ಏ.14: ಎಡನೀರು ಮಠದಲ್ಲಿ ನಾಟ್ಯರಂಗ ಪುತ್ತೂರು ಅವರಿಂದ 'ನೃತ್ಯಾವತರಣಂ' ಪ್ರಸ್ತುತಿ

Upayuktha
0


ಪುತ್ತೂರು: ನಾಟ್ಯರಂಗ ಪುತ್ತೂರು ಪ್ರಸ್ತುತಪಡಿಸುವ ನೃತ್ಯಾವತರಣಂ- ಕಲಾವಿದರಿಂದ ಕಲಾ ರಸಿಕರೆಡೆಗೆ ನೃತ್ಯದ ಅವತರಣ ಕಾರ್ಯಕ್ರಮ ಏ.14ರಂದು ಸಂಜೆ 4:30ಕ್ಕೆ ಎಡನೀರು ಮಠದ ಭಾರತೀ ಕಲಾಸದನದಲ್ಲಿ ನಡೆಯಲಿದೆ.


ಎಡನೀರು ಮಾಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದು, ಕೇರಳ ರಾಜ್ಯ ಬಯೋಡೈವರ್ಸಿಟಿ ಮಂಡಳಿ ಸದಸ್ಯ ಡಾ. ವಿ. ಬಾಲಕೃಷ್ಣನ್, ಡಿವೈಎಸ್‌ಪಿ, ಭರತನಾಟ್ಯ ಕಲಾವಿದೆ, ಚಲನಚಿತ್ರ ಹಾಗೂ ಕಿರುತೆರೆ ನಟಿ ರಾಗೀಶ ಶ್ರೀಕುಮಾರ್, ಭೂಮಿಕಾ ಪ್ರತಿಷ್ಠಾನದ ಅನುಪಮ ರಾಘವೇಂದ್ರ ಅವರು ಅಭ್ಯಾಗತರಾಗಿ ಭಾಗವಹಿಸುತ್ತಿದ್ದಾರೆ.


ವಿದುಷಿ ಮಂಜುಳಾ ಸುಬ್ರಹ್ಮಣ್ಯ, ದೇವನಂದ ಸಿಎ.ಎಸ್, ಮಧುಶ್ರೀ ವಿ.ಎಸ್, ಶ್ರೀನಂದ ಇ ಅವರು ನೃತ್ಯ ಪ್ರಸ್ತುತಿ ನಡೆಸಲಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top