ಬೆಂಗಳೂರು: ಸತತ ನಾಲ್ಕನೇ ಬಾರಿಗೆ ಲೋಕಸಭಾ ಚುನಾವಣೆ ಎದುರಿಸುತ್ತಿರುವ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸಂಸದ, ಬಿಜೆಪಿಯ ಕಟ್ಟಾಳು.. ನರೇಂದ್ರ ಮೋದಿಯವರ ನೆಚ್ಚಿನ ಸಂಸದ ಪಿ.ಸಿ ಮೋಹನ್ ರವರು ನಾಲ್ಕನೇ ಬಾರಿಯೂ ದೊಡ್ಡ ಗೆಲುವಿನೊಂದಿಗೆ ಸಂಸತ್ ಪ್ರವೇಶಿಸುವ ಉತ್ಸಾಹದಲ್ಲಿದ್ದಾರೆ. ಬೆಂಗಳೂರಿನ ಸೆಂಟ್ರಲ್ ಕ್ಷೇತ್ರದಲ್ಲಿ ಬಿರುಸಿನ ಚುನಾವಣಾ ಪ್ರಚಾರ ಮಾಡ್ತಿರೋ ಪಿಸಿ ಮೋಹನ್ ರವರ ಪಾಲಿಗೆ ಈ ಬಾರಿಯ ಚುನಾವಣಾ ಗೆಲುವಿಗೆ ಮುಖ್ಯ ಅಸ್ತ್ರವಾಗಿ ಕಾಣುತ್ತಿರುವುದೇ ಅವರ ಈ ಮೂರು ಅವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳು ಮಾಡರ್ನ್ ಬೆಂಗಳೂರು ನಿರ್ಮಾಣದ ಹಿಂದಿನ ಅವರ ಕಾರ್ಯ ಯೋಜನೆಗಳು.
ಭವಿಷ್ಯದ, ಆಧುನಿಕ ಬೆಂಗಳೂರು ನಿರ್ಮಾಣದ ದೂರದೃಷ್ಟಿ:
ಬೆಂಗಳೂರು ಮಹಾನಗರ ಹಿಗ್ಗುತ್ತಿದೆ. ಜನ ಸಂಖ್ಯೆಯೂ ವೃದ್ಧಿಯಾಗುತ್ತಿದೆ. ಅದಕ್ಕೆ ಪೂರಕವಾಗಿ ಅಭಿವೃದ್ಧಿ ಕಾರ್ಯಗಳು ಆಗಲೇಬೇಕಾಗಿದೆ. ಇಂಥ ಅಭಿವೃದ್ಧಿ ಕಾರ್ಯಗಳನ್ನು ಸುಸೂತ್ರವಾಗಿ ನಡೆಸುವ ಗುರಿಯನ್ನು ಹೊಂದಿದ್ದೇನೆ ಎಂಬುದಾಗಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ಪಿ.ಸಿ ಮೋಹನ್ ಅವರು ಭರವಸೆಯ ನುಡಿಯನ್ನು ಉಚ್ಚರಿಸಿದ್ದಾರೆ. ನಗರದ ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಗಳಿಗೆ ಹೈಟೆಕ್ ಸ್ಪರ್ಶ ನೀಡುವುದೇ ನನ್ನ ಮುಂದಿನ ಉದ್ದೇಶ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.
ಭವಿಷ್ಯದ ಬೆಂಗಳೂರಿನ ಬಗ್ಗೆ ಸ್ಪಷ್ಟ ಕಲ್ಪನೆ ನನಗಿದೆ. ಪ್ರಮುಖವಾಗಿ ಹೈಸ್ಪೀಡ್ ಸಂಚಾರ ವ್ಯವಸ್ಥೆ, ಅಡೆ ತಡೆಯಿಲ್ಲದ ಪ್ರಯಾಣ ಸೌಕರ್ಯ, ಅತ್ಯಾಧುನಿಕ ಬಡಾವಣೆಗಳು, ಒಂದೇ ಪ್ರದೇಶದಲ್ಲಿ ಮೂಲ ಸೌಕರ್ಯಗಳು ದೊರೆಯುವ ವಸತಿ ಪ್ರದೇಶ ನಿರ್ಮಾಣ ಮಾಡುವುದಕ್ಕೆ ನಾನು ಪಣ ತೊಟ್ಟಿದ್ದೇನೆ. ಯೋಜಿತ ನಗರ ನಿರ್ಮಾಣವನ್ನು ಮಾಡುವ ಉದ್ದೇಶವನ್ನು ಹೊಂದಿದ್ದೇನೆ ಎಂದು ಪಿ.ಸಿ ಮೋಹನ್ ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಈಗ ಅಂತಾರಾಷ್ಟ್ರಿಯ ನಗರ. ಇಲ್ಲಿ ವಾಸ ಮಾಡುವ ಜನರು ಹಾಗೂ ಇಲ್ಲಿಗೆ ನಾನಾ ಉದ್ದೇಶಗಳಿಗೆ ಬರುವ ವಿದೇಶಗರು ಹಾಗೂ ಹೊರರಾಜ್ಯಗಳ ಜನರಿಗೆ ಬ್ರಾಂಡ್ ಬೆಂಗಳೂರಿನ ದರ್ಶನ ಮಾಡಿಸಲಿದ್ದೇನೆ. ಕಳೆದ 15 ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಹಲವಾರು ಕಾರ್ಯಗಳನ್ನು ಕೈಗೊಂಡಿದ್ದೇನೆ. ಮುಂದಿನ ಬಾರಿ ಆಯ್ಕೆಯಾದಾಗಲೂ ಇನ್ನೂ ಹೆಚ್ಚಿನ ಆದ್ಯತೆಯೊಂದಿಗೆ ಕೆಲಸ ಮಾಡುವೆ ಎಂಬುದಾಗಿ ಪಿ.ಸಿ ಮೋಹನ್ ಅವರು ಹೇಳಿದ್ದಾರೆ. ನನ್ನ ಗೆಲುವು ಮತ್ತು ಬಿಜೆಪಿಯ ಅಧಿಕಾರಕ್ಕೆ ಬರುವುದರಿಂದ ಮಾತ್ರ ಇವೆಲ್ಲವೂ ಸಾಧ್ಯ ಎಂದು ಹೇಳಿದ್ದಾರೆ.
ನಾನು ಬಿಜೆಪಿಯ ಕಟ್ಟಾಳು, ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನನ್ನ ಧ್ಯೇಯ:
ಅಭಿವೃದ್ಧಿಗಾಗಿ, ದೇಶದ ಉತ್ತಮ ಭವಿಷ್ಯಕ್ಕಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತರಲೇಬೇಕು ಎಂದು ನಾನು ನನ್ನ ರಾಜಕೀಯ ಜೀವನಕ್ಕಿಂತ ಮೊದಲಿನಿಂದಲೂ ಅಂದುಕೊಂಡಿದ್ದೆ.ಅದನ್ನು ಸಾಕಾರ ಮಾಡಲು ಮನಪೂರ್ವಕ ಶ್ರಮ ವಹಿಸಿರುವೆ. ನಾನು ಎಂದೆಂದಿಗೂ ಬಿಜೆಪಿ ಕಟ್ಟಾಳು ಹಾಗೂ ಬಿಜೆಪಿಯ ವಿಜಯವೇ ನನ್ನ ಧ್ಯೇಯ ಎಂಬುದಾಗಿ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ ಮೋಹನ್ ಅವರು ಹೇಳಿದ್ದಾರೆ.
ನಾಲ್ಕನೇ ಬಾರಿಗೆ ಅದೇ ಕ್ಷೇತ್ರದಲ್ಲಿ ಆಯ್ಕೆ ಬಯಸಿರುವ ಪಿ.ಸಿ ಮೋಹನ್ ಅವರು, ಜನರು ಸಮರ್ಥ ಆಡಳಿತಕ್ಕಾಗಿ ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂಬುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾನು ಭಾರತೀಯ ಜನತಾ ಪಕ್ಷವನ್ನು ಗೆಲ್ಲಿಸಲು ಪಣತೊಟ್ಟಿರುವ ಜನಪ್ರತಿನಿಧಿ. ದೇಶಾದ್ಯಂತ ಬಿಜೆಪಿ ಗೆಲುವು ಸಾಧಿಸಬೇಕು ಎಂದು ಬಯಸಿದವ. ಅದಕ್ಕಾಗಿ ಕಾರ್ಯಕರ್ತನಾಗಿ ದುಡಿದು ಈಗ ಜನಪ್ರತಿನಿಧಿ ಯಾಗಿದ್ದೇನೆ. ಜನರು ಭಾರತೀಯ ಜನತಾ ಪಕ್ಷದ ಪತಾಕೆ ಮುಗಿಲೆತ್ತರಕ್ಕೆ ಏರಲಿ ಎಂದು ಬಯಸಿದ್ದಾರೆ. ಹೀಗಾಗಿ ಬಿಜೆಪಿ ಕಟ್ಟಾಳಾಗಿರುವ ನನ್ನನ್ನು ಗೆಲ್ಲಿಸುವುದು ಖಾತರಿ ಎಂದು ಪಿ.ಸಿ. ಮೋಹನ್ ಅವರು ಹೇಳಿದ್ದಾರೆ.
ಕಳೆದ 15 ವರ್ಷಗಳ ಕಾಲ ಸಂಸದನಾಗಿ ಇದ್ದರೂ ಬಿಜೆಪಿಯ ಕಾರ್ಯಕರ್ತ ಎಂಬಂತೆಯೇ ಪಕ್ಷಕ್ಕಾಗಿ ದುಡಿದಿದ್ದೇನೆ. ಬೆಂಗಳೂರಿನ ಪ್ರತಿ ವಾರ್ಡ್‌ಗಳಲ್ಲಿಯೂ ಬಿಜೆಪಿಗೆ ಬಲ ನೀಡುವ ಕೆಲಸ ಮಾಡಿದ್ದೇನೆ. ಬಿಜೆಪಿಯ ಗೆಲುವಿಗೆ ಹಗಲಿರುಳು ಶ್ರಮಿಸುವ ಕಾರ್ಯಕರ್ತರ ಪಡೆಯನ್ನೇ ನಿರ್ಮಿಸಿದ್ದೇನೆ. ಅವರೆಲ್ಲರೂ ಇಂದು ನನ್ನ ಗೆಲುವು ಬಯಸಿದ್ದಾರೆ. ನನ್ನ ಗೆಲುವಿನೊಂದಿಗೆ ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ಇನ್ನಷ್ಟು ಬಲವಾಗುತ್ತದೆ ಎಂಬುದು ನಿಸ್ಸಂಶಯ ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಿಸಿ ಮೋಹನ್ ರವರ ಕಾರ್ಯವೈಖರಿಯನ್ನ ಗಮನದಲ್ಲಿಟ್ಟುಕೊಂಡು, ಪ್ರಸೆಂಟ್ ಟ್ರೆಂಡ್ ನೋಡುತ್ತಿದ್ದರೆ, ಬೆಂಗಳೂರು ಸೆಂಟ್ರಲ್ ಈ ಬಾರಿಯೂ ಕೂಡ ಅಂದರೆ ಸತತ 4ನೇ ಬಾರಿಗೆ ಕಮಲ ಕಹಳೆಯನ್ನು ಮೊಳಗಿಸುವ ಸೂಚನೆ ಕೊಡುತ್ತಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ