮೆಲ್ಲರ ಬದುಕನ್ನು ಸಂಪನ್ನಗೊಳಿಸಿದೆ ಎಂದು ವಿದ್ಯಾ ಸಂಸ್ಥೆಯು ತಮಗೆ ನೀಡಿದ ಜ್ಞಾನ ಸಂಸ್ಕಾರಗಳಿಗೆ ಶಿರಬಾಗಿ ವಂದಿಸಿ ಗೌರವ ಸಲ್ಲಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ