ಮಂಗಳೂರು: ಬೇಸಿಗೆ ರಜೆ ಸೀಸನ್‍ನಲ್ಲಿ ನೆಕ್ಸಸ್ ಸೆಲೆಕ್ಟ್ ಮಾಲ್ಸ್ ಗ್ರಾಹಕರಿಗಾಗಿ ಹಮ್ಮಿಕೊಂಡಿರುವ `ಪರ್ಪಲ್ ವೀಕೆಂಡ್' ಅಂಗವಾಗಿ ಗೋಡಂಬಿ ಉತ್ಸವ ಹಮ್ಮಿಕೊಳ್ಳಲಾಗಿದೆ.
ಗೋಡಂಬಿ ಬೆಳೆಯುವುದು, ಸಂಸ್ಕರಣೆ ಮತ್ತು ಬಳಕೆಯ ಕುರಿತು ಜಾಗೃತಿ ಮೂಡಿಸಿ ಈ ಬೆಳೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಮೇಳ ಆಯೋಜಿಸಲಾಗಿದೆ. ಸ್ಥಳೀಯ ಕುಶಲಕರ್ಮಿಗಳು ಮತ್ತು ವ್ಯಾಪಾರಸ್ಥರು ತಮ್ಮ ಗೋಡಂಬಿ ಉತ್ಪನ್ನಗಳನ್ನು ಪ್ರದರ್ಶಿಸುವುದು ಮತ್ತು ಮಾರಾಟ ಮಾಡಲು ಒಂದು ಉತ್ತಮ ವೇದಿಕೆಯನ್ನು ಕಲ್ಪಿಸುವುದು ಇದರ ಉದ್ದೇಶ.
`ಉಳಿತಾಯ ಮತ್ತು ಉತ್ಸಾಹ' ಕೇಂದ್ರಿತ ಪರ್ಪಲ್ ವೀಕೆಂಡ್‍ನಲ್ಲಿ ಫ್ಯಾಶನ್, ಆಹಾರ ಮತ್ತು ಪಾನೀಯ, ಎಲೆಕ್ಟ್ರಾನಿಕ್ಸ್, ಸಿನಿಮಾಗಳು, ಹೈಪರ್ ಮಾರ್ಕೆಟ್ ಉತ್ಪನ್ನಗಳು ಸೇರಿದಂತೆ ವಿವಿಧ ವರ್ಗಗಳ ಉತ್ಪನ್ನಗಳಿಗೆ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದೆ
ಪರ್ಪಲ್ ವೀಕೆಂಡ್ ಉಪಕ್ರಮದ ಭಾಗವಾಗಿ ನೆಕ್ಸಸ್ ನ ಫಿಝಾ ಶಾಪರ್‍ಗಳನ್ನು ಆಕರ್ಷಿಸಲು ಹಲವಾರು ಮನರಂಜನಾ ಕಾರ್ಯಕ್ರಮಗಳನ್ನು ಕೂಡಾ ಆಯೋಜಿಸಿದೆ ಎಂದು ಪ್ರಕಟಣೆ ಹೇಳಿದೆ. ಟೈಂ ಝೋನ್, ಸ್ಪಾರ್, ಕ್ಯಾರೆಟ್ಲೇನ್, ಅವಾಂತ್ರ, ಮಾಪಲ್, ಯುಸಿಬಿ, ರಾನ್, ಸ್ಪೈಕರ್ ಇತ್ಯಾದಿ ಶಾಪ್ ಗಳಲ್ಲಿ ಹಲವು ಕಾರ್ಯಕ್ರಮಗಳು ನಡೆಯಲಿವೆ. ನೆಕ್ಸಸ್ ನ ಫಿಝಾ ತನ್ನ ಗ್ರಾಹಕರಿಗೆ ಅಚ್ಚಳಿಯದ ಶಾಪಿಂಗ್ ಅನುಭವವನ್ನು ನೀಡುವುದರ ಜೊತೆಗೆ ನೇರಳೆ ಬಣ್ಣದಿಂದ ಅಲಂಕೃತಗೊಳ್ಳಲಿದ್ದು, ಎಲ್ಲರನ್ನೂ ಆಕರ್ಷಿಸಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ