ರಾಜಕೀಯವೆಂದರೆ ಹೇಗಿರ ಬೇಕು; ಹೇಗಿರ ಬಾರದು, ಹೀಗಿದ್ದರೆ ಚೆಂದ ಅನ್ನುವ ಕುರಿತಾಗಿ ಸಾಕಷ್ಟು ಚಚೆ೯ಗಳು ಬಹು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈಗಲೂ ನಡೆಯುತ್ತಾ ಇದೆ. ಅವರವರ ಮೂಗಿನ ನೇರಕ್ಕೆ ಸರಿ ತಪ್ಪುಗಳನ್ನು ವಿಶ್ಲೇಷಿಸಿಕೊಂಡು ಬಂದಿದ್ದೇವೆ.
ರಾಜಕೀಯ ಅಂದರೆ ಒಳ್ಳೆಯವರ ತಾಣವಲ್ಲ ಕೆಟ್ಟವರು ಆಟವಾಡುವ ತಾಣವೆಂದು ಭಾವಿಸುವಷ್ಟು ಮಟ್ಟಿಗೆ ರಾಜಕಾರಣವನ್ನು ಬೆಳೆಸಿಕೊಂಡು ಬಂದಿದ್ದೇವೆ. ಈ ಎಲ್ಲಾ ಒಡಕು ಕೆಡುಕುಗಳ ಮಧ್ಯದಲ್ಲೂ ಕೆಲವರು ಒಳ್ಳೆಯತನವನ್ನು ಬಿತ್ತಿ ಹೇೂಗಿದ್ದಾರೆ. ಈ ಮಧ್ಯದಲ್ಲಿ ಕೆಟ್ಟವರು ಮುಖ ತೇೂರಿಸಿ ಹೇೂಗಿದ್ದು ಉಂಟು.
ಬಹು ಹಿಂದೆ ಡಾ. ಶಿವರಾಮ ಕಾರಂತರು ಕೂಡಾ ಪ್ರತಿಭಟನಾರ್ಥವಾಗಿ ತಮ್ಮ ಉಮೇದ್ವಾರಿಕೆಯನ್ನು ಕೈಗಾ ವಿಚಾರದಲ್ಲಿ ಕಾರವಾರದಲ್ಲಿ ಮುಂದಿಟ್ಟು ಠೇವಣಿಯನ್ನು ಕಳೆದುಕೊಂಡ ಉದಾಹರಣೆವೂ ನಮ್ಮಮುಂದಿದೆ. ಅದೇ ರೀತಿಯಲ್ಲಿ ಕವಿ ಗೇೂಪಾಲಕೃಷ್ಣ ಅಡಿಗರು ಕೂಡಾ ಮತದಾರರ ಹೃದಯದ ಮೀಡಿತವನ್ನು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಪರೀಕ್ಷಿಸಿ ಸೇೂಲುಂಡ ಅನುಭವವೂ ಕವಿ ಅಡಿಗರಿಗೂ ಆಗಿದೆ. ಅದೇ ರೀತಿ ನಮ್ಮ ಟಿ.ಎ.ಪೈ ಯವರು ಕೂಡಾ ಒಬ್ಬ ಶ್ರೇಷ್ಠ ಪಾರ್ಲಿಮೆಂಟೇರಿಯನ್ ಆಗಿ ತಮ್ಮ ಛಾಪನ್ನು ಒತ್ತಿ ಉಡುಪಿಯಲ್ಲಿಯೇ ಸೋಲುಂಡ ನಿದರ್ಶನವೂ ನಮ್ಮ ಮುಂದಿದೆ.
ಇದನ್ನೆಲ್ಲಾ ಕಂಡ ಮೇಲೆ ಈಗ ನನಗೆ ನೆನಪಾಗಿದ್ದು ಬೆಂಗಳೂರಿನ ಗ್ರಾಮೀಣ ಲೇೂಕ ಸಭಾ ಕ್ಷೇತ್ರ. ಇಂದು ಈ ಕ್ಷೇತ್ರದಲ್ಲಿ ರಾಜಕೀಯ ಹೇೂರಾಟದಲ್ಲಿ ಹ್ಯಾಟ್ರಿಕ್ ವೀರ ಅನ್ನಿಸಿಕೊಂಡ ಡಿ.ಕೆ. ಸುರೇಶ್ ರಾಜಕೀಯವಾಗಿ ಆಕ್ಷೇತ್ರದಲ್ಲಿ ಸಾಕಷ್ಟು ಗುರುತಿಸಿ ಕೊಂಡವರು. ಧನಬಲ ಜನಬಲ ಎಲ್ಲವೂ ಇದೆ. ಇಂತಹ ಬಂಡೆಯನ್ನು ಸುಲಭವಾಗಿ ಪುಡಿಗಟ್ಟಲು ಸಾಧ್ಯವಿಲ್ಲ ಅನ್ನುವ ಕಾರಣಕ್ಕಾಗಿಯೇ ಬಿಜೆಪಿ ವರಿಷ್ಠರು ರಾಜ್ಯದ ವೈದ್ಯಕೀಯ ರಂಗದಲ್ಲಿ ಅದ್ವಿತೀಯ ಸಾಧನೆ ಜನಮನ್ನಣೆ ಗಳಿಸಿದ ದೇವೇಗೌಡರ ಖಾಸಾ ಅಳಿಯ ಡಾ. ಎನ್.ಸಿ. ಮಂಜುನಾಥರನ್ನೆ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರಕ್ಕೆ ಇಳಿಸಿ ಬಿಟ್ಟಿದ್ದಾರೆ.
ಡಾ. ಮಂಜುನಾಥ ಬರೇ ಹೃದಯ ತಜ್ಞ ಮಾತ್ರವಲ್ಲ ದೀನ ದಲಿತರ ಬಡ ಬಗ್ಗರ ನೇೂವಿನ ಆಳವನ್ನು ಕಣ್ಣಿನಲ್ಲಿಯೇ ಅಳೆಯ ಬಲ್ಲ ಶ್ರೇಷ್ಠ ಹೃದಯ ಶೀಲ ವ್ಯಕ್ತಿ ಅನ್ನುವುದರಲ್ಲಿ ಎರಡುಮಾತಿಲ್ಲ. ಇತ್ತೀಚೆಗೆ ಪತ್ರಿಕೆಗೆ ನೀಡಿದ ಸಂದರ್ಶನ ಒಂದರಲ್ಲಿ ಪತ್ರಕರ್ತರು ಅವರಿಗೆ ಕೇಳಿದ ಒಂದು ಪ್ರಶ್ನೆ ಅಂದರೆ "ನಿಮ್ಮ ರಾಜಕೀಯ ಬದುಕು ನಿಲುವು ಧರ್ಮ ಕೇಂದ್ರಿತವಾಗಿರತ್ತಾ?. ಅದಕ್ಕೆ ಅವರು ನೀಡಿದ ಉತ್ತರ ಎಷ್ಟು ಮಾರ್ಮಿಕವಾಗಿತ್ತು. "ನನ್ನ ರಾಜಕೀಯ ನಿಲುವು ಬದುಕು ಧರ್ಮ ಕೇಂದ್ರಿತವಾಗಿರುವುದಿಲ್ಲ. ಬದಲಾಗಿ ಜನ ಕೇಂದ್ರಿತವಾಗಿರುತ್ತದೆ. ಮಾತ್ರವಲ್ಲ ನನ್ನ ನಿಜ ಬದುಕಿನಲ್ಲಿ ಕೂಡಾ ಧರ್ಮ ಜಾತಿ ನೇೂಡಿ ನನ್ನ ವೈದ್ಯಕೀಯ ಸೇವೆಯನ್ನು ನೀಡಿದವನ್ನಲ್ಲ". ಇದು ನಮ್ಮ ಡಾಕ್ಟರ್ ರವರ ಹೃದಯ ವೈಶಾಲ್ಯ ಗುಣ.
ಹಾಗಾದರೆ ಇಂತಹ ಸದ್ಗುಣಿ ಬೆಂಗಳೂರಿನ ಗ್ರಾಮೀಣ ಚುನಾವಣೆಯಲ್ಲಿ ಗೆಲ್ಲಬಹುದೇ..? ನೂರಕ್ಕೆ ನೂರು ಗೆದ್ದೇಗೆಲ್ಲುತ್ತಾರೆ ಅನ್ನುವುದು ಕಷ್ಟ. ಯಾಕೆಂದರೆ ನಮ್ಮ ಮತದಾರರ ಸಾಮಾನ್ಯ ಮನಸ್ಥಿತಿ ಹೇಗಿದೆ ಅಂದರೆ ರಾಜಕೀಯಕ್ಕೆ ರಾಜಕಾರಣಿಗಳೇ ಬೇಕು. ಯಾವುದೊ ಒಬ್ಬ ಸಾಹಿತಿಯೋ, ವೈದ್ಯರೊ ಪ್ರೊಫೆಸರೊ ಚುನಾವಣೆಗೆ ನಿಂತರೆ ಮೊದಲು ಕೇಳುವ ಪ್ರಶ್ನೆ "ನಿಮಗೆ ಇದು ಬೇಡವಾಗಿತ್ತು". ಅಂದರೆ ನೀವು ಒಳ್ಳೆಯವರು ಹಾಗಾಗಿ ಇದು ನಿಮಗೆ ಬೇಡವಾಗಿತ್ತು ಅನ್ನುವ ಅನುಕಂಪದ ಮಾತು. ಕೊನೆಗೂ ನಮ್ಮ ಸೇೂಲನ್ನು ಇದೇ ಸಂತಾಪದ ನುಡಿಯಲ್ಲಿ ಸಂತೈಸಿಕೊಳ್ಳ ಬೇಕಾದ ಪರಿಸ್ಥಿತಿ. ಇದು ಉತ್ತಮರೆನ್ನಿಸಿಕೊಂಡವರು ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಅನುಭವಿಸಬೇಕಾದ ವಾಸ್ತವಿಕತೆಯ ಚಿತ್ರಣವೂ ಹೌದು.
-ಪ್ರೊ. ಕೊಕ್ಕರ್ಣೆ ಸುರೇಂದ್ರ ನಾಥ ಶೆಟ್ಟಿ ಉಡುಪಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ