ಪ್ರತಿಭೆ ಇದ್ದರಷ್ಟೇ ಸಾಲದು ಪ್ರಯತ್ನ ಬೇಕು: ದೇವದಾಸ್ ಕಾಪಿಕಾಡ್

Upayuktha
0


ಮಂಗಳೂರು: ವಿದ್ಯಾರ್ಥಿಗಳಲ್ಲಿ ಕೇವಲ ಪ್ರತಿಭೆ ಮಾತ್ರವೇ ಇದ್ದರೆ ಸಾಲದು, ಅದರ ಜೊತೆಗೆ ಪರಿಶ್ರಮವೂ ಅತ್ಯಂತ ಅಗತ್ಯವಾಗಿ ಬೇಕು ಎಂದು ತುಳು ರಂಗಭೂಮಿ ನಟ ಹಾಗೂ ನಿರ್ದೇಶಕ ಹಾಗೂ ಗಾಯಕ ದೇವದಾಸ್ ಕಾಪಿಕಾಡ್ ಅವರು ಹೇಳಿದರು. 


ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ವಿಶ್ವವಿದ್ಯಾನಿಲಯ ಕಾಲೇಜು ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಏರ್ಪಡಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಸಂಗೀತ ಸ್ವರ್ಧೆಯನ್ನು ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. 


ಸಂಗೀತ ಎನ್ನುವುದು ಆರಾಧನೆ. ಶಾರದೆಯ ಅನುಗ್ರಹ. ಸೋಲು-ಗೆಲುವು ಸ್ಪರ್ಧೆಗಷ್ಟೇ ಸೀಮಿತವಾದುದು, ಅದು ಸಂಗೀತಕ್ಕೆ ಅನ್ವಯವಾಗುವುದಿಲ್ಲ. ಮನುಷ್ಯ ಸೋತಾಗ ಮಾತ್ರ ಗೆಲುವಿನ ಅರ್ಥ ತಿಳಿಯಲು ಸಾಧ್ಯ. ನಾವು ಕೂಡ ಬದುಕಿನಲ್ಲಿ ಸಾಕಷ್ಟು ಬಾರಿ ಸೋತ ನಂತರವೇ ಸಾಧನೆ ಮಾಡಲು ಸಾಧ್ಯವಾಯಿತು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. 


ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿ ಗುರುಕಿರಣ್, ಕಾಲೇಜಿನಲ್ಲಿ ಓದುತ್ತಿದ್ದಾಗಿನ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಕಾಲೇಜಿನ ಲಲಿತಾ ಕಲಾ ಕೊಠಡಿಯಲ್ಲಿ ಪ್ರಾರಂಭವಾದ ಸಂಗೀಯ ಅಭ್ಯಾಸ ತನ್ನನ್ನು ಒನ್ನ ಸಾಧಕನನ್ನಾಗಿ ಮಾಡಿದೆ. ಕಾಲೇಜು ಕೇವಲ ವಿದ್ಯೆಯನ್ನು ಕಲಿಸಲಿಲ್ಲ, ಬದಲಾಗಿ ಬದುಕಿನ ರೀತಿಯನ್ನು ಕಳಿಸಿಕೊಟ್ಟಿದೆ. ವಿಭಿನ್ನ ಪರಿಸರ, ವಿಭಿನ್ನ ವಿದ್ಯಾರ್ಥಿ ಬಳಗ, ಗುರುವೃಂದ ಎಲ್ಲವೂ ನನ್ನನ್ನು ಸಂಪೂರ್ಣವಾಗಿ ಬದಲಿಸಿತು. ಕಾಲೇಜಿಗೆ ವ್ಯಕ್ತಿತ್ವ ಬದಲಿಸುವ ಶಕ್ತಿ ಇದ್ದು, ಅದನ್ನು ಸಮರ್ಥವಾಗಿ ಬಳಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. 


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಅಭಿನಂದನೆ ಸಲ್ಲಿಸಿದರು. ಅಲ್ಲದೇ, ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ವೇದಿಕೆಗೆ ಮೆರುಗು ನೀಡಿದ್ದಾರೆ. ವಿದ್ಯಾರ್ಥಿಗಳ ಪ್ರತಿಭೆಯನ್ನು ಮತ್ತಷ್ಟು ಬೆಳಗಲಿ ಎಂದು ಆಶಿಸಿದರು. 


ವಿಶ್ವವಿದ್ಯಾನಿಲಯ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ, ಕಾರ್ಯಕ್ರಮದ ಸಂಚಾಲಕ ಮುರಳೀಧರ ಕಾಮತ್ ಸೇರಿದಂತೆ ಸಾಕಷ್ಟು ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 


ಸಂಗೀತ ಸ್ಪರ್ಧೆಗೆ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಸುಮಾರು 30ಕ್ಕೂ ಹೆಚ್ಚು ಕಾಲೇಜಿನ ವಿವಿಧ ಸಂಗೀತ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.


ಸಂಗೀತ ಸ್ಪರ್ಧೆಯಲ್ಲಿ ವಿಜೇತರ ವಿವಿರ ಇಂತಿದೆ:

ಚಿತ್ರಗೀತೆ (ವೈಯಕ್ತಿಕ): ಪ್ರಥಮ ಬಹುಮಾನ ಶ್ರೇಯಾ ಖಾರ್ವಿ, ಬಿಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ, ದ್ವಿತೀಯ ಬಹುಮಾನ ಶಶಾಂಕ್ ಹೊಳ್ಳ, ವಿಶ್ವವಿದ್ಯಾನಿಲಯ ಕಾಲೇಜು, ತೃತೀಯ ಬಹುಮಾನ ಸಹನಾ ಭಟ್, ಪ್ರೇರಣಾ ಕಾಲೇಜು, ಮಂಗಳೂರು ಹಾಗೂ ರೂಬೆಲ್ ಲೂಕಸ್ ಮೆಂಡೋನ್ನಾ, ಸೆಂಟ್ ಅಲೋಶಿಯಸ್ ಕಾಲೇಜು, ಮಂಗಳೂರು. 


ಭಾವಗೀತೆ (ವೈಯಕ್ತಿಕ): ಪ್ರಥಮ ಬಹುಮಾನ ಪ್ರಕೃತಿ, ಅಕ್ಷಯ ಕಾಲೇಜು, ಪುತ್ತೂರು, ದ್ವಿತೀಯ ಬಹುಮಾನ ಅಶ್ವಿತ, ಎಂಎಆರ್ ಇವಾನಿಸ್ ಕಾಲೇಜ್ ಆಫ್ ಎಜುಕೇಶನ್, ಕಡಬ, ತೃತೀಯ ಬಹುಮಾ ಶ್ವೇತಾ ಕಾಮತ್, ಕೆನರಾ ಕಾಲೇಜು, ಮಂಗಳೂರು. 


ಕರ್ನಾಟಿಕ್ ಶಾಸ್ತ್ರೀಯ (ವೈಯಕ್ತಿಕ): ಗೌತಮ್ ಭಟ್, ಪಿ.ಲಿ. ಮ್ಯಾಪ್ಸ್ ಕಾಲೇಜು, ಮಂಗಳೂರು, ದ್ವಿತೀಯ ಬಹುಮಾನ ವೈಭವಿ ಎಂ. ರಾವ್, ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು, ತೃತೀಯ ಬಹುಮಾನ ಗಾಯತ್ರಿ, ಡಾ. ದಯಾನಂದ ಪೈ ಸತೀಶ್ ಪೈ ಪ್ರಥಮ ದರ್ಜೆ ಕಾಲೇಜು, ಮಂಗಳೂರು. 


ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ (ವೈಯಕ್ತಿಕ): ಪ್ರಥಮ ಬಹುಮಾನ ಕೀರ್ತನ್ ನಾಯ್ಕ್, ವಿಶ್ವವಿದ್ಯಾನಿಲಯ ಕಾಲೇಜು, ದ್ವಿತೀಯ ಬಹುಮಾನ ವೈಷ್ಣವಿ, ಪೂರ್ಣಪ್ರಜ್ಞಾ ಕಾಲೇಜು, ಉಡುಪಿ, ತೃತೀಯ ಬಹುಮಾನ ವರ್ಷಾ ಕಾಮತ್, ಯುಪಿಎಂಸಿ ಕಾಲೇಜು, ಉಡುಪಿ. 


ಯಕ್ಷಗಾನ ಭಾಗವತಿಕೆ (ವೈಯಕ್ತಿಕ): ಪ್ರಥಮ ಬಹುಮಾನ ಶ್ರೀರಕ್ಷಾ ಹೆಗ್ಡೆ, ಪೂರ್ಣಪ್ರಜ್ಞಾ ಕಾಲೇಜು, ಉಡುಪಿ, ದ್ವಿತೀಯ ಬಹುಮಾನ ಪೂಜಾ ಆಚಾರ್, ಬಿಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ, ತೃತೀಯ ಬಹುಮಾನ ಕೌಶಿಕ ಕತ್ತಲ್ಸರ್, ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು. 


ಜಾನಪದ ಗೀತೆ (ಸಮೂಹ): ಪ್ರಥಮ ಬಹುಮಾನ ಪ್ರತೀಕ್ಷಾ ಮತ್ತು ತಂಡ, ಬಿಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ, ದ್ವಿತೀಯ ಬಹುಮಾನ ಬೃಗು ಎ.ಪಿ. ಮತ್ತು ತಂಡ, ಕೆನರಾ ಕಾಲೇಜು, ಮಂಗಳೂರು, ತೃತೀಯ ಬಹುಮಾನ ಅಕ್ಷಿತ ಎಂ. ಮತ್ತು ತಂಡ ಶ್ರೀ ಗೋಕರ್ಣನಾಥೇಶ್ವರ ಕಾಲೇಜ್ ಆಫ್ ಎಜುಕೇಶನ್, ಮಂಗಳೂರು. 


ದೇಶಭಕ್ತಿ ಗೀತೆ (ಸಮೂಹ): ಪ್ರಥಮ ಬಹುಮಾನ ಶ್ರೀ ಲಕ್ಷ್ಮಿ ಮತ್ತು ತಂಡ, ವಿವೇಕಾನಂದ ಕಾಲೇಜು, ಪುತ್ತೂರು, ದ್ವಿತೀಯ ಬಹುಮಾನ ಪ್ರಸಂಜಿತ್ ಮತ್ತು ತಂಡ, ಮ್ಯಾಪ್ಸ್ ಕಾಲೇಜು, ಮಂಗಳೂರು, ತೃತೀಯ ಬಹುಮಾನ ಒಲಿಂಕಾ ಲೋಬೋ ಮತ್ತು ತಂಡ, ಸೆಂಟ್ ಆಲೋಶಿಯಸ್ ಕಾಲೇಜು, ಮಂಗಳೂರು. 


ಒಟ್ಟಾರೆ 13 ಅಂಕಗಳನ್ನು ಪಡೆಯುವ ಮೂಲಕ ಚಾಂಪಿಯನ್ ಆಗಿ ಬಿಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ಹೊರಹೊಮ್ಮಿದರೆ, 12 ಅಂಕಗಳನ್ನು ಪಡೆಯುವ ಮೂಲಕ ವಿಶ್ವವಿದ್ಯಾನಿಲಯ ಕಾಲೇಜು ರನ್ನರ್ ಅಪ್ ಆಗಿ ಹೊರಹಮ್ಮಿದರು. ಮ್ಯಾಪ್ಸ್ ಕಾಲೇಜು, ಮಂಗಳೂರು ಮತ್ತು ಪೂರ್ಣಪ್ರಜ್ಞಾ ಕಾಲೇಜು, ಉಡುಪಿ ವಿದ್ಯಾರ್ಥಿಗಳು ದ್ವಿತೀಯ ರನ್ನರ್ ಅಪ್ ಆದರು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top