ಮಂಗಳೂರು: ಮಂಗಳೂರಿನ ಪಾಂಡೇಶ್ವರದಲ್ಲಿರುವ ಶ್ರೀನಿವಾಸ ವಿಶ್ವವಿದ್ಯಾಲಯದ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ಕಾಮರ್ಸ್ ಇಲ್ಲಿ ಸಂಶೋಧಕಿಯಾಗಿರುವ ಅಖಿಲಾ ರಾವ್ ಇವರು ಸಿದ್ಧಪಡಿಸಿದ “ ಕಾಂಪ್ರೆಹೆನ್ಸಿವ್ ಅನಾಲಿಸಿಸ್ ಆಫ್ ವರ್ಕ್ ಲೈಫ್ ಬ್ಯಾಲೆನ್ಸ್ ಆಫ್ ವಿಮೆನ್ ನರ್ಸಸ್ ಇನ್ ಹಾಸ್ಪಿಟಲ್ಸ್ ಆಫ್ ದಕ್ಷಿಣ ಕನ್ನಡ ಡಿಸ್ಟಿçಕ್ಟ್ ” ಎನ್ನುವ ಶೀರ್ಷಿಕೆಯ ಮಹಾ ಪ್ರಬಂಧಕ್ಕೆ ಶ್ರೀನಿವಾಸ ವಿಶ್ವವಿದ್ಯಾಲಯವು ಪಿ.ಹೆಚ್. ಡಿ. (ಡಾಕ್ಟರ್ ಆಫ್ ಫಿಲಾಸಫಿ) ಪದವಿಯನ್ನು ಪ್ರದಾನ ಮಾಡಿರುತ್ತದೆ.
ಅಖಿಲಾ ರಾವ್‌ರವರು ಶ್ರೀನಿವಾಸ ವಿಶ್ವವಿದ್ಯಾಲಯದ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ಕಾಮರ್ಸ್ ಇಲ್ಲಿ ಸಂಶೋಧನಾ ಪ್ರಾಧ್ಯಾಪಕರಾಗಿರುವ ಡಾ. ಶೈಲಶ್ರೀ ವಿ. ಟಿ. ಇವರ ದಕ್ಷ ಮಾರ್ಗದರ್ಶನದಲ್ಲಿ ಈ ಮಹಾ ಪ್ರಬಂಧವನ್ನು ಸಿದ್ಧಪಡಿಸಿರುತ್ತಾರೆ. ಅಖಿಲಾ ರಾವ್‌ರವರು ಜೆ. ಕೆ. ರಾವ್ ಮತ್ತು ಮಲ್ಲಿಕಾ ಇವರ ಪುತ್ರಿಯಾಗಿದ್ದು ಆದರ್ಶ್ ರಾವ್ ಇವರ ಪತ್ನಿಯಾಗಿರುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ