ಬದಿಯಡ್ಕ: ಪೈಕಾನ ವಲವಡಲ ಶ್ರೀ ಮಹಾದೇವ ಮಹಾವಿಷ್ಣು ಸನ್ನಿಧಿಯ ಪ್ರತಿಷ್ಠಾ ವಾರ್ಷಿಕ ಮಹೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಿತು. ಮೀನಾಕ್ಷಿ ಕಲ್ಯಾಣ ಹಾಗೂ ಜಾಂಬವತಿ ಕಲ್ಯಾಣ ಎಂಬ ಪ್ರಸಂಗವನ್ನು ಆಯ್ದುಕೊಳ್ಳಲಾಗಿತ್ತು.
ಜಾಂಬವಂತನಾಗಿ ಡಾ. ಶ್ರೀಶ ಕುಮಾರ ಪಂಜಿತ್ತಡ್ಕ, ಶಿವನಾಗಿ ಶ್ರೀ ಶಶಿಧರ ಕುದಿಂಗಿಲ, ಮೀನಾಕ್ಷಿಯಾಗಿ ಶ್ರೀಮತಿ ವಿದ್ಯಾ ಆನಂದ್, ಶೂರಸೇನನಾಗಿ ಶ್ರೀಹರಿ ಮವ್ವಾರು, ಶ್ರೀಕೃಷ್ಣನಾಗಿ ಕು. ಅಭಿಜ್ಞಾ ಭಟ್, ಪದ್ಮಗಂಧಿನಿಯಾಗಿ ಕು. ಭಾಗ್ಯಶ್ರೀ ಕುಂಚಿನಡ್ಕ, ಪ್ರಸೇನನಾಗಿ ಮಾ. ಮನೀಷ್,
ಸಿಂಹವಾಗಿ ಮಾ. ಮನ್ವಿತ್ ಕೃಷ್ಣ ನಾರಾಯಣಮಂಗಲ, ಪದ್ಮಗಂಧಿನಿ ಹಾಗೂ ಮೀನಾಕ್ಷಿಯ ಬಲಗಳಾಗಿ ಮಾ. ಶ್ರೀಶ ಕುಂಟಾರು, ಕು. ದೃಶ್ಯ ಕುಂಟಾರು, ಕು. ಸ್ಪರ್ಶಾ ಮುಳ್ಳೇರಿಯಾ, ಮಾ. ಶ್ರೇಯಸ್,ಮಾ. ಪ್ರಜ್ವಲ್, ಮಾ. ಶಾನ್ವಿತ್ ಪಾತ್ರಗಳಿಗೆ ಜೀವತುಂಬಿದರು.
ಭಾಗವತರಾಗಿ ವಾಸುದೇವ ಕಲ್ಲೂರಾಯ ಮಧೂರು, ಚೆಂಡೆ ಹಾಗೂ ಮದ್ದಳೆಗಳಲ್ಲಿ ಲಕ್ಷ್ಮೀಶ ಬೇಂಗ್ರೋಡು, ಯಕ್ಷಗಾನ ಗುರು ಸೂರ್ಯನಾರಾಯಣ ಪದಕಣ್ಣಾಯ ಬಾಯಾರು, ಕೃಷ್ಣಮೂರ್ತಿ ಎಡನಾಡು ಹಿಮ್ಮೇಳಗಳಲ್ಲಿ ಸಹಕರಿಸಿದರು. ತುಂಬಿದ ಸಭಾಂಗಣ ಕಾರ್ಯಕ್ರಮದ ಉತ್ತಮ ಗುಣಮಟ್ಟಕ್ಕೆ ಸಾಕ್ಷಿಯಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ