ಕಾಂಗ್ರೆಸ್ ಗೆಲ್ಲುವ ಕ್ಷೇತ್ರದ ಹೆಸರು ಹೇಳಲಿ: ಬಿಎಸ್ ವೈ ಸವಾಲು

Upayuktha
0


ಶಿವಮೊಗ್ಗ: ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ 20 ಸ್ಥಾನ ಗೆಲ್ಲುವ ಬಗ್ಗೆ ಇಂದು ಬೆಳಿಗ್ಗೆ ಸಿಎಂ ಸಿದ್ದರಾಮಯ್ಯನವರ ಹೇಳಿಕೆಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಶಿವಮೊಗ್ಗದಲ್ಲಿ ಸವಾಲು ಎಸೆದಿದ್ದಾರೆ, ಅವರು ಗೆಲ್ಲುವ ನಾಲ್ಕು ಲೋಕಸಭಾ ಕ್ಷೇತ್ರದ ಹೆಸರು ಹೇಳಲಿ ಹಾಗೂ ಅವರ ಮುಂದಿನ ಪ್ರಧಾನಿ ಯಾರು ಎಂದು ಹೇಳಲಿ ಎಂದು ಪ್ರಶ್ನಿಸಿದ್ದಾರೆ.


ಮಾಧ್ಯಮಗಳ ಜೊತೆ ಮಾತನಾಡಿದ‌ ಅವರು ಕಾಂಗ್ರೆಸ್ ನಾಯಕರಾಗಿ ಅವರು ಸೋಲುತ್ತೇವೆ ಎಂದು ಹೇಳಲು ಬರುತ್ತದೆಯೇ? ಕಾಂಗ್ರೆಸ್ ರಾಜ್ಯದಲ್ಲಿ 20 ಸ್ಥಾನ ಪಡೆಯುವ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ್ದಾರೆ. ಆದರೆ ಅವರು ಗೆಲ್ಲುವ ಕ್ಷೇತ್ರಗಳ ಹೆಸರು ಹೇಳಲಿ. ಅವರ ಮುಂದಿನ ನಾಯಕ ಯಾರು ಎಂದು ಹೇಳಲಿ ಅವರ ನಾಯಕತ್ವದ ಗೊಂದಲದಲ್ಲಿದ್ದಾರೆ ಎಂದರು.


ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ನಿರೀಕ್ಷೆ ಬಿಜೆಪಿಗೆ ಇದೆ. ಶಿವಮೊಗ್ಗದಲ್ಲಿ ರಾಘಣ್ಣ ಜನತೆ ಅಪೇಕ್ಷೆ ಪಟ್ಟ ನೂರಕ್ಕೆ 95ರಷ್ಟುಅಭಿವೃದ್ಧಿ ಕಾರ್ಯಗಳ ಮಾಡಿದ್ದಾರೆ. ಅಭಿವೃದ್ಧಿ ಕಾರ್ಯಗಳ ಹಿನ್ನೆಲೆಯಲ್ಲಿ ರಾಘವೇಂದ್ರ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದರು.


ಮೋದಿಯವರ ಗಾಳಿ ಎಲ್ಲೆಡೆ ಹರಡಿದೆ ಮೋದಿ ಪರವಾದ ಅಲೆ ರಾಜ್ಯಾದ್ಯಂತ ಇದೆ. ಚೊಂಬು ಗ್ಯಾರೆಂಟಿ ವಿಚಾರ ಪ್ರತಿಕ್ರಿಯಿಸಿದ ಅವರು, ಇದಕ್ಕೆಲ್ಲ ಏನು ಅರ್ಥ ಇಲ್ಲ ಎಂದರು. ಈಶ್ವರಪ್ಪ ನಾಮಪತ್ರ ಹಿಂಪಡೆಯದ ವಿಚಾರ ಪ್ರತಿಕ್ರಿಯಿಸಿ ನಾನ್ಯಾಕಪ್ಪ ಅದರ ಬಗ್ಗೆ ಪ್ರತಿಕ್ರಿಯೆ ನೀಡಲಿ ಎಂದು ಹೇಳಿದರು.


ನೇಹಾ ಹತ್ಯೆ ಪ್ರಕರಣ ಸಿಓಡಿ ತನಿಖೆಗೆ ವಹಿಸುವುದಾಗಿ ಘೋಷಿಸಿರುವ ವಿಚಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿಕೆ ಸ್ವಾಗತಿಸುತ್ತೇನೆ. ಮೋದಿ ವಿರುದ್ಧ ಟೀಕೆ ಮಾಡಿದ ವಿಚಾರವಾಗಿ ಯತೀಂದ್ರ ಸಿದ್ದರಾಮಯ್ಯರವರು ಹಗುರವಾಗಿ ಮಾತನಾಡಿದ್ದಾರೆ. ನಾನೇನು ಮಾತನಾಡಲು ಆಗುತ್ತೆ? ರಸ್ತೆಯಲ್ಲಿ ಹೋಗುವರೆಲ್ಲ ಮಾತನಾಡಿದರೆ ಮೋದಿ ಅವರ ಗೌರವ ಕಡಿಮೆಯಾಗುವುದಿಲ್ಲ ಎಂದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top