ನಾಮಪತ್ರ ಸಲ್ಲಿಕೆಗೂ ಮೊದಲು ಗೋವು ಮತ್ತು 90 ವಸಂತ ದಾಟಿದ ಹೆತ್ತಬ್ಬೆಗೆ ಕೋಟ ಶ್ರೀನಿವಾಸ ಪೂಜಾರಿಯವರಿಂದ ಪೂಜೆ, ನಮನ
ಇದು ರಾಜಕಾರಣವಲ್ಲ, ರಾಷ್ಟ್ರಕಾರಣ, ಇದು ನೈಜ ರಾಜನೀತಿ. ಕೃಷ್ಣನೂರಿನ ರಾಜಕೀಯದ ನಡೆ ಕೃಷ್ಣ ನಡೆದು ತೋರಿದ ದಾರಿಯಲ್ಲೇ ನಡೆಯಬೇಕು. ಕೋಟ ಪೂಜಾರಿಯವರ ಈ ಮಾದರಿ ಹೆಜ್ಜೆ ಅವರಿಗೆ ಈ ಚುನಾವಣೆಯಲ್ಲಿ ಪ್ರಚಂಡ ವಿಜಯಕ್ಕೆ ಮುನ್ನುಡಿ ಮಾತ್ರವಲ್ಲ; ಓರ್ವ ಬಿಜೆಪಿ ಅಭ್ಯರ್ಥಿಯಾಗಿ ಅವರ ಈ ನಡೆ ರಾಜ್ಯದಲ್ಲಿ ಭಾಜಪ ಮತ್ತು ಮಿತ್ರಪಕ್ಷಗಳಿಗೆ 26+ ಅಧಿಕ ಸ್ಥಾನಗಳಲ್ಲಿ ವಿಜಯಕ್ಕೂ ಕೃಷ್ಣನ ಕೃಪೆಯಿಂದ ನಾಂದಿಯಾಗಲಿದೆ ಹಾಗೂ ದೇಶದಲ್ಲೂ ಮೋದೀಜಿ ನೇತೃತ್ವದ ಬಿಜೆಪಿ ಎನ್‌ಡಿಎ ಮೈತ್ರಿಕೂಟದ 400 + ಸ್ಥಾನಗಳ ವಿಜಯ ದುಂಧುಬಿಯ ನಾದಕ್ಕೆ ಶ್ರುತಿಯಾಗಲಿದೆ.
ಹೌದು.. ಇದುವೇ ರಾಜನೀತಿ ಯಾವುದೇ ಮಹಾ ಉದ್ದೇಶದ ಸತ್ಕಾರ್ಯಗಳಿಗೆ ಮಾತ್ರವಲ್ಲ ರಾಜ ಅಥವಾ ಮಂತ್ರಿಯಾದವನು ಪ್ರತಿನಿತ್ಯ ತನ್ನ ಕಾರ್ಯಾರಂಭದ ಮೊದಲು ಗೋವಿಗೆ ಪೂಜೆ ಸಲ್ಲಿಸಿ ಕರಮುಗಿದು ಪ್ರದಕ್ಷಿಣೆ ಬಂದು ನಮಸ್ಕರಿಸಿಯೇ ಮುಂದಡಿ ಇಡಬೇಕು.
ಇದು ಶ್ರೀ ವಸಿಷ್ಠ ವಿಶ್ವಾಮಿತ್ರರು ಶ್ರೀ ರಾಮನಿಗೆ ತೋರಿದ ಆದರ್ಶ
ಇದು ಶ್ರೀ ವೇದವ್ಯಾಸರು ಧರ್ಮರಾಜನಿಗೆ ಬೋಧಿಸಿದ ರಾಜನೀತಿ
ಇದು ಆಚಾರ್ಯ ಚಾಣಕ್ಯರು ರಾಜ ಚಂದ್ರಗುಪ್ತ ಮೌರ್ಯನಿಗೆ ತೋರಿದ ರಾಜಕಾರ್ಯದ ಸತ್ಪಥ
ಇದು ಶ್ರೀ ಸಮರ್ಥ ರಾಮದಾಸರು ಚಕ್ರವರ್ತಿ ಶಿವಾಜಿಗೆ ಹಾಕಿ ಕೊಟ್ಟ ಮೇಲ್ಪಂಕ್ತಿ
ಇದು ಶ್ರೀ ವಿದ್ಯಾರಣ್ಯರು ವಿಜಯನಗರದ ಹಕ್ಕಬುಕ್ಕರಿಗೆ ತೋರಿದ ರಾಜನಡೆ
ಇದುವೇ ಉಳ್ಳಾಲದ ರಾಣಿ ಅಬ್ಬಕ್ಕ, ಬಾರಕೂರು ಬಸ್ರೂರಿನ ಅರಸರು, ಗಂಗ ಕದಂಬ ರಾಷ್ಟ್ರಕೂಟ ಹೊಯ್ಸಳ ಮೈಸೂರು ಮೊದಲಾದ ಈ ನೆಲವನಾಳ್ದ ಅರಸೊತ್ತಿಗೆಗಳಿಗೆ ತಂತಮ್ಮ ದೊರೆತ ರಾಜಗುರು ಮುಖೇನ ದೊರೆತ ಯುಕ್ತ ನಿರ್ದೇಶನ.
ಗೋವು ಉಳಿದರೆ ರೈತ (ಫಸಲು) ಬೆಳೆದಾನು, ರೈತ ಬೆಳೆದರೆ ಭಾರತ ಉಳಿದೀತು, ಭಾರತ ಉಳಿದರೆ ವಿಶ್ವ ಬೆಳಗೀತು!!
ಗೋವಿನ ಉಳಿವು ವಿಶ್ವಸುಭಿಕ್ಷೆಯ ಮೂಲಸ್ರೋತಸ್ಸು
ಗೋವಿನ ಅಳಿವು ಲೋಕದುರ್ಭಿಕ್ಷೆಯ ಮರಣ ಮೃದಂಗ!
ಈ ಸತ್ಯದೊಂದಿಗೆ ಅಡಿ ಇಟ್ಟರು ಆಗಣ ರಾಜ ಮಹಾರಾಜರು.
ಗೋವಿಗೆ ಸಾಕ್ಷಿಯಾಗಿ ನಡೆದಿತ್ತು ಅರಸೊತ್ತಿಗೆಗಳ ರಾಜನೀತಿ
ದುರಂತವೆಂದರೆ ಪ್ರಜಾಸತ್ತೆಯ ಚಾವಡಿ ಇದನ್ನು ಮರೆಯಿತು.
ಗೋವಿನ ರುಧಿರದೋಕುಳಿ ನೆಲದಿ ಹರಿಸಿತು
ಮತ್ತೆ ಅದೇ ಸತ್ಪರಂಪರೆ ಮೆರೆಯಬೇಕಿದೆ. ಗೋವಿನೊಂದಿಗೆ ನಡೆವ ರಾಜನೀತಿಗೆ ಸೋಲಿಲ್ಲ, ಈ ನೆಲಕ್ಕೂ ದುರ್ಭಿಕ್ಷೆ ಇರಲ್ಲ. ಆದರೆ ಗೋವನ್ನು ಮರೆತು ನಡೆವ ರಾಜಕೀಯಕ್ಕೆ ಗೆಲುವಿಲ್ಲ. ಕ್ಷಾಮ ಡಾಮರವೂ ತಪ್ಪದು. ಈ ಸತ್ಯ ಮತ್ತೆ ಮೆರೆಯಲಿ ಅದಕ್ಕಾಗಿ ಕೋಟ, ಬಿಜೆಪಿ, ಮೋದಿ ಎನ್‌ಡಿಎ ಮತ್ತೊಮ್ಮೆ ದಿಗ್ವಿಜಯ ಸಾಧಿಸಲಿ. ಜೈ ಗೋಮಾತಾ ಜೈ ಭಾರತ ಮಾತಾ
-ಜಿ ವಾಸುದೇವ ಭಟ್ ಪೆರಂಪಳ್ಳಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ