ನಿಟ್ಟೆಯಲ್ಲಿ ಹ್ಯಾಕ್‌ಫೆಸ್ಟ್‌ '24

Upayuktha
0


ನಿಟ್ಟೆ: ನಿಟ್ಟೆ ತಾಂತ್ರಿಕ ಕಾಲೇಜಿನ ಫೈನೈಟ್ ಲೂಪ್ ಕ್ಲಬ್ ಇಜಿಡಿಕೆ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ನಿವಿಯಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ನ ಸಹ-ಪ್ರಾಯೋಜಕತ್ವದೊಂದಿಗೆ ಆಯೋಜಿಸಿದ್ದ 3 ದಿನಗಳ ರಾಷ್ಟ್ರಮಟ್ಟದ ಹ್ಯಾಕಥಾನ್ ಹ್ಯಾಕ್ಫೆಸ್ಟ್ '24 ಇತ್ತೀಚೆಗೆ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಕ್ಯಾಂಪಸ್ ನಲ್ಲಿ ನಡೆಯಿತು.


ಫಿನ್ಟೆಕ್, ಸುಸ್ಥಿರ ಅಭಿವೃದ್ಧಿ, ಆರೋಗ್ಯ ರಕ್ಷಣೆ, ಮೆಟಾವರ್ಸ್, ಓಪನ್ ಇನ್ನೋವೇಶನ್ ಮತ್ತು ಲಾಜಿಸ್ಟಿಕ್ಸ್ ಎಂಬ 6 ಟ್ರ್ಯಾಕ್‌ಗಳನ್ನು ಒಳಗೊಂಡ ಈ 50 ಗಂಟೆಗಳ ಆನ್-ಸೈಟ್ ಕಾರ್ಯಕ್ರಮಕ್ಕೆ 27 ಕಾಲೇಜುಗಳ 225 ಕ್ಕೂ ಹೆಚ್ಚು ಮಂದಿ 60 ತಂಡಗಳಡಿಯಲ್ಲಿ ಭಾಗವಹಿಸಿದರು.


ಹ್ಯಾಕ್ ಫೆಸ್ಟ್ '24 ನ್ನು ಮುಖ್ಯ ಅತಿಥಿಗಳಾದ ಇಜಿಡಿಕೆ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಟೀಮ್ ಮ್ಯಾನೇಜರ್ ಡೆಸ್ಮಂಡ್ ರೇಗೊ, ನಿವಿಯಸ್ ಸೊಲ್ಯೂಷನ್ಸ್ ನ ಅಸೋಸಿಯೇಟ್ ಡೈರೆಕ್ಟರ್ ಆದರ್ಶ್ ಪ್ರಭು ಮತ್ತು ಗೌರವ ಅತಿಥಿ ನಿಟ್ಟೆ ಡೀಮ್ಡ್ ಟು ಬಿ ಯೂನಿವರ್ಸಿಟಿಯ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಡಾ.ಗೋಪಾಲ್ ಮುಗೇರಾಯ ಸೇರಿದಂತೆ ಗಣ್ಯರು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ನಿಟ್ಟೆ ತಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಲುಂಕರ್ ಅವರು ಇನ್ನೋವೇಶನ್ ಗೆ ಆಡಳಿತ ಮಂಡಳಿ ಮತ್ತು ಸಂಸ್ಥೆಯ ಬದ್ಧತೆಯನ್ನು ವಿವರಿಸಿದರು.


ಫೈನೈಟ್ ಲೂಪ್ ನ ಅಧ್ಯಾಪಕ ಸಲಹೆಗಾರ ಡಾ.ಶಶಾಂಕ್ ಶೆಟ್ಟಿ ಸ್ವಾಗತಿಸಿ, ಪ್ರಾಯೋಜಕರಾದ ನಿಟ್ಟೆ ಡಿಯು, ಇಜಿಡಿಕೆ ಇಂಡಿಯಾ ಮತ್ತು ನಿವಿಯಸ್ ಸೊಲ್ಯೂಷನ್ಸ್ ನ ಬೆಂಬಲವನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಗೌರವಾನ್ವಿತ ತೀರ್ಪುಗಾರರು ಮತ್ತು ಮಾರ್ಗದರ್ಶಕರನ್ನು ಪರಿಚಯಿಸಲಾಯಿತು. ಫೈನೈಟ್ ಲೂಪ್ ನ ಅಧ್ಯಾಪಕ ಸಲಹೆಗಾರ ಪುನೀತ್ ಆರ್.ಪಿ ವಂದಿಸಿದರು. ವಿದ್ಯಾರ್ಥಿನಿಯರಾದ ಅಪೇಕ್ಷಾ ನಾಯಕ್ ಮತ್ತು ಶೈವಿ ಸಾಲ್ಯಾನ್ ಸಮಾರಂಭವನ್ನು ನಿರೂಪಿಸಿದರು.


ಟೆಕ್ ಟಾಕ್, ಜಾಮ್ ಸೆಷನ್, ಓವರ್ಟೈಮ್ - ಗೇಮಿಂಗ್ ಈವೆಂಟ್ ಈ ಮೂರು ದಿನಗಳ ಈವೆಂಟ್ನಲ್ಲಿ ನಡೆದ ಚಟುವಟಿಕೆಗಳಾಗಿವೆ.


ಡೆಸ್ಮಂಡ್ ರೆಗೊ, ಇಜಿಡಿಕೆ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಟೀಮ್ ಮ್ಯಾನೇಜರ್, ಪ್ರವೀಣ್ ಉಡುಪ, ಎ1 ಲಾಜಿಕ್ಸ್ ನ ಸ್ಥಾಪಕ ಮತ್ತು ತಾಂತ್ರಿಕ ನಿರ್ದೇಶಕ, ಸುಜಿತ್ ಕುಮಾರ್, ಅಪ್ಲಿಕೇಶನ್ ಆಧುನೀಕರಣ ತಜ್ಞ, ನಿವಿಯಸ್ ಸೊಲ್ಯೂಷನ್ಸ್, ಹರ್ಷಿತ್ ಎಸ್, ಸೋನಿ ಇಂಡಿಯಾ ಸಾಫ್ಟ್ವೇರ್ ಸೆಂಟರ್ನಲ್ಲಿ ಪ್ರೊಡಕ್ಟ್ ಸೆಕ್ಯುರಿಟಿ ಎಂಜಿನಿಯರ್, ಜೋವಿಶ್ ಡಿಸೋಜಾ, ಇಜಿಡಿಕೆ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಬಿಸಿನೆಸ್ ಇಂಟೆಲಿಜೆನ್ಸ್ ಅನಾಲಿಸ್ಟ್, ಪೂಜಾ ಜೈನ್, ಇಜಿಡಿಕೆ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಕ್ವಾಲಿಟಿ ಎಶುರೆನ್ಸ್ ಎಂಜಿನಿಯರ್, ರವಲ್ ನಾಥ್ ಮಲ್ಯ, ಇಜಿಡಿಕೆ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಟೀಮ್ ಮ್ಯಾನೇಜರ್, ಚ್ಯವನ್, ನಿವಿಯಸ್ ಸೊಲ್ಯೂಷನ್ಸ್ ನಲ್ಲಿ ಕ್ಲೌಡ್ ಅಸೋಸಿಯೇಟ್ ಅವರು ಹ್ಯಾಕ್ ಫೆಸ್ಟ್ ಗೆ ತೀರ್ಪುಗಾರರಾಗಿ ಸಹಕರಿಸಿದರು.


ಕೃಷ್ಣಪ್ರಸಾದ್ ರಾವ್,  ನಿವಿಯಸ್  ನ ಕ್ಲೌಡ್ ಎಂಜಿನಿಯರ್, ಆದಿತ್ಯ ಕೆ.ವಿ, ಆಂಟ್ ಶೇಡ್ ಸಂಸ್ಥಾಪಕ, ವಿನಯ್ ಸಮಂತ್ರಿ, ಇನ್ಫರ್ಮ್ಯಾಟಿಕಾದ ಸಹಾಯಕ ಸಾಫ್ಟ್‌ವೇರ್ ಎಂಜಿನಿಯರ್, ಭರತ್ ಎಂ ಕುಲಕರ್ಣಿ, ಮರ್ಸಿಡಿಸ್ ಬೆಂಝ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಇಂಡಿಯಾದ ಸಾಫ್ಟ್ವೇರ್ ಎಂಜಿನಿಯರ್, ಮೊಘೆ ಸುಧೀಶ್ ರಾವ್, ನೇಮಕಾತಿ ಮತ್ತು ಕಸ್ಟಮ್ ಸಕ್ಸಸ್ ಮ್ಯಾನೇಜರ್, ತಗಾಶ್ ನ ಸಾಫ್ಟ್ ವೇರ್ ಎಂಜಿನಿಯರ್ ಹಾಗೂ ಮನೋಜ್ ಕುಮಾರ್ ಸಜ್ಜ, ಝೀಟಾದಲ್ಲಿ ಸಾಫ್ಟ್ ವೇರ್ ಡೆವಲಪರ್ ಮುಂತಾದ ಉದ್ಯಮದ ತಜ್ಞರು ಹ್ಯಾಕಥಾನ್ ಸಮಯದಲ್ಲಿ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದರು.


ವಿಜೇತರು

ಸಮಗ್ರ ಪ್ರಶಸ್ತಿ ವಿಜೇತರು

ವಿಜೇತರು - ವಿಷನ್ ಪ್ರೊಸ್, ಪಿಇಎಸ್ ವಿಶ್ವವಿದ್ಯಾಲಯ, ಆರ್ ಆರ್ ಕ್ಯಾಂಪಸ್, ಬೆಂಗಳೂರು

ಮೊದಲ ರನ್ನರ್ ಅಪ್ - ಅನುರಕ್ಷಾ, ಪಿಇಎಸ್ ವಿಶ್ವವಿದ್ಯಾಲಯ, ಇಸಿ ಕ್ಯಾಂಪಸ್, ಬೆಂಗಳೂರು

ಎರಡನೇ ರನ್ನರ್ ಅಪ್ - ಟಿನ್ನಿ ಕ್ವಾಡ್, ಎಸ್ಎಸ್ಎನ್ ಕಾಲೇಜ್ ಆಫ್ ಎಂಜಿನಿಯರಿಂಗ್

ಟ್ರ್ಯಾಕ್ ವಿಜೇತರು

ಫಿನ್ಟೆಕ್ - ಆಪ್ಟಿಮೈಜ್, ಎಸ್ಆರ್ಎಂ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ

ಸುಸ್ಥಿರ ಅಭಿವೃದ್ಧಿ - ಹೈವ್ಲಿಂಕ್, ಸೇಂಟ್ ಜೋಸೆಫ್ ಕಾಲೇಜ್ ಆಫ್ ಇಂಜಿನಿಯರಿಂಗ್, ಮಂಗಳೂರು

ಹೆಲ್ತ್ಕೇರ್ - ಥ್ರೋಟಲ್, ಎಂ.ಎಸ್.ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ

ಮೆಟಾವರ್ಸ್ - ಕೋಡಿಯಂ, ಪಿ.ಎ. ಕಾಲೇಜ್ ಆಫ್ ಇಂಜಿನಿಯರಿಂಗ್, ನಡುಪದವು, ಮಂಗಳೂರು

ಲಾಜಿಸ್ಟಿಕ್ಸ್ - ಸ್ವೆಲ್ಟ್, ಎನ್ಎಂಎಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top