ಕಲಾ ವಿಭಾಗದ ಅದ್ವಿತೀಯ ಪ್ರತಿಭೆ ಸೃಷ್ಟಿ

Upayuktha
0


ಉಡುಪಿ: ಈ ಬಾರಿಯ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಉಡುಪಿ ಜಿಲ್ಲೆ ಗುರುತಿಸಬೇಕಾದ ಇನ್ನೊಂದು ಅದ್ವಿತೀಯ ಪ್ರತಿಭೆ ಸೃಷ್ಟಿಯಾಗಿದ್ದು ಉಡುಪಿಯ ಬಾಲಕಿಯರ ಸರಕಾರಿ ಪದವಿ ಪೂರ್ವ  ಕಾಲೇಜಿನ ಕಲಾ ವಿದ್ಯಾರ್ಥಿನಿ ಕು. ಸೃಷ್ಟಿ ವಿ. ಇಲ್ಲಿ ಕೂಡಾ ಈ ಪ್ರತಿಭೆಗೆ ಹೆಚ್ಚಿನ ಮನ್ನಣೆ ಪ್ರಚಾರ ಮಾಧ್ಯಮಗಳಲ್ಲಿ ಸಿಗಲೇ ಇಲ್ಲ. ಪಠ್ಯೇತರ ಚಟುವಟಿಕೆಗಳಲ್ಲಿ ಸದಾ ಮುಂದಿರುವ ಸೃಷ್ಟಿ ಈ ಬಾರಿಯ ದ್ವಿತೀಯ ಪಿಯು ಕಲಾ ವಿಭಾಗದ ಪರೀಕ್ಷೆಯಲ್ಲಿ ಉತ್ಕೃಷ್ಟ ಸಾಧನೆಗೈದಿದ್ದಾಳೆ ಅನ್ನುವುದನ್ನು ನಾವು ಗುರುತಿಸಲೇಬೇಕು.


ಸೃಷ್ಟಿ ಗಳಿಸಿರುವ ಅಂಕಗಳ ಬಗ್ಗೆ ಒಮ್ಮೆ ದೃಷ್ಟಿ ಹರಿಸೇೂಣ. ಕನ್ನಡ 99; ಇಂಗ್ಲಿಷ್ 90; ಇತಿಹಾಸ 98; ಅಥ೯ಶಾಸ್ತ್ರ 95; ಸಮಾಜ ಶಾಸ್ತ್ರ 100; ರಾಜ್ಯ  ಶಾಸ್ತ್ರ 98 ಅಂದರೆ ಒಟ್ಟು 600 ಅಂಕಗಳಲ್ಲಿ 580. ಕಲಾ ವಿಷಯಗಳಲ್ಲಿ ಇಷ್ಟೊಂದು ಅಂಕ ಗಳಿಕೆ ನಿಜಕ್ಕೂ ಅತ್ಯುತ್ತಮ ಸಾಧನೆ.


ಈಕೆ ತನ್ನ ಪದವಿ ಶಿಕ್ಷಣಕ್ಕಾಗಿ ಉಡುಪಿ ಪ್ರತಿಷ್ಠಿತ ಡಾ.ಜಿ. ಶಂಕರ್ ಪದವಿ ಮತ್ತು ಸ್ನಾತಕೋತ್ತರ ಕಾಲೇಜಿಗೆ ಪ್ರವೇಶಾತಿ ಪಡೆದಿದ್ದಾಳೆ. ಕಳೆದ ಒಂದು ವರುಷದಿಂದ ಉಡುಪಿಯ ಪ್ರೈಮ್ ತರಬೇತಿ ಸಂಸ್ಥೆಯಲ್ಲಿ ಐಎಎಸ್‌ /ಕೆಎಎಸ್‌ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಪಡೆಯುತ್ತಿದ್ದಾಳೆ. ಕನ್ನಡ ಭಾಷಾ ಮಾಧ್ಯಮದಲ್ಲಿ ಸಾಕಷ್ಟು ಪರಿಣಿತಿ ಪಡೆದಿರುವ ಈಕೆ ಇನ್ನೂ ಹೆಚ್ಚಿನ ಅಧ್ಯಯನ ಮತ್ತು ಶ್ರಮ ವಹಿಸಿದರೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ವಿಶೇಷ ಸಾಧನಗೈಯಲು ಅದ್ವಿತೀಯ ಪ್ರತಿಭೆ ಸೃಷ್ಟಿಯಿಂದ ಸಾಧ್ಯ ಅನ್ನುವುದು ನಮ್ಮೆಲ್ಲರ ವಿಶ್ವಾಸವೂ ಹೌದು.


- ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top