ಪೆರಡಾಲ ದೇವಸ್ಥಾನದಲ್ಲಿ ವಸಂತ ವೇದಪಾಠ ತರಗತಿ ಆರಂಭ

Upayuktha
0


ಬದಿಯಡ್ಕ: ಕಾಸರಗೋಡು ಮತ್ತು ಹೊಸದುರ್ಗ ಹೈವ ಬ್ರಾಹ್ಮಣ ಸಭಾದ ವತಿಯಿಂದ ವರ್ಷಂಪ್ರತಿ ನಡೆದು ಬರುತ್ತಿರುವಂತೆ ಈ ವರ್ಷವೂ ಪೆರಡಾಲ ಶ್ರೀ ಉದನೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಏಪ್ರಿಲ್ 3ರ ಬುಧವಾರ ವಸಂತ ವೇದ ಪಾಠ ಶಿಬಿರವು ಪ್ರಾರಂಭಗೊಂಡಿತು. ಕೋಡಿಯಡ್ಕ ವೇದಮೂರ್ತಿ ಶ್ರೀ ಶಿವರಾಮ ಭಟ್ಟರು ಸ್ವಾಗತ ಹಾಗೂ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಇದೇ ಸಂದರ್ಭದಲ್ಲಿ ಈ ಸಂಸ್ಥೆಯ ನಿಕಟ ಪೂರ್ವ ಅಧ್ಯಕ್ಷರಾದ ಕುಳಮರ್ವ ಶಂಕರನಾರಾಯಣ ಭಟ್ಟರ ಅಗಲಿಕೆಯನ್ನು ಸ್ಮರಿಸಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಮಾಡಲಾಯಿತು. 


ನಿಟ್ಟೆ ವೈದ್ಯಕೀಯ ವಿಭಾಗದ ನಿವೃತ್ತ ಪ್ರಾಂಶುಪಾಲರಾದ ಬಳ್ಳಮಜಲು ಡಾ. ರಾಜೇಂದ್ರ ಪ್ರಸಾದ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈಶ್ವರ ಭಟ್ಟರು ನಿರ್ವಹಿಸಿ ವೇದ ಪಾಠಶಾಲೆಯ ಪ್ರಸ್ತುತತೆಯನ್ನು ವಿವರಿಸಿ ಶುಭ ಹಾರೈಸಿದರು. ಮಂಗಳೂರಿನ ಶಂಕರ ಸಗ್ರಿತ್ತಾಯರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದು, ವೇದ ಪಾಠದ ಬಗ್ಗೆ ಶುಭ ಹಾರೈಸಿದರು.


ಇದೇ ಸಂದರ್ಭದಲ್ಲಿ ಅವರಿಂದ ಸಂಪಾದಿತ ಕೃತಿಯಾದ "ಶ್ರುತಿ ಪ್ರಸೂನಮ್" ಎಂಬ ವೇದ ಮಂತ್ರಗಳು, ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮ ಇತ್ಯಾದಿ ಸಂಗ್ರಹವಿರುವ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು. ದೇವಾಲಯದ ಆಡಳಿತ ಮುಖ್ಯಸ್ಥರಾದ ವೆಂಕಟರಮಣ ಭಟ್ಟರು ಶುಭ ಹಾರೈಸಿದರು. ಒಂದನೇ ತರಗತಿಯ ವಿದ್ಯಾರ್ಥಿಗಳಿಗೆ ಪೆರ್ಮುಖ ಈಶ್ವರ ಭಟ್ಟರ ವತಿಯಿಂದ ಸಂಧ್ಯಾವಂದನೆ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು.


ಖಜಾಂಜಿ ಗೋವಿಂದ ಭಟ್ಟ ಯೇತಡ್ಕ, ಕಾರ್ಯದರ್ಶಿ ಶಾಮಪ್ರಸಾದ ಕಬೆಕ್ಕೋಡು, ವೇದ ಗುರುಗಳಾದ ಸುಬ್ರಹ್ಮಣ್ಯ ಪ್ರಸಾದ, ಮುರಳೀಧರ ಶರ್ಮಾ  ಉಪಸ್ಥಿತರಿದ್ದರು. ಸುಮಾರು 60ರಷ್ಟು ವಿದ್ಯಾರ್ಥಿಗಳು ಹಾಗೂ ರಕ್ಷಕರು ಉಪಸ್ಥಿತರಿದ್ದರು. ಪಟ್ಟಾಜೆ ವೇದಮೂರ್ತಿ ವೆಂಕಟೇಶ ಭಟ್ಟರು ವೇದದ ಮಹತ್ವವನ್ನು ವಿವರಿಸಿ ಧನ್ಯವಾದವನ್ನು ಸಮರ್ಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top