"ಕೃಷ್ಣ ರಾಧೆಯನ್ನು.. ಪ್ರೀತಿಸಿದ ಯಾರು ಕಾಣದಂತೆ.." ಕನ್ನಡ ಆಲ್ಬಂ ಹಾಡು ಬಿಡುಗಡೆ

Upayuktha
0

 


ಸುಳ್ಯ: ಪ್ರತಿಬಿಂಬ ಅಮ್ಮ ಅರ್ಪಿಸುವ, ಸಾಮಾಜಿಕ ಹೋರಾಟಗಾರರು ಹಾಗೂ ಸಾಹಿತಿ ಸುಭಾಷ್ ಎಸ್ ರವರ ಸಾಹಿತ್ಯ ಮತ್ತು ನಿರ್ಮಾಣದಲ್ಲಿ ರವಿ ಪಂಬಾರ್ ಸಂಗೀತ ಗಾಯನದಲ್ಲಿ ಮೂಡಿಬಂದಿರುವ "ಕೃಷ್ಣ ರಾಧೆಯನ್ನು.. ಪ್ರೀತಿಸಿದ ಯಾರು ಕಾಣದಂತೆ.." ಎಂಬ ಹಾಡಿನ ಆಲ್ಬಮ್ ನ ಪೋಸ್ಟರ್ ಎಪ್ರಿಲ್ 20ರಂದು ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಕೊಳ್ತಿಗೆಯಲ್ಲಿ ಬಿಡುಗಡೆಯಾಯಿತು.


ಈ ಕನ್ನಡ ಆಲ್ಬಂ ಹಾಡು ಸುಭಾಷ್ ಕ್ರಿಯೇಷನ್ YouTube ಚಾನೆಲ್ ಹಾಗೂ ಫೇಸ್‌ಬುಕ್‌ನಲ್ಲಿ ಏ.21ರಂದು ಪುತ್ತೂರಿನ ಪ್ರಜ್ಞಾ ಆಶ್ರಮದ ದೇವರ ಮಕ್ಕಳೊಂದಿಗೆ ಬಿಡುಗಡೆ ಮಾಡಿ ಪ್ರಸಾರವಾಗಿದೆ. ಈ ಆಲ್ಬಂ ಹಾಡಿನ ಯಶಸ್ವಿಗೆ ಕಾರಣರಾದ ಡಾ. ವಿದುಷಿ ಪವಿತ್ರ ರೂಪೇಶ್ ಪುತ್ತೂರು, ಸುಭಾಷ್ ಮಿಜಾರು, ಶ್ರೀ ಮಂತ್ರ, ಬಾಬು.ಬಿ.ಎಸ್, ದೇವರಾಜ್ ಆರಕ್ಷಕ ಇಲಾಖೆ ಬೆಂಗಳೂರು, ಪ್ರಿಯಾ ಸುಳ್ಯ ಹಾಗೂ ಪ್ರಜ್ಞಾ ಆಶ್ರಮದ ಸದಸ್ಯರು ಹಾಗೂ ದೇವರ ಮಕ್ಕಳು, ರಾಜು ಬೆಂಗಳೂರು, ಅರುಣ್ ರವರು ಈ ಆಲ್ಬಮ್ ಬಿಡುಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top