ನನ್ನ ಪ್ರತಿಭೆ, ನನ್ನ ಕನಸು,ನನ್ನ ಸಾಧನೆ

Upayuktha
0

 


ಸಾಧನೆ ನಮ್ಮ ಜೀವನದ ಒಂದು ಅವಿಭಾಜ್ಯ ಅಂಗ.. ಜೀವನದಲ್ಲಿ ನೂರಾರು ಕವಲುದಾರಿ ಇವೆ. ಪ್ರತಿ ದಾರಿಯ ಉದ್ದಕ್ಕೂ  ಚುಚ್ಚುವ ಮುಳ್ಳಿನಂತೆ ಎಷ್ಟು ಕಷ್ಟಗಳು ಬಂದು  ಹೋಗತ್ತವೆ. ಅವುಗಳನ್ನು ದಾಟಿ ಬಂದರೆ ಅದುವೇ ಸಾಧನೆ ನನ್ನ ಪ್ರಕಾರ. ಹೋಗುವ ದಾರಿಯಲ್ಲೂ ಕೆಟ್ಟ ದಾರಿ ಇರುತ್ತವೆ ಅದರಿಂದ ಮುಂದೆ ಹೋಗದೆ ಹಿಂದೆ ಸರಿದು ಸೂಕ್ತವಾದ ದಾರಿಯಿಂದ ಹೋಗಬೇಕು. ಪ್ರತಿಯೊಬ್ಬರಲ್ಲೂ  ಯಾವುದಾದರೂ ಒಂದು ಪ್ರತಿಭೆ ಇದ್ದೆ ಇರುತ್ತೆ . ಆ ಪ್ರತಿಭೆಯ ಮುಚ್ಚಿದ ಬಾಗಿಲನ್ನು ತೆರೆದು ಮುಂದಕ್ಕೆ ಬಂದರೆ ಸಾಧನೆಯ  ಮೆಟ್ಟಿಲು  ಹತ್ತಲು ಸಾಧ್ಯ .ಮನಸಿದ್ದರೆ ಮಾರ್ಗ ಹೇಳುವಾಗೆ ನಾನು ಸಾಧಿಸಿಯೇ ಸಾಧಿಸುತ್ತೇನೆ ಎಂಬ  ಹಠ, ಛಲ ಇದ್ದರೆ ಏನು ಬೇಕಾದರೂ  ಮಾಡಬಹುದು. ಸೋಲು ಗೆಲುವಿನ ಹಾದಿ ಒಂದು ಸಲ ಸೋತರೆ ಗೆಲುವಿನ ಹಾದಿ ಹೇಗೆ ಇರಬವುದೆಂಬ ಕುತೂಹಲ ಇರುತ್ತದೆ .ಹಾಗು ನಮ್ಮ  ಮೇಲೆ ದೈರ್ಯ ,ನಂಬಿಕೆ  ಮತ್ತು ಆತ್ಮ ವಿಶ್ವಾಸ ಇದ್ದರೆ ಸಾಧನೆಯ ಮೆಟ್ಟಿಲು ಹತ್ತಲು ಸುಲಭ ಆಗುತ್ತದೆ.. ನಿಮ್ಮ ಗುರಿ ಮುಟ್ಟುವವರೆಗೆ ಸಾಧನೆ ಮಾಡುದನ್ನು ಬಿಡಬೇಡಿ. ನಿಮ್ಮ ಪ್ರತಿಭೆ, ನಿಮ್ಮ ಕನಸ್ಸು ನಿಮ್ಮ ಸಾಧನೆ. ನಿಮ್ಮ ಸಾಧನೆಯ ಹೆಜ್ಜೆ ಸಮಾಜದಲ್ಲಿ ಒಳ್ಳೆ ರೀತಿ ಇರಬೇಕು. ಹೊರತು ಕೆಟ್ಟ ದಿಕ್ಕಿಗೆ ಹೋಗಬಾರದು . ಹಾಗು ನಿಮ್ಮ ಗುರಿ ಕನಸಾಗಿಯೇ ಉಳಿಯದೆ ನನಸಾಗುವರೆಗೆ ಸಾಧಿಸಬೇಕು. ಏಳಿ ಎದ್ದೇಳಿ!  ಗುರಿ,ಮುಟ್ಟುವ ತನಕ ನಿಲ್ಲದಿರಿ, ಸ್ವಾಮಿ ವಿವೇಕಾನಂದರು ಹೇಳಿರುವಾಗೆ ನಾವು ಸಾಧನೆ ಮಾಡಬೇಕು.


ಇತ್ತೀಚಿನ ದಿನಗಳಲ್ಲಿ  ಸಾಮಾಜಿಕ ಜಾಲತಾಣದ ಲೋಕಕ್ಕೆ ಮುಳುಗಿ  ಸಾಧನೆಯ ಬಾಗಿಲನ್ನು  ಮುಚ್ಚಿ ಬಿಟ್ಟಿದ್ದಾರೆ . ದಯವಿಟ್ಟು ಸಮಾಜಿಕ ಜಾಲತಾಣದಿಂದ ಹಿಂದೆ ಸರಿದು ಸಾಧನೆಯ ಕಡೆ ಮುಖ ಮಾಡಿ. ನಿಮ್ಮ ತಂದೆ ತಾಯಿ ಎಷ್ಟು ಕಷ್ಟ ಪಟ್ಟು ಸಾಲ ಮಾಡಿಯಾದರೂ ನಿಮ್ಮನ್ನು ಓದಿಸಿದ್ದಾರೆ ಹಾಗಾಗಿ ನೀವು ಕೊಡುವ ಉಡುಗೊರೆಯೆ ನಿಮ್ಮ ಸಾಧನೆ.


 


-ದೀಕ್ಷಿತಾ.ಜೆ 

  ವಾಣಿಜ್ಯ ವಿಭಾಗ 

 ವಿವೇಕಾನಂದ ಕಾಲೇಜು, ಪುತ್ತೂರು


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top