ಕೊಂಕಣಿ ಜನಪದ ಸಂಸ್ಕೃತಿ ಮತ್ತು ನೃತ್ಯ ಶಿಬಿರ ಸಮಾರೋಪ

Upayuktha
0


ಮಂಗಳೂರು: ಕೊಂಕಣಿ ಅಧ್ಯಯನ ಪೀಠ ಮಂಗಳೂರು ಯುನಿವರ್ಸಿಟಿ ಮತ್ತು ಕೊಂಕಣಿ ಭಾಷಾ ವಿದ್ಯಾರ್ಥಿ ಮಂಡಲ, ಕೆನರಾ ಕಾಲೇಜು ಇದರ ಜಂಟಿ ಆಶ್ರಯದಲ್ಲಿ ಕೊಂಕಣಿ ಜನಪದ ಸಂಸ್ಕೃತಿ ಮತ್ತು ನೃತ್ಯ ತರಬೇತಿಯ ಸಮಾರೋಪ ಸಮಾರಂಭವು ಕಾಲೇಜಿನ ಸೆಮಿನಾರ್ ಹಾಲಿನಲ್ಲಿ ನಡೆಯಿತು.


ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಬಿ. ದೇವದಾಸ ಪೈ, ಸಂಶೋಧನಾ ಪ್ರಾಧ್ಯಾಪಕರು, ಶ್ರೀನಿವಾಸ್ ಯುನಿವರ್ಸಿಟಿ, ಅವರು ಕೊಂಕಣಿ ಭಾಷೆಯು ಒಂದು ಸಮೃದ್ಧ ಭಾಷೆಯಾಗಿದ್ದು, ಕೊಂಕಣಿ ಮಾತೃಭಾಷೆಯವರಿಗೆ ಕೊಂಕಣಿ ಭಾಷೆ ಕಲಿಯಬೇಕಾದ ಅನಿವಾರ್ಯತೆ ಇಂದು ಬಂದೊದಗಿದೆ ಎಂದರು.


ಇನ್ನೋರ್ವ ಮುಖ್ಯ ಅತಿಥಿಯಾಗಿದ್ದ ಕಾಲೇಜಿನ ಪ್ರಾಂಶುಪಾಲೆಯಾದ ಡಾ. ಪ್ರೇಮಲತಾ ವಿ. ಅವರು ಕೊಂಕಣಿ ಭಾಷೆಯಲ್ಲಿ ಎಂ.ಎ ಪದವಿಯನ್ನು ಮಾಡಿದ್ದಲ್ಲಿ ವಿಪುಲ ವೃತ್ತಿಪರ ಅವಕಾಶಗಳು ಸಿಗುವುದು ಹಾಗೂ ಅದು ನಮ್ಮ ಭಾಷೆಗೆ ನೀಡಿದ ಗೌರವವೂ ಆಗಿರುವುದು. ಈ ಸಮೃದ್ಧ ಭಾಷೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಹಾಗೂ ನಮ್ಮೆಲ್ಲರ ಜವಾಬ್ದಾರಿ ಇರುವುದು ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಸಂಚಾಲಕರಾದ ಶ್ರೀ. ಸಿಎ ಎಂ. ಜಗನ್ನಾಥ್ ಕಾಮತ್ ಅವರು ಮಕ್ಕಳಿಗೆ ಮಾತೃಭಾಷೆಯ ಒಲವನ್ನು ಮೂಡಿಸುವುದು ಮತ್ತು ಅದರ ಮಹತ್ವವನ್ನು ತಿಳಿಸಿ ಅವರನ್ನು ಸುಸಂಸ್ಕೃತ ಪ್ರಜೆಗಳನ್ನಾಗಿ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ತಂದೆ ತಾಯಿಯ ಕರ್ತವ್ಯ ಎಂದು ನುಡಿದರು.


ತರಬೇತಿ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಮರೋಳಿ ಸಬಿತ ಕಾಮತ್ ಹಾಗೂ ಮಂಗಳ ಭಟ್ ಅವರು ಕೊಂಕಣಿ ಭಾಷೆ, ಸಂಸ್ಕೃತಿ ಮತ್ತು ಇತಿಹಾಸದ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಶಿಬಿರದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿ ಗಳಿಗೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾಕ್ಟರ್ ದೇವದಾಸ್ ಪೈ, ಕಾಲೇಜಿನ ಸಂಚಾಲಕರಾದ ಸಿಎ ಎಂ. ಜಗನ್ನಾಥ್ ಕಾಮತ್, ಕೊಂಕಣಿ ಸಂಘದ ಸಂಯೋಜಕಿ ಶ್ರೀಮತಿ ಸುಜಾತ ಜಿ. ನಾಯಕ್, ಸಹ ಸಂಯೋಜಕಿ ಶ್ರೀಮತಿ ಕೀರ್ತನ ಭಟ್ ಅವರು ಪ್ರಮಾಣ ಪತ್ರಗಳನ್ನು ನೀಡಿದರು. ಕುಮಾರಿ ಸಪ್ತಮಿ ಅವರು ಪ್ರಮಾಣ ಪತ್ರ ಸ್ವೀಕರಿಸುವವರ ಹೆಸರುಗಳನ್ನು ವಾಚಿಸಿದರು.


ಕುಮಾರಿ ಅಶ್ವಿನಿ ಶೆಣೈ ಸ್ವಾಗತಿಸಿ, ಕುಮಾರಿ ಶಾರದ ಶೆಣೈ ಅವರು ಮುಖ್ಯ ಅತಿಥಿಗಳನ್ನು ಪರಿಚಯಿಸಿ, ಕೃತಿಕಾ ಕಾಮತ್ ಅವರು ವಂದಿಸಿದರು.ಕುಮಾರಿ ಸಪ್ತಮಿ ಅವರು ಪ್ರಮಾಣ ಪತ್ರ ಸ್ವೀಕರಿಸುವವರ ಹೆಸರುಗಳನ್ನು ವಾಚಿಸಿದರು. ಕೊಂಕಣಿ ಸಂಘದ ಕಾರ್ಯದರ್ಶಿ ಕುಮಾರಿ ನಿಕಿತಾ ಪೈ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top