ಕಿಡ್ನಿ ಕಲ್ಲನ್ನು ಕರಗಿಸಲು ಬಾಳೆದಿಂಡಿನ ರಸ

Upayuktha
0


ಕಲ್ಪವೃಕ್ಷ ಎಂದಾಕ್ಷಣ ತೆಂಗು ಎಂದು ನಮಗೆ ನೆನಪಿಗೆ ಬರುತ್ತದೆ. ಆದರೆ ಇದೀಗ ಬಾಳೆಯೂ ಕಲ್ಪವೃಕ್ಷವೇ ಆಗಿದೆ. ಇದರ ಎಲ್ಲಾ ಭಾಗಗಳು ಉಪಯುಕ್ತವೇ ಆಗಿವೆ. ಬಾಳೆಗೊನೆ, ಮೋತೆ, ದಿಂಡು ಉತ್ತಮ ಔಷಧಿಯ ಗುಣಗಳನ್ನು ಹೊಂದಿದ್ದು ಬಹಳ ಉಪಯುಕ್ತ. ಪೇಟೆ ಪಟ್ಟಣಗಳಲ್ಲಿ ಇದೀಗ ಒಂದು ಅಡಿ ಉದ್ದದ ದಿಂಡಿಗೂ ಬಹಳ ಡಿಮಾಂಡ್ ಇದೆ. ಇದರಲ್ಲಿ ಚಟ್ನಿ, ಸಾಸುವೆ, ಸಾಂಬಾರ್, ಪಲ್ಯ, ದಿಂಡಿನ ಪಕೋಡ, ದೋಸೆ ಇಡ್ಲಿ ಸಲಾಡ್, ಮೊಸರು ಗೊಜ್ಜು, ನಾನಾ ವೈವಿಧ್ಯ ತಿನಿಸುಗಳನ್ನು ತಯಾರಿಸಬಹುದು. ಬಾಳೆ ನಾರಿನ ನಾರಿನಿಂದ ವಿವಿಧ ಪರಿಸರ ಸ್ನೇಹಿ ಉತ್ಪನ್ನಗಳನ್ನು ಉತ್ಪಾದಿಸಬಹುದು. ಚೀಲಗಳು, ಬುಟ್ಟಿಗಳು, ಸಸಿ ಕುಂಡಗಳು, ಯೋಗಾಸನ ಚಾಪೆಗಳು, ಹಗ್ಗ ಇತ್ಯಾದಿ ಸೀರೆ, ಅಂಗಿ ಬಟ್ಟೆಗಳು, ಪರಿಸರಸ್ನೇಹಿ ಹರ್ಬಲ್ ಮೆಡಿಸಿನ್ ಮುಂತಾದವುಗಳನ್ನು ತಯಾರಿಸಬಹುದು.


ಬಾಳೆಯಿಂದ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಲಾಭವಿದೆ ಎಂದು ಯಾರೂ ಭಾವಿಸಿರಲಿಲ್ಲ. ಬಾಳೆದಿಂಡಿನ ರಸವು ಮುಖ್ಯವಾಗಿ ಕಿಡ್ನಿಯಲ್ಲಿರುವ ಕಲ್ಲನ್ನು ಕರಗಿಸಲು ರಾಮಬಾಣವಾಗಿದೆ. ಗ್ಯಾಸ್ಟ್ರಿಕ್ ಸಮಸ್ಯೆಗೆ ಮೂತ್ರಪಿಂಡದ ಸಮಸ್ಯೆಗೆ ಹಾಗೂ ಎಸಿಡಿಟಿಯನ್ನು ಕಡಿಮೆ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಉಂಟಾಗುವ ಸಮಸ್ಯೆಯನ್ನು ತಪ್ಪಿಸುವ ಗುಣವನ್ನು ಹೊಂದಿದೆ.


ರಸ ತೆಗೆಯುವುದು ಹೆಗೆ?

ಸಂಜೆಯ ಹೊತ್ತಿಗೆ ಬಾಳೆಗಿಡವನ್ನು ಕಡಿದು ಮಧ್ಯದ ದಿಂಡನ್ನು ತೆಗೆದು ಗುಳಿಯ ಆಕಾರದಲ್ಲಿ ಮಾಡಿ ಪ್ಲಾಸ್ಟಿಕ್, ಬಾಳೆ ಎಲೆ ಅಥವಾ ಹಾಳೆ ಮುಚ್ಚಬೇಕು. ಮರುದಿನ ಬೆಳಗ್ಗೆ ನೋಡುವಾಗ ಗುಳಿ ತುಂಬಾ ನೀರು ತುಂಬಿರುತ್ತದೆ. ಸಾಯಂಕಾಲದಿಂದ ಬೆಳಿಗ್ಗೆ ಆಗುವಾಗ ಐದರಿಂದ ಆರು ಆರು ಗ್ಲಾಸ್ ಒಂದು ಲೀಟರ್ ನಷ್ಟು ತುಂಬಾ ಆಗುತ್ತದೆ. ಅತಿ ಸುಲಭವಾಗಿ ಸಿಗುವ ದಿಂಡು ಕೇವಲ ದೇವರ ಪೂಜೆಗೆ ಮಾತ್ರ ಸೀಮಿತವಲ್ಲದೆ ಮಾನವನ ಆರೋಗ್ಯಕ್ಕೂ ಬಹಳ ರೀತಿಯಿಂದ ಉಪಯುಕ್ತ.


ಇದರ ತಾಜಾ ನೀರನ್ನು ಹಾಗೆ ಕುಡಿಯುವುದು ಉತ್ತಮ ಅಥವಾ ಜೀರಿಗೆ ಶುಂಠಿ ನಿಂಬೆರಸ ಗಾಂಧಾರಿ ಮೆಣಸು, ಚಿಟಿಕೆ ಉಪ್ಪು ಬೇಕಿದ್ದರೆ ಕಲ್ಲು ಸಕ್ಕರೆ ಸೇರಿಸಿ ಕುಡಿಯಬಹುದು. ಇದನ್ನು ಸಮಸ್ಯೆ ಇದ್ದವರೇ ಕುಡಿಯಬೇಕೆಂದಿಲ್ಲ; ಇಲ್ಲದವರೂ ಮುಂದೆ ಬರದಂತೆ ತಡೆಯುವುದಕ್ಕಾಗಿ ಕುಡಿಯಬಹುದು.  ಖಾಲಿ ಹೊಟ್ಟೆಗೆ ಸೇವಿಸುವುದು ಉತ್ತಮ.


- ಕುಮಾರ ಪೆರ್ನಾಜೆ ಪುತ್ತೂರು

 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top