ಭಾರತ ಸರ್ಕಾರದ ಸೆಕ್ಯುರಿಟೀಸ್ ಮೇಲ್ಮನವಿ ನ್ಯಾಯಮಂಡಳಿ ಮುಖ್ಯಸ್ಥರಾಗಿ ನ್ಯಾ| ದಿನೇಶ್ ಕುಮಾರ್

Upayuktha
0



 ಹೊಸದಿಲ್ಲಿ: ಭಾರತ ಸರ್ಕಾರದ ಹಣಕಾಸು ಮಂತ್ರಾಲಯದ ಸಂಸ್ಥೆಯಾಗಿರುವ ಸೆಕ್ಯುರಿಟೀಸ್ ಮೇಲ್ಮನವಿ ನ್ಯಾಯ ಮಂಡಳಿ (SAT) ಮುಖ್ಯಸ್ಥರನ್ನಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ದಿನೇಶ್ ಕುಮಾರ್ ಅವರನ್ನು ನೇಮಿಸಲಾಗಿದೆ.


ಮುಂಬಯಿಯಲ್ಲಿ ಕೇಂದ್ರ ಕಾರ್ಯಾಲಯವನ್ನು ಹೊಂದಿರುವ ಈ ಮಂಡಳಿಯು ಶಾಸನಬದ್ಧ ಸಂಸ್ಥೆಯಾಗಿದ್ದು ಹಣಕಾಸು ಇಲಾಖೆ ವ್ಯಾಪ್ತಿಯಲ್ಲಿ ಬರುವ ಪಿಂಚಣಿ ನಿಧಿ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಮತ್ತು ವಿಮಾ ನಿಯಂತ್ರಕ ಅಭಿವೃದ್ಧಿ ಪ್ರಾಧಿಕಾರ (IRDAI) ಗಳಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸುವ ಪರಮಾಧಿಕಾರ ಹೊಂದಿರುತ್ತದೆ.


ದಿನೇಶ್ ಕುಮಾರ್ ಅವರ ಅಧಿಕಾರಾವಧಿ ನಾಲ್ಕು ವರ್ಷಗಳಾಗಿರುತ್ತದೆ ಎಂದು ಸರ್ಕಾರಿ ಆದೇಶ ಪ್ರಕಟಣೆ ತಿಳಿಸಿದೆ.


ಇತ್ತೀಚೆಗಷ್ಟೇ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಸ್ಥಾನದಿಂದ ವಯೋನಿವೃತ್ತಿ ಪಡೆದ ದಿನೇಶ್ ಕುಮಾರ್ ಅವರು ಸುದೀರ್ಘ ನ್ಯಾಯಾಂಗ ಅನುಭವ ಹೊಂದಿದ್ದು, ಧಾರ್ಮಿಕವಾಗಿಯೂ ಅನೇಕ ಮಠ ಸಂಸ್ಥಾನಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.


ಶ್ರೀ ಪೇಜಾವರ ಶ್ರೀ ಹರ್ಷ: ನ್ಯಾ .‌ದಿನೇಶ್ ಕುಮಾರ್ ಅವರನ್ನು ಭಾರತ ಸರ್ಕಾರ ಈ ಉನ್ನತ ಹುದ್ದೆಗೆ ನೇಮಕ ಮಾಡಿರುವುದಕ್ಕೆ ಶ್ರೀ ಪೇಜಾವರ ಶ್ರೀಗಳು ತುಂಬು ಸಂತಸ ವ್ಯಕ್ತಪಡಿಸಿದ್ದು ಉತ್ತಮ  ನ್ಯಾಯಾಂಗ ಸೇವಾನುಭವ ಹೊಂದಿರುವ ಅವರು ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಾರೆಂಬ ವಿಶ್ವಾಸವಿದೆ; ಶ್ರೀ ಕೃಷ್ಣನು ಅವರಿಗೆ ಶ್ರೇಯಸ್ಸನ್ನು ಕರುಣಿಸಲಿ ಎಂದು ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top