ಗೋವಿಂದ ದಾಸ ಕಾಲೇಜ್‌ "ಬದುಕಲು ಬೇಕು ಬದುಕುವ ಈ ಮಾತು" ಪುಸ್ತಕ ಪರಿಚಯ

Upayuktha
0



ಸುರತ್ಕಲ್:  ಗೋವಿಂದ ದಾಸ ಕಾಲೇಜಿನ ಗ್ರಂಥಾಲಯ ವಿಭಾಗವು, ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಭಾಗಿತ್ವದಲ್ಲಿ ನಡೆಸುತ್ತಿರುವ ಪುಸ್ತಕ ಪ್ರೀತಿ ಪರಿಚಯ ಸರಣಿ ಕಾರ್ಯಕ್ರಮದಲ್ಲಿ, ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ಧನ್ಯಾ ಎ.ಎಸ್ ರವರು ಖ್ಯಾತ ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪ ನವರ  ಬದುಕಲು ಬೇಕು ಬದುಕುವ ಈ ಮಾತು ಎಂಬ ಪುಸ್ತಕವನ್ನು ಪರಿಚಯಿಸಿದರು. ಈ ಪುಸ್ತಕದಲ್ಲಿ ಲೇಖಕರ  ಉದಾತ್ತ ಚಿಂತನೆ, ಅನುಭವ, ಆಳವಾದ ಆಲೋಚನೆಗಳು ಅವರ ನೆನಪಿನ ಅಂಕುರಗಳಾಗಿ ಮೂಡಿ ನಿಂತಿವೆ ಎಂದರು. 


ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಪಿ.ಕೃಷ್ಣಮೂರ್ತಿಯವರು , ಧನ್ಯಾ ಎ.ಎಸ್ ರವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಸೌಮ್ಯ ಪ್ರವೀಣ, ಪ್ರಾದ್ಯಾಪಕರುಗಳಾದ  ಡಾ. ಭಾಗ್ಯ ಲಕ್ಷ್ಮಿ, ಧನ್ಯಕುಮಾರ,  ಅಕ್ಷತಾ ಶೆಟ್ಟಿ,  ಗ್ರಂಥಪಾಲಕಿ ಡಾ.ಸುಜಾತಾ ಬಿ, ಗ್ರಂಥಾಲಯದ ಸಿಬ್ಬಂದಿಗಳು  ಉಪಸ್ಥಿತರಿದ್ದರು. ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ರಕ್ಷಿತಾ  ಸ್ವಾಗತಿಸಿ ವಂದಿಸಿದರು.          



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top