ಜೀರೋದಿಂದ ಹೀರೋ ಆಗುವುದು ಹೇಗೆ?: ಗೋಪಾಡ್ಕರ್
ಬದಿಯಡ್ಕ: ಜೀರೋದಿಂದ ಮಕ್ಕಳು ಹೀರೋ ಆಗುವುದು ಹೇಗೆ? ಒಳ್ಳೆಯ ಕೆಲಸಗಳನ್ನು ಮಾಡುವ ಶಿಕ್ಷಕರಿಗೆ ಪೂರಕ ಪರಿಕರಗಳು ದೊರೆತಾದ ಮಕ್ಕಳು ವಿಜಯದತ್ತ ಸಾಗುತ್ತಾರೆ. ಕಲಿಕೆಯ ಆಸಕ್ತಿಯ ಕಡೆಗೆ ಮಕ್ಕಳನ್ನು ಸೆಳೆಯಬೇಕು. ಎಚ್ಚರಿಕೆಯಲ್ಲಿರುವ ದಿನದ ೧೬ ಗಂಟೆಗಳನ್ನು ಹೇಗೆ ಬಳಸಿಕೊಳ್ಳಬೇಕೆಂಬುದನ್ನು ನಾವು ನಿರ್ಧರಿಸಬೇಕು ಎಂದು ಸ್ವರೂಪ ಅಧ್ಯಯನ ಕೇಂದ್ರದ ಮುಖ್ಯಸ್ಥ ಗೋಪಾಡ್ಕರ್ ಹೇಳಿದರು.
ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಕಳೆದ 6 ದಿನಗಳಿಂದ ನಡೆಯುತ್ತಿರುವ `ಸ್ವರೂಪ ಶಿಕ್ಷಣ ಸ್ಮೃತಿ ಮಂಟಪ' ಎಂಟುದಿನಗಳ ಶಿಬಿರದ 7ನೇ ದಿನ ಶಿಬಿರಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು.
ಶಿಬಿರದ ವಿದ್ಯಾರ್ಥಿಗಳ ಪಾಲಕರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ ಕೇವಲ ನಾಲ್ಕು ಗೋಡೆಗಳ ಮಧ್ಯೆ ಅಲ್ಲ ಜೀವನ, ಕಲಿಯುವುದು ಹೇಗೆ ಎಂಬುದನ್ನು ಕಲಿಸುವುದೇ ಈ ಶಿಬಿರದ ಉದ್ದೇಶವಾಗಿದೆ. ಇದು ಅದಲ್ಲ ಎಂಬುದೇ ನಮ್ಮ ಧ್ಯೇಯವಾಕ್ಯವಾಗಿದೆ. ನಮ್ಮದೇ ಆದ ಚಿಂತನೆಗಳನ್ನು ಮಕ್ಕಳಲ್ಲಿ ಪ್ರಯೋಗಿಸಿ ಅದರಿಂದ ಯಶಸ್ಸನ್ನು ಕಂಡಿದ್ದೇವೆ. ಇದೊಂದು ಉತ್ತಮವಾದ ಶಿಕ್ಷಣ ಸಂಸ್ಥೆ ಎಂಬುದಕ್ಕೆ ಇಲ್ಲಿನ ಶಿಬಿರಾರ್ಥಿಗಳೇ ಉದಾಹರಣೆ. ಸಾಧಕ ವಿದ್ಯಾರ್ಥಿಗಳನ್ನು ನೀಡುವ ಸಂಸ್ಥೆಯಾಗಿ ಈ ಶಾಲೆ ಬೆಳೆದಿದೆ ಎಂದರು.
ಶಿಬಿರಾರ್ಥಿಗಳು ತಾವು ಕಲಿತ ವಿದ್ಯೆಗಳನ್ನು ಪ್ರದರ್ಶಿಸಿದರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಶಿಬಿರದ ಕುರಿತು ಮಾತನಾಡಿದರು. ಶಾಲಾ ವ್ಯವಸ್ಥಾಪಕ ಜಯಪ್ರಕಾಶ ಪಜಿಲ, ಪಾಲಕರುಗಳಾದ ಗಂಗಾಧರ ತೆಕ್ಕೆಮೂಲೆ, ಡಾ.ಬೇ.ಸೀ. ಗೋಪಾಲಕೃಷ್ಣ ಭಟ್, ಸುಬ್ರಹ್ಮಣ್ಯ ಭಟ್ ಕೆರೆಮೂಲೆ, ಸುಮಾಡ್ಕರ್, ಅನಂತ ಚಡಗ, ಪಾಲಕರು ಪಾಲ್ಗೊಂಡಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ